ದಕ್ಷಿಣ ರಷ್ಯಾದ ಕ್ರಿಮ್ಸ್ಕ್ ನಗರದಲ್ಲಿ ಗುಂಡು ಹಾರಿಸಿದ 66ರ ಹರೆಯದ ವ್ಯಕ್ತಿ; ಮೂವರು ಸಾವು

ವೈಯಕ್ತಿಕ ಹಗೆತನದಿಂದ ದಾಳಿ ನಡೆಸಿದ ವ್ಯಕ್ತಿ ಇಬ್ಬರು ಪರಿಚಯಸ್ಥರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಆರಂಭಿಕ ಸೂಚನೆಗಳು ಸೂಚಿಸಿವೆ

ದಕ್ಷಿಣ ರಷ್ಯಾದ ಕ್ರಿಮ್ಸ್ಕ್ ನಗರದಲ್ಲಿ ಗುಂಡು ಹಾರಿಸಿದ 66ರ ಹರೆಯದ ವ್ಯಕ್ತಿ; ಮೂವರು ಸಾವು
ಗುಂಡಿನ ದಾಳಿ ನಡೆಸುತ್ತಿರುವ ವ್ಯಕ್ತಿ
TV9kannada Web Team

| Edited By: Rashmi Kallakatta

Nov 25, 2022 | 12:44 PM

66 ವರ್ಷದ ವ್ಯಕ್ತಿಯೊಬ್ಬ ಗುರುವಾರ ದಕ್ಷಿಣ ರಷ್ಯಾದ (Russia) ಕ್ರಿಮ್ಸ್ಕ್ (Krymsk) ನಗರದಲ್ಲಿ ಮೂರು ಜನರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗೆ ಗುಂಡು ಹಾರಿಸಿದ ನಂತರ ಆ ವ್ಯಕ್ತಿ ಸ್ವತಃ ಗುಂಡು ಹಾರಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಗುಂಡೇಟಿಗೆ ಬಲಿಯಾದ ಇಬ್ಬರು ದಾಳಿಕೋರನಿಗೆ ಪರಿಚಿತರಾಗಿದ್ದರು ಎಂದು ರಷ್ಯಾದಲ್ಲಿನ ಪ್ರಮುಖ ಅಪರಾಧಗಳನ್ನು ತನಿಖೆ ಮಾಡುವ ತನಿಖಾ ಸಮಿತಿಯ ಸ್ಥಳೀಯ ಶಾಖೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ವೈಯಕ್ತಿಕ ಹಗೆತನದಿಂದ ದಾಳಿ ನಡೆಸಿದ ವ್ಯಕ್ತಿ ಇಬ್ಬರು ಪರಿಚಯಸ್ಥರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಆರಂಭಿಕ ಸೂಚನೆಗಳು ಸೂಚಿಸಿವೆ ಎಂದು ಅದು ಹೇಳಿದೆ. ಗುಂಡೇಟಿಗೆ ಬಲಿಯಾದ ಮೂರನೇ ವ್ಯಕ್ತಿ ಯಾರು ಎಂದು ಗುರುತು ತಿಳಿದು ಬಂದಿಲ್ಲ. ಗಾಯಗೊಂಡ 61 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊ ನೋಡಿದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿರುವುದು ಕಾಣುತ್ತದೆ. ವಿಡಿಯೊದ ಕೊನೆಯಲ್ಲಿ ನೆಲದ ಮೇಲೆ ಮಲಗಿರುವ ಯಾರೋ ವ್ಯಕ್ತಿಗೆ ಹತ್ತಿರದಿಂದ ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ.

ಕ್ರಿಮ್ಸ್ಕ್ ರಷ್ಯಾದ ದಕ್ಷಿಣ ಕ್ರಾಸ್ನೋಡರ್ ಪ್ರದೇಶದಲ್ಲಿ ಕ್ರಿಮಿಯನ್ ಪರ್ಯಾಯ ದ್ವೀಪದ ಸಮೀಪವಿರುವ ಒಂದು ಸಣ್ಣ ನಗರವಾಗಿದೆ. ಇದನ್ನು 2014ರಲ್ಲಿ ರಷ್ಯಾ ಏಕಪಕ್ಷೀಯವಾಗಿ ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada