ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

ಈ ರೂಪಾಂತರ ಪ್ರಕ್ರಿಯೆ ಇಲ್ಲಿಗೇ ನಿಲ್ಲುವುದಿಲ್ಲ, ಶೀಘ್ರದಲ್ಲೇ ಇನ್ನೂ ನಾಲ್ಕು ಬಗೆಯ ರೂಪಾಂತರಿ ಮಾದರಿಗಳು ಉಲ್ಬಣಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jun 29, 2021 | 9:39 AM

ಕೊರೊನಾ ವೈರಾಣು ಜಗತ್ತಿನೆಲ್ಲೆಡೆ ವ್ಯಾಪಿಸಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆರಂಭಿಕ ಹಂತದಲ್ಲಿದ್ದ ವೈರಾಣು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ರೂಪಾಂತರ ಹೊಂದುತ್ತಾ ಇದೀಗ ಹಲವು ಸ್ವರೂಪ ಪಡೆದಿದೆ. ಈ ರೂಪಾಂತರ ಪ್ರಕ್ರಿಯೆ ಇಲ್ಲಿಗೇ ನಿಲ್ಲುವುದಿಲ್ಲ, ಶೀಘ್ರದಲ್ಲೇ ಇನ್ನೂ ನಾಲ್ಕು ಬಗೆಯ ರೂಪಾಂತರಿ ಮಾದರಿಗಳು ಉಲ್ಬಣಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಾಲ್ಕು ಹೊಸ ಮಾದರಿಗಳ ಪೈಕಿ ಎರಡು ಡೆಲ್ಟಾ (B.1.617.2) ಕುಟುಂಬಕ್ಕೆ ಸೇರಿದ B.1.617.3 ಹಾಗೂ B.1.617.1 (ಕಪ್ಪಾ) ಆಗಿವೆ. ಇನ್ನೆರಡು ಮಾದರಿಗಳು B.1.1.318 ಹಾಗೂ C.37 (ಲ್ಯಾಂಬ್ಡಾ) ಎಂದು ತಜ್ಞರು ಹೇಳಿದ್ದಾರೆ.

ಈ ಪೈಕಿ B.1.617.3 ಹಾಗೂ B.1.617.1 ಮಾದರಿಗಳು ಡೆಲ್ಟಾ, ಡೆಲ್ಟಾ ಪ್ಲಸ್ ತಳಿಗಿಂತಲೂ ಕಡಿಮೆ ಪರಿಣಾಮಕಾರಿಯಾಗಿವೆ. ಆದರೆ, B.1.1.318 ತಳಿಯು 14 ರೂಪಾಂತರಿಗಳನ್ನು ಹೊಂದಿದೆ ಮತ್ತು ಲ್ಯಾಂಬ್ಡಾ (C.37) ಅತಿ ವೇಗವಾಗಿ ಹಬ್ಬುವ ಶಕ್ತಿ ಹೊಂದಿದ್ದು, ಜೂನ್​ 3ರಂದು ಅದನ್ನು ಅಧ್ಯಯನಕ್ಕೆ ಒಳಪಡಿಸಿರುವ ಮಾದರಿ ಎಂದು ಗುರುತಿಸಲಾಗಿದೆ. ಮೇಲಿನ ನಾಲ್ಕು ತಳಿಗಳಲ್ಲಿ B.1.617.3 ಹಾಗೂ B.1.1.318 ಈಗಾಗಲೇ ಭಾರತದಲ್ಲಿ ಕಾಣಿಸಿಕೊಂಡಿವೆ. ಲ್ಯಾಂಬ್ಡಾ (C.37) ಈವರೆಗೆ ಬಂದಿಲ್ಲವಾದರೂ ಮುಂದೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಡೆಲ್ಟಾ ಮಾದರಿ ಭಾರತದಲ್ಲೇ ಕಾಣಿಸಿಕೊಂಡಿದ್ದರಿಂದ ಅದು ರೂಪಾಂತರ ಹೊಂದಿ ದೇಶದೆಲ್ಲೆಡೆ ವ್ಯಾಪಿಸಲಾರಂಭಿಸಿತು. ಕಪ್ಪಾ (B.1.617.1), ಡೆಲ್ಟಾ (B.1.617.2) ಮತ್ತು ಇವುಗಳ ಕುಟುಂಬಕ್ಕೆ ಸೇರಿದ ಇನ್ನೊಂದು ತಳಿ B.1.617.3 ಇವೆಲ್ಲವೂ ಮಹಾರಾಷ್ಟ್ರದಲ್ಲಿ ಮೊದಲು ಕಾಣಿಸಿಕೊಂಡ SARS-CoV-2, B.1.617 ಮಾದರಿಯ ರೂಪಾಂತರಿಗಳಾಗಿವೆ. ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು B.1.617.3 ಮಾದರಿಯನ್ನು ಕಪ್ಪಾ ತಳಿಯೊಂದಿಗೆ ಸೇರಿಸಿದೆ.

B.1.617.3 ತಳಿಯ ಒಟ್ಟು 161 ಜಿನೋಮ್​ ಸೀಕ್ವೆನ್ಸ್​ಗಳು ಜೂನ್​ 22ರ ತನಕ ವಿಶ್ವ ಮಟ್ಟದಲ್ಲಿ ಪತ್ತೆಯಾಗಿದ್ದು, ಆ ಪೈಕಿ 148 ಜಿನೋಮ್​ ಸೀಕ್ವೆನ್ಸ್ ಭಾರತದಲ್ಲೇ ವರದಿಯಾಗಿದೆ. ಅದರಾಚೆಗೆ ಭಾರತದಲ್ಲಿ ಕಪ್ಪಾ (B.1.617.1) ತಳಿಯ ಸುಮಾರು 3,083 ಸೀಕ್ವೆನ್ಸ್​ ಭಾರತದಲ್ಲಿ ಕಂಡುಬಂದಿದ್ದು, ವಿಶ್ವದಾದ್ಯಂತ ಒಟ್ಟು 4,217 ಸೀಕ್ವೆನ್ಸ್​ ವರದಿಯಾಗಿದೆ.

ಇನ್ನು B.1.1.318 ಮಾದರಿಯು E484K ತಳಿಯ ರೂಪಾಂತರಿಯಾಗಿದ್ದು, ಅದು ಆಫ್ರಿಕಾದB.1.351 ಮಾದರಿಯಲ್ಲಿ ಮೊದಲು ಪತ್ತೆಯಾಗಿದೆ. ಅಲ್ಲದೇ, ಬ್ರೆಜಿಲ್​ನಲ್ಲಿ ಪತ್ತೆಯಾದ B.1.1.28 ಮಾದರಿಯಲ್ಲೂ ಕಾಣಸಿಕ್ಕಿದೆ. ಸದ್ಯ ಜಿಐಎಸ್​ಅಐಡಿ ವರದಿ ಪ್ರಕಾರ ಜಗತ್ತಿನಲ್ಲಿ ಈ ಮಾದರಿಯ 173 ಸೀಕ್ವೆನ್ಸ್​ಗಳು ಪತ್ತೆಯಾಗಿದ್ದು, ಭಾರತದಲ್ಲಿ ಕೇವಲ 2 ಸೀಕ್ವೆನ್ಸ್​ ಮಾತ್ರ ಲಭ್ಯವಾಗಿದೆ.

ಅಂತೆಯೇ, ಲ್ಯಾಂಬ್ಡಾ (C.37) ತಳಿಯು B.1.1.1 ತಳಿಯಿಂದ ಬಂದಿದ್ದು, ಇದು ಮೊದಲು ಬ್ರೆಜಿಲ್​ ದೇಶದ ದಕ್ಷಿಣ ಭಾಗದಲ್ಲಿ ಕಂಡುಬಂದಿದೆ. ಇದು ಪೆರು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದು, ಉತ್ತರ ಹಾಗೂ ದಕ್ಷಿಣ ಅಮೆರಿಕಾ ಮತ್ತು ಯುರೋಪ್ ಭಾಗದಲ್ಲಿಯೂ ಕಾಣಿಸಿಕೊಂಡಿದೆ. ಈ ಮಾದರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್​ ಆಫ್ ಇಂಟ್ರೆಸ್ಟ್​ ಎಂದು ವರ್ಗೀಕರಿಸಿದ್ದು, ಕೆಲ ತಜ್ಞರ ಪ್ರಕಾರ ಇದು ವೇರಿಯಂಟ್ ಆಫ್ ಕನ್ಸರ್ನ್​ (ಚಿಂತನೀಯ ಮಾದರಿ) ಆಗಿ ಮಾರ್ಪಾಡು ಪಡೆಯುವ ಸಾಧ್ಯತೆ ಅಧಿಕವಿದೆ.

ಜಿಐಎಸ್​ಎಐಡಿ ವರದಿ ಪ್ರಕಾರ ಈ ತನಕ ಸುಮಾರು 1,845 ಲ್ಯಾಂಬ್ಡಾ ಸೀಕ್ವೆನ್ಸ್​ಗಳು ವಿಶ್ವದೆಲ್ಲೆಡೆ ಕಾಣಸಿಕ್ಕಿವೆ. ಜೂನ್​ 25ರಂದು ತಜ್ಞರು ಈ ಮಾದರಿ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದು, ಇದು ಉಳಿದೆಲ್ಲವಕ್ಕಿಂತಲೂ ವೇಗವಾಗಿ ಹಬ್ಬುವ ಶಕ್ತಿ ಹೊಂದಿದ್ದು, ದೇಹದಲ್ಲಿನ ಪ್ರತಿಕಾಯಗಳನ್ನೂ ನಿಸ್ಸಹಾಯಕಗೊಳಿಸುವಷ್ಟು ಪ್ರಬಲವಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್​ ಪರಿಣಾಮ ಹೀಗಿದೆ; ಕೊರೊನಾ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಇಲ್ಲ: ಡಾ.ಎನ್​.ಕೆ.ಅರೋರಾ 

Delta Plus Variant: ಡೆಲ್ಟಾ ಪ್ಲಸ್​ ಮಾದರಿಯ ಪ್ರಾಥಮಿಕ ಹಂತದ ಗುಣಲಕ್ಷಣಗಳೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ