ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!

ಇಡೀ ವಿಶ್ವವನ್ನೇ ಕಾಡ್ತಿರೋ ಕೊರೊನಾ ಚೀನಾ‌ ಮೂಲದ್ದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಬೇರೆ ರಾಷ್ಟ್ರಗಳನ್ನ ಮಣಿಸಲು ಚೀನಾ ಜೈವಿಕ ಅಸ್ತ್ರವನ್ನಾಗಿ ಕೊರೊನಾ ವೈರಸ್ ಸೃಷ್ಟಿಸಿದೆ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹಲವು ವರ್ಷಗಳಿಂದ ಚೀನಾ ವಿಜ್ಞಾನಿಗಳು ಪ್ಲ್ಯಾನ್ ಮಾಡಿ ವೈರಸ್ ಹರಿಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆಗಳು ಸಿಕ್ಕಿದ್ದು.. ಚೀನಾದ ಕರಾಳ ಮುಖವನ್ನ ಜಗತ್ತಿನ ಎದುರು ತೆರೆದಿಟ್ಟಿದೆ.

ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!
ಪ್ರಾತಿನಿಧಿಕ ಚಿತ್ರ

ದೆಹಲಿ: ಕೊರೊನಾ ಅನ್ನೋ ವೈರಸ್ ಇಡೀ ಜಗತ್ತನ್ನ ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ. ಕೊರೊನಾ ಮೊದಲ ಅಲೆಯನ್ನ ಹಾಗೂ ಹೀಗೂ ಮಾಡಿ ಎದುರಿಸಿದ್ದ ಭಾರತ, ಎರಡನೇ ಅಲೆ ಬಂದಪ್ಪಳಿಸುತ್ತಿದ್ದಂತೆ ಅಕ್ಷರಶಃ ಬೆಚ್ಚಿ ಬಿದ್ದಿದೆ. ಕೊರೊನಾ ಕಂಡು ಭಾರತೀಯರು ಬೆದರಿ ಹೋಗಿದ್ದಾರೆ. ಭಾರತ ಸೇರಿ ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಟ ನಡೆಸ್ತಿದ್ರೆ. ಯಾವ ದೇಶದಲ್ಲಿ ಈ ವೈರಸ್ ಹುಟ್ಟಿಕೊಂಡಿತೋ.. ಯಾವ ದೇಶದಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿತೋ.. ಆ ದೇಶ ಅಂದ್ರೆ ಚೀನಾ ಫುಲ್ ಆರಾಮಾಗಿದೆ. ಜಗತ್ತಿನಲ್ಲಿ ಕಿಲ್ಲರ್ ವೈರಸ್ ಅಬ್ಬರಿಸ್ತಿದ್ರೆ. ಚೀನಾ ಮಾತ್ರ ಏನೂ ಆಗಿಯೇ ಇಲ್ಲವೇನೋ ಅನ್ನೋ ರೀತಿ ಇದೆ. ಇದರ ನಡುವೆ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು. ಕೊರೊನಾ ಅನ್ನೋದು ಚೀನಾದ ಜೈವಿಕ ಯುದ್ಧದ ಅಸ್ತ್ರ ಅನ್ನೋದು ಬಯಲಾಗಿದೆ.

ಕೊರೊನಾ‌ ವೈರಸ್ ಸೋಂಕಿಗೆ ಸಿಲುಕಿ ಇಡೀ ವಿಶ್ವವೇ ನರಳುತ್ತಿದೆ. ಜಗತ್ತಿನ 15 ಕೋಟಿ ಜನರ ದೇಹ ಹೊ‌ಕ್ಕಿರೋ ಕೊರೊನಾ.. 30 ಲಕ್ಷಕ್ಕೂ ಅಧಿಕ ಮಂದಿಯನ್ನ ಬಲಿ ಪಡೆದಿದೆ. 2ನೇ ಅಲೆ‌ ರೂಪದಲ್ಲಿ ಭಾರತವನ್ನು ನುಂಗುವ ಹಂತಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಆದ್ರೆ, ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ, ವರ್ಷದ ಹಿಂದೆಯೇ ಇದರ ಅಬ್ಬರ ಕಡಿಮೆಯಾಗಿದೆ. ಈಗ ಬಯಲಾಗಿರೋ ಹೊಸ ವಿಚಾರ ಅಂದ್ರೆ, ಚೀನಾ ಜಗತ್ತಿನ ವಿರುದ್ಧ ಜೈವಿಕ ಯುದ್ಧ ಮಾಡಲು ಮಾರಕ ವೈರಸ್ ಸೃಷ್ಟಿಸಿದೆ ಅಂತಾ ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇಡೀ ಜಗತ್ತನ್ನ ಹಿಂದೆಂದೂ ಕಂಡು ಕೇಳರಿಯದ ವಿನಾಶಕ್ಕೆ ತಳ್ಳಲು 2015ರಿಂದಲೇ ಚೀನಾ ಪ್ಲ್ಯಾನ್ ಮಾಡಿತ್ತಂತೆ.

ಚೀನಾ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಸೃಷ್ಟಿಸಿದೆ ಅಂತಾ ವೀಕೆಂಡ್ ಆಸ್ಟ್ರೇಲಿಯನ್ ವಿಸ್ತೃತವಾಗಿ ವರದಿ ಮಾಡಿದೆ. ವೀಕೆಂಡ್ ಆಸ್ಟ್ರೇಲಿಯನ್ ವರದಿಯಿಂದ ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್‌ ಸೃಷ್ಟಿಸಿದೆ ಅನ್ನೋ ಊಹಾಪೋಹ ನಿಜವಾಗುವಂತೆ ಮಾಡಿದೆ. ಚೀನಾದ‌ ಜೈವಿಕ‌ ಅಸ್ತ್ರ ಸಿದ್ಧಪಡಿಸಿದ 18 ವಿಜ್ಞಾನಿಗಳ ಪೈಕಿ ಬಹುತೇಕರು ಚೀನಾ ಸೇನೆಯ ವಿಜ್ಞಾನಿಗಳು ಮತ್ತು ಶಸ್ತ್ರಾಸ್ತ್ರ ತಜ್ಞರಾಗಿದ್ದಾರೆ. ಉಳಿದವರು ಚೀನಾದ ಸಾರ್ವಜನಿಕ ಆರೋಗ್ಯ ಸೇವೆಯ ಅಧಿಕಾರಿಗಳು ಅಂತಾ ವರದಿ ಹೇಳಿದೆ.

2015ರಲ್ಲಿ ಚೀನಾ ಸೇನೆ ವಿಜ್ಞಾನಿಗಳು ಸಿದ್ಧಪಡಿಸಿರೋ ವರದಿಯಲ್ಲಿ ಸಾರ್ಸ್‌ ಕೊರೋನಾ ವೈರಸ್‌ ಅನ್ನ ಜೈವಿಕ ಅಸ್ತ್ರವಾಗಿ ಹೇಗೆ ಬಳಸಿಕೊಳ್ಳಬಹುದು ಅಂತಾ ವಿವರಿಸಲಾಗಿದೆ. ವರದಿಯಲ್ಲಿ ಸಾರ್ಸ್‌ ಕೊರೋನಾ ವೈರಸ್‌ ಹೊಸ ಯುಗದ ಜೈವಿಕ ಅಸ್ತ್ರ ಅಂತಾ ಬಣ್ಣಿಸಿದ್ದಾರೆ. ವೈರಸ್ ವಂಶವಾಹಿಯನ್ನ ಕೃತಕವಾಗಿ ಬದಲಾಯಿಸುವ ಮೂಲಕ ಮಾನವರಲ್ಲಿ ಸೋಂಕು ಹಬ್ಬಿಸಬಲ್ಲ ವೈರಸ್‌ ಆಗಿ ಪರಿವರ್ತಿಸಬಹುದು. ಈ ಮೂಲಕ ವೈರಸ್‌ ಅನ್ನು ಶಸ್ತ್ರವಾಗಿ ಬಳಸಿಕೊಂಡು, ಜಗತ್ತನ್ನ ಹಿಂದೆಂದೂ ಕಂಡುಕೇಳರಿಯದಂಥ ವಿನಾಶಕ್ಕೆ ತಳ್ಳಬಹುದು ಅಂತಾ ವರದಿಯಲ್ಲಿದೆ.

ಕೊರೊನಾ ವೈರಸ್ ಹೇಗೆ ಹರಡಲು ಆರಂಭಿಸಿತು. ಇದು ಅಮೆರಿಕವನ್ನ ಹೇಗೆ ತಲುಪಿತು..? ಅಮೆರಿಕಕ್ಕೆ ಹೇಗೆ ಹೊಡೆತ ಕೊಟ್ಟಿದೆ ಅನ್ನೋ ಕುರಿತು ಅಮೆರಿಕದ ಗೃಹ ಇಲಾಖೆ ನಡೆಸ್ತಿರೋ ತನಿಖೆಯ ವೇಳೆ ಚೀನಾದ ತಜ್ಞರು ರೆಡಿ ಮಾಡಿದ್ದ ವರದಿಯ ಪ್ರತಿ ಸಿಕ್ಕಿದೆ. ಇದನ್ನ ಆಧರಿಸಿ ವೀಕೆಂಡ್ ಆಸ್ಟ್ರೇಲಿಯನ್ ವರದಿ ಮಾಡಿದೆ. ವೀಕೆಂಡ್ ಆಸ್ಟ್ರೇಲಿಯನ್ ವರದಿಯಿಂದ ಮತ್ತೊಮ್ಮೆ ಚೀನಾದ ಕುತಂತ್ರ ಬಟಾಬಯಲಾಗಿದೆ. ಜಗತ್ತಿನ ರಾಷ್ಟ್ರಗಳು ಈಗಲೇ ಎಚ್ಚೆತ್ತುಕೊಂಡು ಚೀನಾ ವಿರುದ್ಧ ಕ್ರಮಕೈಗೊಂಡರೆ ಮತ್ತೊಮ್ಮೆ ಈ ರೀತಿಯ ಜೈವಿಕ ಅಸ್ತ್ರಗಳು ಉಪಯೋಗವಾಗೋದನ್ನ ತಡೆಯಬಹುದು. ಇಲ್ಲದಿದ್ರೆ.. ಚೀನಾದಂತಾ ರಾಷ್ಟ್ರಗಳ ಕುತಂತ್ರಕ್ಕೆ ಜಗತ್ತಿನ ಹಲವು ಜನ ಬಲಿಯಾಗೋದನ್ನ ತಡೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು