ದಾವೂದ್ ಇಬ್ರಾಹಿಂ ಸಾವಿನ ಕುರಿತು ಪಾಕ್ ಪ್ರಧಾನಿ ‘ಟ್ವೀಟ್’ ಫೇಕ್!
ನಕಲಿ ಟ್ವೀಟ್‌ನಲ್ಲಿ ಪಾಕ್ ಪ್ರಧಾನಿ ಹೆಸರಿನ ಕಾಗುಣಿತ ತಪ್ಪು ಎಂದು DRFAC ಹೇಳಿದೆ. ಸ್ಕ್ರೀನ್‌ಶಾಟ್‌ನಲ್ಲಿ ಅವರ ಉಪನಾಮವನ್ನು 'Kakkar' ಎಂದು ಉಚ್ಚರಿಸಲಾಗುತ್ತದೆ, ಆದರೆ ಪಾಕ್ ಪ್ರಧಾನಿ ಅವರ ಹೆಸರನ್ನು Anwar ul Haq Kakar ಎಂದು ಉಚ್ಚರಿಸುತ್ತಾರೆ. ಹಾಗಾಗಿ ವೈರಲ್ ಆಗಿರುವ ಟ್ವೀಟ್ ನಕಲಿ ಎಂದು DRFAC ಹೇಳಿದೆ.
ದೆಹಲಿ ಡಿಸೆಂಬರ್ 18: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ (Dawood Ibrahim) ವಿಷಪ್ರಾಶನದ ವರದಿಯೊಂದಿಗೆ ಸೋಮವಾರ ಬೆಳಗ್ಗೆ ದಾವೂದ್ ಸಾವಿನ ಬಗ್ಗೆ ಸ್ಕ್ರೀನ್ ಶಾಟ್ವೊಂದು ವೈರಲ್ ಆಗಿದೆ. ಇದು ಪಾಕಿಸ್ತಾನದ (Pakistan) ಉಸ್ತುವಾರಿ ಪ್ರಧಾನಿಯಾಗಿರುವ ಅನ್ವರ್ ಉಲ್ ಹಕ್ ಕಾಕರ್ (Anwar ul Haq Kakar) ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸಂದೇಶವಾಗಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ವೈರಲ್ ಸಂದೇಶದಲ್ಲಿ, ಮಾನವೀಯತೆಯ ಮೆಸಿಹಾ, ಪ್ರತಿಯೊಬ್ಬ ಪಾಕಿಸ್ತಾನಿ ಹೃದಯಕ್ಕೂ ಪ್ರಿಯ, ನಮ್ಮ ಪ್ರೀತಿಯ ಹಿಸ್ ಎಕ್ಸಲೆನ್ಸಿ ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾಹು ಅವರಿಗೆ ಜನ್ನತ್ ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ. ಇನ್ನಾ ಲಿಲ್ಲಾಹಿ ವ ಇನ್ನ ಇಲೈಹಿ ರಾಜಿಉನ್ ಎಂದು ಬರೆದಿದೆ.
ಸ್ಕ್ರೀನ್‌ಶಾಟ್ ಅನ್ನು ಹಲವಾರು ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಟ್ವೀಟ್ ‘ನಕಲಿ’ ಎಂದು ಸ್ವತಂತ್ರ ಫ್ಯಾಕ್ಟ್ ಚೆಕ್ ಸೈಟ್ ಹೇಳಿದೆ.
Fake Tweet of Caretaker PM of Pakistan on Dawood Ibrahim goes viral#DawoodIbrahim #Pakistan @anwaar_kakar #FakeNews #FactCheck https://t.co/DQ6xGc7ae7
— DFRAC (@DFRAC_org) December 18, 2023
ಡಿಜಿಟಲ್ ಫೊರೆನ್ಸಿಕ್ಸ್ ರಿಸರ್ಚ್ ಅಂಡ್ ಅನಾಲಿಟಿಕ್ಸ್ ಸೆಂಟರ್ ಅಥವಾ ಡಿಎಫ್‌ಆರ್‌ಎಸಿ ಆ ವೈರಲ್ ಟ್ವೀಟ್ ಪಾಕಿಸ್ತಾನಿ ಪಿಎಂ ಅವರ ಪರಿಶೀಲಿಸಿದ ಎಕ್ಸ್ ಹ್ಯಾಂಡಲ್‌ನಿಂದ ಮಾಡಿದ್ದು ಅಲ್ಲ ಎಂದು ಹೇಳಿದೆ.
ನಕಲಿ ಟ್ವೀಟ್‌ನಲ್ಲಿ ಪಾಕ್ ಪ್ರಧಾನಿ ಹೆಸರಿನ ತಪ್ಪು ಕಾಗುಣಿತವಿದೆ ಎಂದು DRFAC ಹೇಳಿದೆ. ಸ್ಕ್ರೀನ್‌ಶಾಟ್‌ನಲ್ಲಿ ಅವರ ಉಪನಾಮವನ್ನು ‘Kakkar’ ಎಂದು ಉಚ್ಚರಿಸಲಾಗುತ್ತದೆ, ಆದರೆ ಪಾಕ್ ಪ್ರಧಾನಿ ಅವರ ಹೆಸರನ್ನು Anwar ul Haq Kakar ಎಂದು ಉಚ್ಚರಿಸುತ್ತಾರೆ. ಅಲ್ಲದೆ, ಅಧಿಕೃತ ಎಕ್ಸ್ ಹ್ಯಾಂಡಲ್ ಪ್ರಕಾರ, ಕಾಕರ್ ಅವರ ಕೊನೆಯ ಪೋಸ್ಟ್ ಡಿಸೆಂಬರ್ 16 ರಂದು ಆಗಿತ್ತು.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ