ಹಸಿವಿನಿಂದ ತತ್ತರಿಸುತ್ತಿದೆ ಅಫ್ಘಾನಿಸ್ತಾನ; ಎಲ್ಲ 34 ಪ್ರಾಂತ್ಯಗಳಲ್ಲಿ ಭೀಕರ ಬರ

Drought in Afghanistan: ಕೃಷಿ ಮತ್ತು ಅರಣ್ಯ ನಿರ್ವಹಣೆಗೆ ಗಮನವೇ ನೀಡದ ಕಾರಣ ಬಂಜರು ಭೂಮಿ ಹೆಚ್ಚಾಗಿದೆ. ಅಂತರ್ಜಲವೂ ಬತ್ತಿಹೋಗಿದೆ.

ಹಸಿವಿನಿಂದ ತತ್ತರಿಸುತ್ತಿದೆ ಅಫ್ಘಾನಿಸ್ತಾನ; ಎಲ್ಲ 34 ಪ್ರಾಂತ್ಯಗಳಲ್ಲಿ ಭೀಕರ ಬರ
ಹಳ್ಳಿಗಳಲ್ಲಿ ರೈತರು ಇದ್ದರೆ ತಾನೆ ಬೇಸಾಯ? ಅಫ್ಘಾನಿಸ್ತಾನದ ಆಹಾರ ಸಂಕಷ್ಟದ ಮೂಲ ಇದು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 27, 2021 | 4:46 PM

ತಾಲಿಬಾನ್ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದ ಜನರು ಶಸ್ತ್ರ ಸಂಘರ್ಷದೊಂದಿಗೆ ಭೀಕರ ಬರದಿಂದಲೂ ನಲುಗುತ್ತಿದ್ದಾರೆ. ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರರಾಷ್ಟ್ರೀಯ ಸಮುದಾಯ ಮಾನವೀಯ ದೃಷ್ಟಿಯಿಂದ ಶೀಘ್ರ ನೆರವಿಗೆ ಧಾವಿಸದಿದ್ದರೆ ಅಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ, ನಿರ್ಮಾಣವಾಗಬಹುದಾದ ಮಾನವೀಯ ಬಿಕ್ಕಟ್ಟನ್ನು ಊಹಿಸಲೂ ಆಗುವುದಿಲ್ಲ ಎಂದು ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಅಫ್ಘಾನಿಸ್ತಾನದ 10 ಕೋಟಿಗೂ ಹೆಚ್ಚು ಜನರಿಗೆ ಚಳಿಗಾಲ ಕಾಲಿಡುವ ಮೊದಲು ಆಹಾರ ತಲುಪಿಸಬೇಕಿದೆ. ಒಮ್ಮೆ ಚಳಿ ತೀವ್ರಗೊಂಡು ಕಣಿವೆಗಳು ಮುಚ್ಚಿಹೋದರೆ ಸಂಕಷ್ಟ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುತ್ತದೆ. ಅಮೆರಿಕ ಪ್ರಭಾವದೊಂದಿಗೆ ಆಡಳಿತ ನಿರ್ವಹಿಸುತ್ತಿದ್ದ ಸರ್ಕಾರ ಅಧಿಕಾರದಲ್ಲಿದ್ದಷ್ಟು ಕಾಲ ಅಲ್ಲಿ ವಿದೇಶಿ ದೇಣಿಗೆಯ ನೆರವನಿಂದ ಕೆಲ ಸರ್ಕಾರೇತರ ಸಂಸ್ಥೆಗಳು ಜನರಿಗೆ ಆಹಾರ ಒದಗಿಸುತ್ತಿದ್ದವು. ಇದೀಗ ತಾಲಿಬಾನ್ ಆಡಳಿತ ಆರಂಭವಾಗುವುದರೊಂದಿಗೆ ಈ ಚಟುವಟಿಕೆಗಳ ಮೇಲೆಯೂ ಕಾರ್ಮೋಡ ಕವಿದಿದೆ. ಬಹುತೇಕ ಸಂಸ್ಥೆಗಳು ಮಾನವೀಯ ನೆರವು ಯೋಜನೆಯನ್ನು ಸ್ಥಗಿತಗೊಳಿಸಿವೆ.

ಕಳೆದ ಹಲವು ದಶಕಗಳಿಂದ ನೀರು ಮತ್ತು ಆಹಾರ ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಮತ್ತು ಸಂಘರ್ಷದ ಮುಖ್ಯ ಕಾರಣ ಎನಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಫ್ಘಾನಿಸ್ತಾನದ ಪಾಲಿಗೆ ಇದು 2ನೇ ಬರಗಾಲ. ಇದರ ಜೊತೆಗೆ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಅಲ್ಲಿನ ಪರಿಸರವೂ ತೀವ್ರಗತಿಯಲ್ಲಿ ಹಾಳಾಗಿದೆ. ಕೃಷಿ ಮತ್ತು ಅರಣ್ಯ ನಿರ್ವಹಣೆಗೆ ಗಮನವೇ ನೀಡದ ಕಾರಣ ಬಂಜರು ಭೂಮಿ ಹೆಚ್ಚಾಗಿದೆ.

1950ರಿಂದ 2021ರ ಅವಧಿಯಲ್ಲಿ ದೇಶದ ಸರಾಸರಿ ಉಷ್ಣಾಂಶ 1.8 ಡಿಗ್ರಿ ಸೆಂಟಿಗ್ರೇಡ್​ನಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಮಳೆಯೂ ಹದತಪ್ಪಿದ್ದು, ಇದ್ದಕ್ಕಿದ್ದಂತೆ ಮೋಡದ ಬಸಿರು ಬರಿದಾಗುವ ವರದಿಗಳು ಹೆಚ್ಚಾಗುತ್ತಿವೆ. ಒಟ್ಟು ಮಳೆ ಅವಧಿಯಲ್ಲಿ ಸುರಿಯಬೇಕಾದ ಶೇ 25ರಷ್ಟು ಮಳೆ ದಿಢೀರ್​ ಎಂದು ಭೂಮಿಗೆ ಅಪ್ಪಳಿಸುತ್ತಿದೆ. ಹೀಗಾಗಿ ಭೂಮಿಯೂ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹೀರಿ, ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಸಹಜವಾಗಿಯೇ ಅಂತರ್ಜಲ ಬತ್ತಿಹೋಗುತ್ತಿದೆ. ಮರಗಳು ಇಲ್ಲದಿರುವುದು ಈ ದುರಂತಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಮೊದಲೇ 1.4 ಕೋಟಿ ಜನರು, ಅಂದರೆ ಅಫ್ಘಾನಿಸ್ತಾನದ ಒಟ್ಟು ಜನಸಂಖ್ಯೆಯ ಶೇ 35ರಷ್ಟು ಮಂದಿ ದಿನದಲ್ಲಿ ಒಮ್ಮೆಯೂ ಊಟ ಸಿಗದೆ ಪರದಾಡುತ್ತಿದ್ದರು. ಅಫ್ಘಾನಿಸ್ತಾನದಲ್ಲಿರುವ ಐದು ವರ್ಷ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ನಗರ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಮೊದಲು ತಾಲಿಬಾನ್ ಹಳ್ಳಿಗಳನ್ನು ವಶಪಡಿಸಿಕೊಂಡಿತ್ತು. ಬಹುತೇಕ ಹಳ್ಳಿಗಳಲ್ಲಿ ಈ ವರ್ಷದ ಬೇಸಾಯ ಹಾಳಾಗಿದೆ. ವಿದೇಶಗಳಿಗೆ ಹೋಗಲು ವಿಮಾನ ನಿಲ್ದಾಣದಲ್ಲಿ ನಿಂತಿರುವವರ ಬಗ್ಗೆ ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಆದರೆ ದೇಶದೊಳಗೆ ಸ್ಥಳಾಂತರಗೊಂಡವರ ಸಂಖ್ಯೆಯೂ ದೊಡ್ಡಪ್ರಮಾಣದಲ್ಲಿದೆ. ಹಳ್ಳಿಗಳಲ್ಲಿ ಜನರೇ ಇಲ್ಲದಂತಾಗಿದೆ. ಹೀಗಾಗಿ ಈ ವರ್ಷದ ಕೊಯ್ಲು ಸಹ ಸರಿಯಾಗಿ ನಡೆಯದು.

‘ಅಫ್ಘಾನಿಸ್ತಾನದ ಜನರ ಪಾಲಿಗೆ ಎರಡು ಸಂಕಷ್ಟಗಳಿವೆ. ಒಂದು ಹಸಿವು ಮತ್ತೊಂದು ಸಶಸ್ತ್ರ ಸಂಘರ್ಷ’ ಎನ್ನುತ್ತಾರೆ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಪರವಾಗಿ ಮಾನವೀಯ ನೆರವು ಕೊಡಿಸಲು ಶ್ರಮಿಸುತ್ತಿರುವ ರಮೀಝ್ ಅಲಕ್​ಬರೊವ್. ‘ಮಳೆ ಮತ್ತು ಹವಾಮಾನ ವೈಪರಿತ್ಯಗಳ ಜೊತೆಗೆ ಅಂತರ್ಯುದ್ಧ ಮತ್ತು ದೀರ್ಘಕಾಲದ ಮಿಲಿಟರಿ ಸಂಘರ್ಷವೂ ಇಲ್ಲಿನ ಕೃಷಿಭೂಮಿಗಳನ್ನು ಹಾಳುಗಡೆವಿದೆ. ದೊಡ್ಡಸಂಖ್ಯೆಯ ಜನರು ಸ್ಥಳಾಂತರಗೊಂಡಿರುವುದರಿಂದ ಜಮೀನುಗಳು ಬೀಡುಬಿದ್ದಿವೆ’ ಎನ್ನುತ್ತಾರೆ ಅವರು.

ಇನ್ನು ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನದ ಕಣಿವೆಗಳನ್ನು ಮಂಜು ಮುಚ್ಚಿಬಿಡುತ್ತದೆ. ಹಳ್ಳಿಗಳಿಗೆ ಹೋಗುವ ದಾರಿಗಳು ಬಂದ್ ಆಗಲಿವೆ. ಅಷ್ಟರಲ್ಲಿ ಜನರಿಗೆ ಚಳಿಗಾಲ ಕಳೆಯುವಷ್ಟು ಆಹಾರ ಒದಗಿಸಿದದ್ದರೆ ಹಸಿವಿನ ಸಾವನ್ನು ತಡೆಯಲು ಆಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಶೀಘ್ರ ಸರ್ಕಾರವೊಂದು ನೆಲೆಗೊಂಡು, ಜನರಿಗೆ ಆಹಾರ ಒದಗಿಸುವ ವ್ಯವಸ್ಥೆ ರೂಪಿಸಬೇಕಿದೆ ಎನ್ನುತ್ತಾರೆ ಛಾಥಮ್ ಹೌಸ್ ಚಿಂತಕರ ಚಾವಡಿಯ ವಿಶ್ಲೇಷಕ ಒಲಿ ಬ್ರೌನ್.

ಕಳೆದ 40 ವರ್ಷಗಳಿಂದ ಅಫ್ಘಾನಿಸ್ತಾನದ ಜನರು ಹಿಂಸಾಚಾರ, ಹಸಿವಿನ ಅವರ್ತಗಳಲ್ಲಿ ಸಲುಗಿದ್ದಾರೆ. ಒಂದು ಮತ್ತೊಂದಕ್ಕೆ ಕಾರಣವಾಗುತ್ತಿದೆ. ನೀರು ಮತ್ತು ಕೃಷಿಯೋಗ್ಯ ಭೂಪ್ರದೇಶದ ಕೊರತೆಯು ವಿವಿಧ ಸಮುದಾಯಗಳು ಪರಸ್ಪರ ಸಂಘರ್ಷಕ್ಕಿಳಿಯಲು ಕಾರಣವಾಗುತ್ತಿದೆ. ಇದರ ಪರಿಣಾಮ ಎಂಬಂತೆ ಬಡತನ ಮತ್ತು ಅಸ್ಥಿತರತೆ ತಾಂಡವವಾಡುತ್ತಿದೆ. ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ಸಂಪನ್ಮೂಲಗಳ ಕೊರತೆ ಮತ್ತು ಪರಿಸರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಸತತವಾಗಿ ಹಲವು ವರ್ಷಗಳಿಂದ ಕೃಷಿ ವಿಫಲಗೊಳ್ಳುತ್ತಿರುವುದರಿಂದ ಅಲ್ಲಿನ ಜನರು ಗಾಂಜಾ ಬೆಳೆಯುವುದನ್ನು ನಿಲ್ಲಿಸುತ್ತಿಲ್ಲ. ಪರ್ಯಾಯ ಆದಾಯದ ಮೂಲವಾಗಿ ಗಾಂಜಾ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಗಾಂಜಾದೊಂದಿಗೆ ಶಸ್ತ್ರಾಸ್ತ್ರ ಸಂಘರ್ಷ ಹಾಗೂ ಭಷ್ಟ್ರಾಚಾರಗಳೂ ಅಫ್ಘಾನಿಸ್ತಾನದಲ್ಲಿ ಹೆಚ್ಚಾಗುತ್ತಿವೆ. ಒಟ್ಟಾರೆಯಾಗಿ ಯಾವುದರಿಂದ ಯಾವುದನ್ನೂ ಮಣಿಸಲು ಆಗದಂಥ, ಯಾವುದರಿಂದ ಯಾವುದನ್ನೂ ಜಯಿಸಲು ಆಗದಂಥ ಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ.

ಬೆಳೆ ವಿವರ ಗೋಧಿಯು ಅಫ್ಘಾನಿಸ್ತಾನದ ಮುಖ್ಯ ಬೆಳೆ. 2018ರಲ್ಲಿ 36 ಲಕ್ಷ ಟನ್ ಗೋಧಿ ಉತ್ಪಾದನೆಯಾಗಿತ್ತು. ದ್ರಾಕ್ಷಿಯೂ ಅಫ್ಘಾನಿನ ಮತ್ತೊಂದು ಪ್ರಮುಖ ಬೆಳೆ. ಇದು ವಿಶ್ವದ 18ನೇ ಅತಿದೊಡ್ಡ ದ್ರಾಕ್ಷಿ ಉತ್ಪಾದಕ ರಾಷ್ಟ್ರ. ದ್ರಾಕ್ಷಿಯ ಜೊತೆಗೆ ಆಲೂಗಡ್ಡೆ, ಕಲ್ಲಂಗಡಿ, ಭತ್ತ, ಸೇಬು, ಈರುಳ್ಳಿ, ಜೋಳ, ಬಾರ್ಲಿಯನ್ನೂ ಅಫ್ಘಾನಿ ರೈತರು ಬೆಳೆಯುತ್ತಾರೆ. ಒಣಹಣ್ಣುಗಳ ರಫ್ತು ವ್ಯಾಪಾರ ಅಲ್ಲಿನ ಆರ್ಥಿಕತೆಗೆ ಪುಷ್ಟಿ ಕೊಡುತ್ತಿದೆ.

(Hunger in Afghanistan as Drought and Taliban Conflict in all 34 Provinces)

ಇದನ್ನೂ ಓದಿ: Taliban vs ISIS-K: ತಾಲಿಬಾನ್​​ನಿಂದ ಹೊರ ಬಂದವರೇ ಐಸಿಸ್​-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು

ಇದನ್ನೂ ಓದಿ: ತಾಲಿಬಾನ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿರುತ್ತರರಾದರು ಅಮೆರಿಕ ಅಧ್ಯಕ್ಷ ಜೋ ಬೈಡನ್

Published On - 4:39 pm, Fri, 27 August 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ