Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಚಂದ್ರಯಾನ-3 ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ ಎಂದ ಚೀನಾ ವಿಜ್ಞಾನಿ

ಚಂದ್ರಯಾನ -3 ರ ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿಲ್ಲ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿಲ್ಲ, ಅಥವಾ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸಮೀಪದಲ್ಲಿಲ್ಲ" ಎಂದು ಜಿಯುವಾನ್ ಹೇಳಿದ್ದು, ದಕ್ಷಿಣ ಧ್ರುವದಲ್ಲಿ ಚಂದ್ರನ ಇಳಿಯುವಿಕೆಯು "ತಪ್ಪು" ಎಂದು ವಾದಿಸಿದ್ದಾರೆ. ಚಂದ್ರಯಾನ-3 ಲ್ಯಾಂಡಿಂಗ್ ಧ್ರುವ ಪ್ರದೇಶದಿಂದ 619 ಕಿಮೀ ದೂರದಲ್ಲಿದೆ ಎಂದು ಅವರು ಹೇಳಿದರು.

ಭಾರತದ ಚಂದ್ರಯಾನ-3 ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ ಎಂದ ಚೀನಾ ವಿಜ್ಞಾನಿ
ಚಂದ್ರಯಾನ-3
Follow us
ರಶ್ಮಿ ಕಲ್ಲಕಟ್ಟ
|

Updated on: Sep 29, 2023 | 12:49 PM

ಮಾಸ್ಕೋ ಸೆಪ್ಟೆಂಬರ್ 29: ಚೀನಾದ ಚಂದ್ರನ ಪರಿಶೋಧನಾ ಯೋಜನೆಯ ಪಿತಾಮಹ ಎಂದು ಕರೆಯಲ್ಪಡುವ ಚೀನಾದ ವಿಜ್ಞಾನಿ ಓಯಾಂಗ್ ಜಿಯುವಾನ್ (Ouyang Ziyuan), ಭಾರತ ಚಂದ್ರನ ಅಂಗಳದಲ್ಲಿ ಇಳಿದಿರುವ ಎಂದು ಇಸ್ರೋ (ISRO) ಸಾಧನೆಯನ್ನು ಅತಿಯಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ಚಂದ್ರಯಾನ-3 (Chandrayaan-3) ಜುಲೈ 14 ರಂದು ಶ್ರೀಹರಿಕೋಟಾದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಿತು.ಏತನ್ಮಧ್ಯೆ, 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿರುವ ಲ್ಯಾಂಡಿಂಗ್ ಸೈಟ್ ದಕ್ಷಿಣ ಧ್ರುವದ ಬಳಿ ಇಲ್ಲ ಎಂದು ವಿಜ್ಞಾನಿ ಹೇಳಿರುವುದಾಗಿ ಚೀನೀ ಭಾಷೆಯ ಪತ್ರಿಕೆ ಸೈನ್ಸ್ ಟೈಮ್ಸ್‌ ವರದಿ ಮಾಡಿದೆ. ದಕ್ಷಿಣ ಧ್ರುವವನ್ನು ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ಭೂಮಿಯ ಮೇಲೆ 69 ಡಿಗ್ರಿ ದಕ್ಷಿಣವು ಅಂಟಾರ್ಕ್ಟಿಕ್ ವೃತ್ತದೊಳಗೆ ಇರುತ್ತದೆ, ಆದರೆ ಚಂದ್ರನ ಮೇಲ್ಮೈಯಲ್ಲಿರುವ ವೃತ್ತವು ಧ್ರುವಕ್ಕೆ ಹೆಚ್ಚು ಹತ್ತಿರದಲ್ಲಿದೆ.

ಚಂದ್ರಯಾನ -3 ರ ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿಲ್ಲ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿಲ್ಲ, ಅಥವಾ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸಮೀಪದಲ್ಲಿಲ್ಲ” ಎಂದು ಜಿಯುವಾನ್ ಹೇಳಿದ್ದು, ದಕ್ಷಿಣ ಧ್ರುವದಲ್ಲಿ ಚಂದ್ರನ ಇಳಿಯುವಿಕೆಯು “ತಪ್ಪು” ಎಂದು ವಾದಿಸಿದ್ದಾರೆ. ಚಂದ್ರಯಾನ-3 ಲ್ಯಾಂಡಿಂಗ್ ಧ್ರುವ ಪ್ರದೇಶದಿಂದ 619 ಕಿಮೀ ದೂರದಲ್ಲಿದೆ ಎಂದು ಅವರು ಹೇಳಿದರು.

ಅಂದಹಾಗೆ ಚಂದ್ರಯಾನ-3ರ ಸಾಧನೆಗಳನ್ನು ಪ್ರಶ್ನಿಸಿದ ಚೀನಾದ ಮೊದಲ ವಿಜ್ಞಾನಿ ಜಿಯುವಾನ್ ಅಲ್ಲ. ಈ ಹಿಂದೆ ಬೀಜಿಂಗ್ ಮೂಲದ ಬಾಹ್ಯಾಕಾಶ ತಜ್ಞ ಪಾಂಗ್ ಝಿಹಾವೊ ಅವರು ರಾಜ್ಯ ಮುಖವಾಣಿ ಗ್ಲೋಬಲ್ ಟೈಮ್ಸ್‌ಗೆ ಚೀನಾ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಮುಂದುವರಿದಿದೆ ಎಂದು ಹೇಳಿದ್ದರು. 2010ರಲ್ಲಿ ಚಾಂಗ್ಇ-2 ಅನ್ನು ಉಡಾವಣೆ ಮಾಡಿದ ನಂತರ ಚೀನಾವು ನೇರವಾಗಿ ಆರ್ಬಿಟರ್‌ಗಳು ಮತ್ತು ಲ್ಯಾಂಡರ್‌ಗಳನ್ನು ಭೂಮಿ-ಚಂದ್ರ ವರ್ಗಾವಣೆ ಕಕ್ಷೆಗೆ ಕಳುಹಿಸಬಹುದು. ಭಾರತ ತನ್ನ ಉಡಾವಣಾ ವಾಹನಗಳ ಸೀಮಿತ ಸಾಮರ್ಥ್ಯವನ್ನು ಪರಿಗಣಿಸಿ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಚೀನಾ ಬಳಸುವ ಎಂಜಿನ್ ಕೂಡ ಬಹಳ ಮುಂದುವರಿದಿದೆ.ಅದರ ಲೂನಾರ್ ರೋವರ್ ತುಂಬಾ ದೊಡ್ಡದಾಗಿದೆ ಎಂದು ಪಾಂಗ್ ಹೇಳಿದ್ದರು. ಪ್ರಗ್ಯಾನ್ ಒಂದು ಚಂದ್ರನ ದಿನದ ಜೀವಿತಾವಧಿಯನ್ನು ಹೊಂದಿದೆ. ಚಂದ್ರನ ರಾತ್ರಿಗಳನ್ನು ತಡೆದುಕೊಳ್ಳುವುದಿಲ್ಲ, ಆದರೆ ಚೀನಾದ ಯುಟು-2 ರೋವರ್ ಅಣುಶಕ್ತಿಯಿಂದ ಚಾಲಿತವಾಗಿರುವುದರಿಂದ ಚಂದ್ರನ ಮೇಲ್ಮೈಯಲ್ಲಿ ಹೆಚ್ಚು ಸಮಯ ಕೆಲಸ ಮಾಡಿದ ದಾಖಲೆಯನ್ನು ಹೊಂದಿದೆ.

ಬಾಹ್ಯಾಕಾಶ ಪರಿಶೋಧನೆ ಸೇರಿದಂತೆ ಹೆಚ್ಚಿನ ವಿಷಯಗಳಲ್ಲಿ ಚೀನಾ ಮತ್ತು ಭಾರತದ ಪೈಪೋಟಿಯು ಸಾಕಷ್ಟು ಪ್ರಸಿದ್ಧವಾಗಿದೆ. ಆದಾಗ್ಯೂ, ಚೀನಾ ಹೆಮ್ಮೆಪಡುವ ಸಾಮರ್ಥ್ಯದೊಂದಿಗೆ ಭಾರತವು ರಷ್ಯಾ, ಯುಎಸ್ ಮತ್ತು ಚೀನಾ ಸೇರಿದಂತೆ ಯಾವುದೇ ಬಾಹ್ಯಾಕಾಶ ನೌಕೆಗಳಿಗಿಂತ ಹೆಚ್ಚು ದೂರ ಸಾಗಿದೆ.

ಇದನ್ನೂ ಓದಿ:  ಚಂದ್ರಯಾನ-3 ಮತ್ತು ಚೀನಾದ ಚಿಂತೆಗಳು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆ ಮತ್ತು ಭವಿಷ್ಯದ ಯೋಜನೆಗಳು

ಚಂದ್ರಯಾನ -3 ರ ಮೊದಲು ತಲುಪಲು ಯೋಜಿಸಲಾದ ರಷ್ಯಾದ ಚಂದ್ರನ ಮಿಷನ್, ಲೂನಾ -25, ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿತ್ತು. 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರನ ಕಾರ್ಯಾಚರಣೆಯು ಆಗಸ್ಟ್ 19 ರಂದು ನಿಯಂತ್ರಣ ತಪ್ಪಿ, ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದು, ಇದು ಬಿದ್ದ ರಭಸಕ್ಕೆ ಮತ್ತು ಚಂದ್ರನ ಮೇಲೆ 10 ಮೀಟರ್ ಅಗಲದ ಕುಳಿ ಉಂಟಾಗಿತ್ತು.

2019 ರಲ್ಲಿ ಚೀನಾದ ಮಿಷನ್ ಚಂದ್ರನ ದಕ್ಷಿಣಕ್ಕೆ 45 ಡಿಗ್ರಿಗಳನ್ನು ಮುಟ್ಟಿತು ಮತ್ತು ಅಮೆರಿಕದ ಸರ್ವೇಯರ್ 7 1968 ರಲ್ಲಿ ಸುಮಾರು 41 ಡಿಗ್ರಿ ದಕ್ಷಿಣಕ್ಕೆ ಇಳಿದಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆಯು ದೇಶಗಳಿಗೆ ಅಪಾರ ಆಸಕ್ತಿಯನ್ನು ಹೊಂದಿದೆ. ಚಂದ್ರನ ದಕ್ಷಿಣ ಧ್ರುವವು ಹಿಮದ ಅಣುಗಳ ಉಪಸ್ಥಿತಿಯನ್ನು ಹೊಂದಿದೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ, ಇದು ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ