BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ.

BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, ವಿದ್ಯಾ, ರಂಜಿತಾ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು BBMP ಯವರು ಮನವಿ ಮಾಡಿದ್ದಾರೆ. ಆದರೆ ವಾಣಿ, ವಿದ್ಯಾ, ರಂಜಿತಾ ಟೆಸ್ಟಿಂಗ್​ಗೆ ನಿರಾಕರಿಸಿದ್ದಾರೆ. ಕೊನೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಮೊಬೈಲ್​ಗೆ ಬಂದ ಓಟಿಪಿಯನ್ನೂ ಪಡೆದಿದ್ದಾರೆ. ನಂತರ ಸೆಪ್ಟೆಂಬರ್ 26 ರಂದು ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಟೆಸ್ಟ್ ಮಾಡಿಸದೆ ಪಾಸಿಟಿವ್ ಹೇಗೆ ಬಂತೆಂಬ ಪ್ರಶ್ನೆ ಈ ಮೂವರೂ ಮಹಿಳೆಯರಿಗೆ ಕಾಡುತ್ತಿದೆ. ಹಾಗಾದ್ರೆ ಪಾಸಿಟಿವ್ ಲೆಕ್ಕ ತೋರಿಸಿ ಹಣ ನುಂಗುವ ಪ್ಲ್ಯಾನ್​? ಮಾಡಲಾಗುತ್ತಿದೆಯಾ. ಈ ರೀತಿ ಅದೆಷ್ಟು ಮಂದಿಗೆ ಸುಳ್ಳು ಹೇಳಿ ಚಿಕಿತ್ಸೆ ನೆಪದಲ್ಲಿ ಹಣ ಕೀಳುತ್ತಿದ್ದಾರೆ ಎಂಬ ಅನುಮಾನಗಳು ಬರುತ್ತಿವೆ. ಸರ್ಕಾರವೇ ಹೀಗೆ ಸುಲಿಗೆ ಮಾಡಲು ನಿಂತರೆ ಬಡ ಜನ ಎಲ್ಲಿಗೆ ಹೋಗಬೇಕು. ರಾಜ್ಯ ಸರ್ಕಾರ ಈಗಲಾದರೂ ಈ ಬಗ್ಗೆ ಗಮನ ಹರಿಸಿ ಜನರನ್ನು ಕಾಪಾಡಬೇಕಿದೆ.

Related Tags:

Related Posts :

Category:

error: Content is protected !!