Backlash Over UK: ಪ್ರತಿಭಟನೆಗಳನ್ನು ಹತ್ತಿಕ್ಕಲು ಹೊಸ ಕಾನೂನು: ಬ್ರಿಟನ್ ಸಂಸತ್ತು ಚಿಂತನೆ

ಪ್ರತಿಭಟನಾಕಾರರ ವಿರುದ್ಧ ಮೆಟ್ರೊಪಾಲಿಟನ್ ಪೊಲೀಸರು ಬಲಪ್ರಯೋಗ ನಡೆಸಿರುವುದನ್ನು ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕೆಂದು ಲಂಡನ್ ಮೇಯರ್ ಸಾದಿಖ್ ಖಾನ್ ಮತ್ತು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಆಗ್ರಹಿಸಿದ್ದಾರೆ.

Backlash Over UK: ಪ್ರತಿಭಟನೆಗಳನ್ನು ಹತ್ತಿಕ್ಕಲು ಹೊಸ ಕಾನೂನು: ಬ್ರಿಟನ್ ಸಂಸತ್ತು ಚಿಂತನೆ
ರವಿವಾರ ಲಂಡನ್​ನಲ್ಲಿ ನಡೆದ ಪ್ರತಿಭಟನೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 15, 2021 | 7:37 PM

ಲಂಡನ್​: ಮಹಿಳೆಯೊಬ್ಬರ ಹತ್ಯೆ ವಿರುದ್ಧ ಲಂಡನ್​ನಲ್ಲಿ ರವಿವಾರದಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಜನರ ಗುಂಪನ್ನು ಚದುರಿಸಲು ಮೆಟ್ರೊಪಾಲಿಟನ್ ಪೊಲೀಸರು ಬಲಪ್ರಯೋಗ ನಡೆಸಿದದ್ದನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಪ್ರತಿಭಟನೆ ನಡೆಸುವ ಹಕ್ಕನ್ನೇ ಪೊಲೀಸರು ಹತ್ತಿಕ್ಕಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಗಮನಿಸಬೇಕಾದ ಅಂಶವೇನೆಂದರೆ, ಬ್ರಿಟನ್ ಸಂಸತ್ತು ಸಹ ಪ್ರತಿಭಟನೆಗಳ ಮೇಲೆ ನಿಷೇಧ ಹೇರಲು ಕಾನೂನೊಂದನ್ನು ರೂಪಿಸುವ ಚಿಂತನೆ ಮಾಡುತ್ತಿದೆ.

ಮಾರ್ಚ್​ 3ರಂದು 33 ವರ್ಷ ವಯಸ್ಸಿನ ಸಾರಾ ಎವರಾಡ್ ಹೆಸರಿನ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ದಕ್ಷಿಣ ಲಂಡನ್​ನಲ್ಲಿರುವ ಪಾರ್ಕ್​ ಒಂದರ ಮೂಲಕ ಮನೆಗೆ ಹಿಂತಿರುಗುವಾಗ ಕಣ್ಮರೆಯಾಗಿದ್ದರು. ಆಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಮೇಲಿರದ ಪೊಲೀಸ್ ಅಧಿಕಾರಿಯ ವಿರುದ್ಧ ಅಪಹರಣ, ಕೊಲೆಯ ಆರೋಪ ಹೊರಿಸಲಾಗಿದೆ.

ಈ ಹಿನ್ನೆಲೆಯಲ್ಲೇ ಲಂಡನ್​ ಮತ್ತು ಬ್ರಿಟನ್ನಿನ ಇತರ ಕೆಲ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬ್ರಿಟನ್ನಿನ ಸಂಸತ್ತು ಮಹಿಳೆಯ ಅಪಹರಣ, ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಮುಷ್ಕರಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಿ, ಹೆಚ್ಚುತ್ತಿರುವ ಕೊವಿಡ್​ ಪ್ರಕರಣಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಪ್ರತಭಟನೆಗಳನ್ನು ನಿಷೇಧಿಸಿಲು ಕಾನೂನೊಂದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಿದೆ.

ರವಿವಾರದಂದು ಪ್ರತಿಭಟನೆಕಾರರ ವಿರುದ್ಧ ಮೆಟ್ರೊಪಾಲಿಟನ್ ಪೊಲೀಸರು ಬಲಪ್ರಯೋಗ ನಡೆಸಿರುವ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕೆಂದು ಲಂಡನ್ ಮೇಯರ್ ಸಾದಿಖ್ ಖಾನ್ ಮತ್ತು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಆಗ್ರಹಿಸಿದ್ದಾರೆ. ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪ್ರಯತ್ನಿಸಿದಾಗ ಮುಷ್ಕರ ಹಿಂಸಾರೂಪ ತಳೆಯಿತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಗುಂಪು ಸೇರಿ, ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳ ಉಲ್ಲಂಘಿಸಿದ ಕಾರಣ ಪ್ರತಿಭಟನೆ ಕೈ ಬಿಡುವಂತೆ ಜನರನ್ನು ಕೇಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯರ ವಿರುದ್ಧ ಅವ್ಯಾಹತವಾಗಿ ನಡೆಯಿತ್ತಿರುವ ದೌರ್ಜನ್ಯಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಜನ ಹೇಳಿದ್ದಾರೆ. ಪೊಲೀಸರು ಮಹಿಳಾ ಪ್ರತಿಭಟನಾಕಾರರನ್ನು ನೆಲಕ್ಕೆ ಬೀಳಿಸಿ ಅವರ ಬೆನ್ನ ಮೇಲೆ ಮೊಣಕಾಲುಗಳಿಂದ ಅದುಮುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಮೇಯರ್ ಖಾನ್ ರವಿವಾರದಂದೇ ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಿ ಅವರಿಂದ ವಿವರಣೆ ಪಡೆದರು. ಆದರೆ, ನಂತರ ತಾವು ಮಾಡಿರುವ ಟ್ವೀಟೊಂದರಲ್ಲಿ ಅವರು, ‘ಪೊಲೀಸರ ವಿವರಣೆಯಿಂದ ನಾನು ತೃಪ್ತನಾಗಿಲ್ಲ’ ಎಂದು ಹೇಳಿದ್ದಾರೆ.

ಇಂಗ್ಲೆಂಡ್​ನ ಸುದ್ದಿವಾಹಿಯೊಂದರ ಜೊತೆ ಮಾತಾಡಿದ ಗೃಹಕಚೇರಿ ಸಚಿವೆ ವಿಕ್ಟೋರಿಯಾ ಆಟ್ಕಿನ್ಸ್, ‘ನಿನ್ನೆ ಶಾಂತಿಯುತ ಪ್ರತಿಭಟನೆ ನಡೆಸಿದ್ದಾಗಿ ವಾದಿಸುತ್ತಿರುವ ಮತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಗಮನಕ್ಕೆ ಬರುತ್ತಿರುವ ಪ್ರತಿಭಟನೆಗಳ ನಡುವಿನ ವ್ಯತ್ಯಾಸವನ್ನು ನಾನು ಹೇಳಲು ಪ್ರಯತ್ನಿಸುತ್ತಿಲ್ಲ. ಮನೆಗಳ ಗೇಟ್​ಗಳ ಹತ್ತಿರ ನಿಂತುಕೊಂಡು ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯುತ್ತಿರುವುದನ್ನು ನಾವು ನೋಡಿದ್ದೇವೆ, ನಾವು ಚರ್ಚಿಸಲಿರುವ ಮಸೂದೆಯು ಎರಡನೇ ಭಾಗದ ಮೇಲೆ ಹೆಚ್ಚು ಕೇಂದ್ರೀಕೃತವಾಗಲಿದೆ’ ಎಂದು ಹೇಳಿದರು.

ರವಿವಾರದಂದು ಜನ ಗುಂಪುಗುಂಪಾಗಿ ಲಂಡನ್ ಹೊರವಲಯದಲ್ಲಿರುವ ಕ್ಲಾಫಮ್ ಪಾರ್ಕ್​ನಲ್ಲಿ ಸೇರಿ ಅಲ್ಲಿನ ಬ್ಯಾಂಡ್​ಸ್ಟ್ಯಾಂಡ್ ಮೇಲೆ ಬೊಕೆಗಳನ್ನು ಇಟ್ಟರು. ನಂತರ ಪ್ರತಿಭಟನೆಕಾರರು ಸ್ಕಾಟ್ಲೆಂಡ್ ಯಾರ್ಡ್ ಕೇಂದ್ರ ಕಚೇರಿ ಎದುರು ಘೋಷಣೆಗಳನ್ನು ಕೂಗಿದರು. ಕ್ಲಾಫಮ್ ಪಾರ್ಕ್​ನಲ್ಲಿ ಶನಿವಾರವೂ ಪ್ರತಿಭಟನೆ ನಡೆದಿತ್ತು.

ಮೂಲಗಳ ಪ್ರಕಾರ ಬ್ರಿಟನ್ ಸಂಸತ್ತು ಜಾರಿಗೊಳಿಸಲು ಯೋಚಿಸುತ್ತಿರುವ ಹೊಸ ಮಸೂದೆಯು ಸಾರ್ವಜನಿಕ ಗುಂಪುಗಳಲ್ಲಿ ಗಲಾಟೆ ತಡೆಯಲು ಮತ್ತು ಸಂಸತ್ತಿನ ಕಟ್ಟಡದ ಎದುರು ಜನ ಜಮಾವಣೆಗೊಳ್ಳದಂತೆ ಹೊಸ ನಿಯಂತ್ರಣಗಳನ್ನು ಹೇರಲು ನೆರವಾಗಲಿದೆ. ಹಾಗೆಯೇ, ಹೊಸ ಕಾನೂನು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯಗಳ ವಿರುದ್ಧ ರಕ್ಷಣಾ ಕ್ರಮಗಳನ್ನು ಬಲಪಡಿಸುವ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳೆನಿಸಿಕೊಂಡವರಿಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸುವ ನಿಯಮಗಳನ್ನೂ ಒಳಗೊಂಡಿರಲಿದೆ.

‘ಶನಿವಾರದಂದು ನಡೆದ ಪ್ರತಿಭಟನೆಯಲ್ಲಿ ಬಲಪ್ರಯೋಗ ಅಗತ್ಯವಾಗಿತ್ತು. ನೂರಾರ ಜನ ಇಕ್ಕಟ್ಟಾಗಿ ಗುಂಪು ಸೇರಿದ್ದು ಕೊವಿಡ್-19 ಸೋಂಕು ಸುಲಭವಾಗಿ ಹರಡುವ ಅಪಾಯವನ್ನು ಸೃಷ್ಟಿಸಿತ್ತು. ಒಂದು ಚಿಕ್ಕ ಗುಂಪು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಅವರತ್ತ ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತಿತ್ತು,’ ಎಂದು ಮೆಟ್ರೊಪಾಲಿಟನ್ ಸಹಾಯಕ ಪೊಲೀಸ್ ಕಮೀಷನರ್ ಹೆಲೆನ್ ಬಾಲ್ ಹೇಳಿದ್ದಾರೆ.

ವಿರೋಧ ಪಕ್ಷ ಲೇಬರ್ ಪಾರ್ಟಿಯ ಜನಪ್ರತಿನಿಧಿಗಳು ಮಸೂದೆ ಜಾರಿಗೊಳಿಸುವದನ್ನು ವಿರೋಧಿಸುತ್ತಿದ್ದಾರೆ.

‘ಸಾರಾ ಎವರಾಡ್ ಅವರ ಸಾವಿನ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಅಕ್ಷಮ್ಯ. ಪ್ರತಿಭಟನೆಕಾರರ ಮೇಲೆ ಬಲಪ್ರಯೋಗ ನಡೆಸಲು ಮತ್ತು ಪ್ರತಿಭಟನೆ ನಡೆಸುವ ಹಕ್ಕನ್ನು ಹತ್ತಿಕ್ಕಲು ಸರ್ಕಾರಕ್ಕೆ ಇದು ಸೂಕ್ತ ಸಮಯವಲ್ಲ,’ ಎಂದು ಲೇಬರ್ ಪಕ್ಷದ ಡೇವಿಡ್ ಲ್ಯಾಮಿ ಹೇಳಿದ್ದಾರೆ.

ಇದನ್ನೂ ಓದಿ: Mehul Choksi: 2027ಕ್ಕೆ ಮೊದಲು ಮೆಹುಲ್ ಚೋಕ್ಸಿ ಭಾರತಕ್ಕೆ ಬರುವುದು ಅನುಮಾನ

Published On - 7:34 pm, Mon, 15 March 21

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!