ಪ್ರೇಮಿಗಳ ದಿನಾಚರಣೆಗೆ ವರ್ಲ್ಡ್‌ ಫೇಮಸ್‌ ಲವ್ವರ್, ಇದೇ ನನ್ನ ಕೊನೆ ಲವ್ ಸ್ಟೋರಿ ಎಂದ ವಿಜಯ್‌ ದೇವರಕೊಂಡ

ವಿಜಯ್ ದೇವರಕೊಂಡ. ಸೌತ್‌ ಸಿನಿರಂಗದ ಸೆನ್ಷೇಷನ್. ಸಿನಿಪ್ರಿಯರ ಹಾರ್ಟ್‌ ಫೇವರಿಟ್‌ ನಟ. ಚಿತ್ರರಂಗದ ಬಹುಬೇಡಿಕೆಯ ಸ್ಟಾರ್. ಈ ಸ್ಟಾರ್‌ ಈಗ ಕಂಪ್ಲೀಟ್‌ ಬದಲಾಗಬೇಕು ಅಂದುಕೊಂಡಿದ್ದಾರೆ. ವಿಜಯ್‌ ತಮ್ಮ ಮುಂದಿನ ಸಿನಿಮಾ ವರ್ಲ್ಡ್‌ ಫೇಮಲ್‌ ಲವ್ವರ್‌ ಮೂಲಕ ಬದಲಾವಣೆಗೆ ಮುಂದಾಗಿದ್ದಾರೆ.

ವಿಜಯ್ ದೇವರಕೊಂಡ ಅಂದಾಕ್ಷಣ ಕಣ್ಣ ಮುಂದೆ ಬರೋದೇ ಅವ್ರ ಲವ್‌ ಸ್ಟೋರಿ ಸಿನಿಮಾಗಳು. ಯಾಕಂದ್ರೆ ವಿಜಯ್ ಮಾಡಿರೋ ಸಿನಿಮಾಗಳಲ್ಲೂ ಭಿನ್ನ. ಭಿನ್ನ ಪ್ರೇಮ್‌ ಕಹಾನಿಗಳನ್ನ ಹೇಳ್ತವೆ. ಈಗ ಮತ್ತದೇ ಪ್ರೇಮ ಕಥೆಯುಳ್ಳ ವರ್ಲ್ಡ್‌ ಫೇಮಸ್‌ ಲವ್ವರ್‌ ಸಿನಿಮಾದೊಂದಿಗೆ ಬರ್ತಿದ್ದಾರೆ.

ವರ್ಲ್ಡ್‌ ಫೇಮಸ್‌ ಲವ್ವರ್ ಟೈಟಲ್ಲೇ ಸಿನಿಮಾ ಕಥೆಯನ್ನ ಹೇಳಿಬಿಡುತ್ತೆ. ಸಿನಿಮಾ ಹೆಸ್ರು ಕೇಳಿದಾಕ್ಷಣ ಇದೊಂದು ಪಕ್ಕಾ ಲವ್‌ ಸ್ಟೋರಿ ಅನ್ನೋದು ಗೊತ್ತಾಗಿ ಬಿಡುತ್ತೆ. ಈಗ ರಿಲೀಸ್‌ ಆಗಿರೋ ವರ್ಲ್ಡ್‌ ಫೇಮಸ್‌ ಲವ್ವರ್‌ ಟ್ರೇಲರ್‌ ಒಂದಲ್ಲಾ ಎರಡಲ್ಲಾ ನಾಲ್ಕು ಪ್ರೇಮಪುರಾಣಗಳನ್ನ ಬಿಚ್ಚಿಡುತ್ತಿದೆ.

ಈ ಚಿತ್ರದ ಫರ್ಸ್ಟ್‌ ಪೋಸ್ಟರ್ ರಿಲೀಸ್ ಆದಾಗ ಸಾಕಷ್ಟ ನೆಗೆಟಿವ್ ಟಾಕ್‌ ಹುಟ್ಟಿಕೊಂಡಿತ್ತು. ದೇವರಕೊಂಡ ಮತ್ತದೇ ಲವ್‌ ಸ್ಟೋರಿಯನ್ನ ಹೇಳೋಕೆ ಹೊರಟಿದ್ದಾರೆ. ಜೊತೆಗೆ ಅರ್ಜುನ್‌ ರೆಡ್ಡಿಯಂತೇ ಇದೆ ಅಂತ ಫಸ್ಟ್ ದೇವರಕೊಂಡ ಅಭಿಮಾನಿಗಳು ಮುನಿಸಿಕೊಂಡಿದ್ರು. ಹಾಗಾಗಿ ಟ್ರೇಲರ್‌ ರಿಲೀಸ್ ನಂತ್ರ ದೇವರಕೊಂಡ ತಮ್ಮ ಅಭಿಮಾನಿಗಳಿಗೆ ಹೊಸ ಪ್ರಾಮಿಸ್‌ ಮಾಡಿದ್ದಾರೆ. ಇದುವೇ ವಿಜಯ್‌ ದೇವರಕೊಂಡನ ಕೊನೆಯ ಲವ್ ಸ್ಟೋರಿ ಆಗಲಿದ್ಯಂತೆ.

ಹೈದರಾಬಾದ್‌ನಲ್ಲಿ ಟ್ರೇಲರ್‌ ಲಾಂಚ್‌ ವೇಳೆ ವಿಜಯ್‌ ದೇವರಕೊಂಡ ಕೊಂಚ ಭಾವುಕರಾಗಿ ಮಾತನಾಡಿದ್ರು. ಇಲ್ಲೀವರೆಗೂ ಲವ್ ಸ್ಟೋರಿ ಸಿನಿಮಾಗಳನ್ನ ಮಾಡುತ್ತಾ ಬಂದಿರೋ ವಿಜಯ್‌ ದೇವರಕೊಂಡನಿಗೆ ಬದಲಾಗ್ಬೇಕು ಅನ್ನಿಸಿದ್ಯಂತೆ. ವರ್ಲ್ಡ್ ಫೇಮಸ್ ಲವ್ವರ್ ಚಿತ್ರವೇ ವಿಜಯ್‌ ಕೊನೆಯ ಲವ್‌ ಸ್ಟೋರಿ ಚಿತ್ರವಾಗಲಿದ್ಯಂತೆ.

ಇನ್ನು ಈ ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಐಶ್ವರ್ಯ ರಾಜೇಶ್, ರಾಶಿ ಖನ್ನಾ, ಕ್ಯಾತರಿನ್‌ ಥೆರೆಸ್ಸಾ, ಇಝಾ ಬೆಲ್ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿನ 4 ವಿಭಿನ್ನ ಪ್ರೇಮಕಥೆಯಲ್ಲಿನ ನಾಲ್ವರು ನಾಯಕಿಯರಿಗೂ ವಿಜಯ್‌ ಒಬ್ಬನೇ ನಾಯಕ. ಈ ಚಿತ್ರಕ್ಕೆ ನಿರ್ದೇಶಕ ಕ್ರಾಂತಿ ಮಾಧವ್‌ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಫೆಬ್ರವರಿ 14ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!