ಕ್ಯಾನ್ಸರ್ ರೋಗಿಗಳಲ್ಲಿ ಬಹುಬೇಗ ಕ್ಷೀಣಿಸುತ್ತದೆಯೇ ಕೋವಿಡ್ ವ್ಯಾಕ್ಸಿನ್ ಪ್ರಭಾವ? ಇಲ್ಲಿದೆ ವರದಿ

ಕ್ಯಾನ್ಸರ್ ರೋಗಿಗಳಲ್ಲಿ ಬಹುಬೇಗ ಕ್ಷೀಣಿಸುತ್ತದೆಯೇ ಕೋವಿಡ್ ವ್ಯಾಕ್ಸಿನ್ ಪ್ರಭಾವ? ಇಲ್ಲಿದೆ ವರದಿ
ಕೊರೊನಾ ವ್ಯಾಕ್ಸಿನ್

ಕ್ಯಾನ್ಸರ್ ರೋಗಿಗಳು ಕೊರೊನಾ ವ್ಯಾಕ್ಸಿನ್ ಪಡೆದ ನಂತರ ಸಾಮಾನ್ಯ  ಜನರಿಗಿಂತ ಮೂರರಿಂದ ಆರು ತಿಂಗಳ ಒಳಗೆ ಇದರ ಪ್ರಭಾವ ಕಡಿಮೆಯಾಗುತ್ತದೆ ಎಂದು ಆತಂಕಕಾರಿ ಮಾಹಿತಿ ಬಹಿರಂಗೊಂಡಿದೆ.

TV9kannada Web Team

| Edited By: Vivek Biradar

May 24, 2022 | 6:19 PM

2019ರಲ್ಲಿ ಜಗತ್ತಿನಲ್ಲಿ ಕೊರೊನಾ ಮಹಾಮಾರಿ ಒಕ್ಕರಿಸಿದ ಮೇಲೆ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಕೊರೊನಾ ರೋಗವನ್ನು ತಡೆಗಟ್ಟಲು ಜಗತ್ತಿನ ನಾನಾ ದೇಶಗಳು ವ್ಯಾಕ್ಸಿನ್ ಕಂಡು ಹಿಡಿದಿವೆ. ಈ ವ್ಯಾಕ್ಸಿನ್ ಪಡೆದ ನಂತರ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಆದರೆ ಸೋಂಕು ವ್ಯಾಕ್ಸಿನ್ ಪಡೆದ ಮೇಲು ತಗಲುತ್ತಿದೆ. ಈ ಕೊರೊನಾ ವ್ಯಾಕ್ಸಿನ್​ನನ್ನು ಎರಡು ಹಂತಗಳಲ್ಲಿ ಭಾರತದಲ್ಲಿ ನೀಡಲಾಗಿತ್ತು. ನಂತರ ಇತ್ತೀಚಿಗೆ ಬೂಸ್ಟರ್ ಡೋಸ್​ನ್ನು ನೀಡಲಾಗುತ್ತಿದೆ. ಇನ್ನು ಕೊರೊನಾ 1st ಡೋಸ್ ವ್ಯಾಕ್ಸಿನ್ ಪಡೆದ ಮೇಲೆ 3-4 ತಿಂಗಳ ನಂತರ ಕೊರೊನಾ 2nd ಡೋಸ್ ಪಡೆಯಲಾಗುತ್ತದೆ. ಈಗ 2nd ಡೋಸ್ ಪಡೆದ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದರೆ 2nd ಡೋಸ್ ಪಡೆದ ನಂತರ ನಿರ್ಧಿಷ್ಟ ಕಾಲಮಿತಿ  ಬಳಿಕ ನೀಡಲಾಗುತ್ತಿದೆ. ಕಾರಣ ಒಂದು ಡೋಸ್ ಪಡೆದ ನಂತರ ಅದರ ಪರಿಣಾಮ ಇಂತಿಷ್ಟು ದಿನಗಳವರೆಗೆ ಮಾತ್ರ ಇರುತ್ತದೆ. ಹೀಗಾಗಿ ಎರಡನೇ ಮತ್ತು ಮೂರನೇ ಡೋಸ್ ನೀಡಲಾಗುತ್ತಿದೆ.

ಇದನ್ನು ಓದಿ: ರಾಗಿಣಿ ದ್ವಿವೇದಿ ಬರ್ತ್​​ಡೇಗೆ ಸಿಕ್ತು ಸಖತ್ ಗಿಫ್ಟ್​; ಫ್ಯಾನ್ಸ್ ಖುಷ್

ಆದರೆ ಇದು ಕ್ಯಾನ್ಸರ್ ರೋಗಿಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯುಕೆ ಕೊರೊನಾವೈರಸ್ ಕ್ಯಾನ್ಸರ್ ಮೌಲ್ಯಮಾಪನ ಯೋಜನೆ ಒಂದು ಅಧ್ಯಯನ ನಡೆಸಿದೆ. ಅದು ಕೆಲವು ಕ್ಯಾನ್ಸರ್ ರೋಗಿಗಳು ಕೊರೊನಾ ವ್ಯಾಕ್ಸಿನ್ ಪಡೆದ ನಂತರ ಸಾಮಾನ್ಯ  ಜನರಿಗಿಂತ ಮೂರರಿಂದ ಆರು ತಿಂಗಳ ಒಳಗೆ ಇದರ ಪ್ರಭಾವ ಕಡಿಮೆಯಾಗುತ್ತದೆ ಎಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದೆ.  ಹೀಗಾಗಿ ಅವರು ಬೂಸ್ಟರ್ ಡೋಸ್‌ ಪಡೆಯುವುದು ಅತ್ಯಗತ್ಯವಾಗಿದೆ ಎಂದು ಹೇಳಿದೆ.

ಸದ್ಯ ಜನಜೀವನ ಮೊದಲಿನಂತೆ ಮರಳಿದೆ ಆದರೂ ಕ್ಯಾನ್ಸರ್ ರೋಗಿಗಳು ಮತ್ತು ಕೊರೊನಾ ಭಯ ಇರುವ ಜನರು ಇನ್ನೂ ಹೋಮ್​ ಕ್ಷಾರೆಂಟೈನ್ ಆಗಿದ್ದಾರೆ. ಯುಕೆಯ ಕೊರೊನಾವೈರಸ್ ಕ್ಯಾನ್ಸರ್ ಮೌಲ್ಯಮಾಪನ ಯೋಜನೆಯು ಲ್ಯಾನ್ಸೆಟ್  ಸೋಮವಾರ (ಮೇ 23) ರಂದು ಪ್ರಕಟಿಸಿದ ವರದಿಯಲ್ಲಿ ಕ್ಯಾನ್ಸರ್ ಹೊಂದಿರುವ ಜನರ ಮೇಲೆ ಕೋವಿಡ್ -19 ವ್ಯಾಕ್ಸಿನೇಷನ್ ಪರಿಣಾಮದ ವಿಶ್ವದ ಅತಿದೊಡ್ಡ ಪರೀಕ್ಷೆ ಎಂದು ಹೇಳಲಾಗಿದೆ. ಇದನ್ನು ಆಕ್ಸ್‌ಫರ್ಡ್, ಬರ್ಮಿಂಗ್ಹ್ಯಾಮ್ ಮತ್ತು ಸೌತಾಂಪ್ಟನ್ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದ ನೇತೃತ್ವದ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಸಹ-ನೇತೃತ್ವದಲ್ಲಿ ಅಧ್ಯಯನವನ್ನು ಕೈಗೊಳ್ಳಲಾಗಿದೆ.

ಈ ಅಧ್ಯಯನವನ್ನು ಜನವರಿ 2018 ಮತ್ತು ಏಪ್ರಿಲ್ 2021 ರ ನಡುವೆ ಕೈಗೊಳ್ಳಲಾಗಿದೆ. ಈ ಅಧ್ಯಯನಕ್ಕೆ 18 ವರ್ಷಕ್ಕಿಂತ ಮೇಲ್ಪಟ್ಟ 3.77 ಲಕ್ಷ ಸಕ್ರಿಯ ಕ್ಯಾನ್ಸರ್ ರೋಗಿಗಳ ಒಳಪಡಿಸಲಾಗಿದೆ.  ಎಲ್ಲಾ ವ್ಯಕ್ತಿಗಳು ಎರಡು ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದಿದ್ದಾರೆ ಮತ್ತು SARS-CoV-2 PCR  ವ್ಯಾಕ್ಸಿನ್​ಗೆ ಒಳಗಾಗಿದ್ದಾರೆ.  ಇವರನ್ನು ಡಿಸೆಂಬರ್ 2020 ಮತ್ತು ಅಕ್ಟೋಬರ್ 2021 ರ ನಡುವೆ ಇಂಗ್ಲೆಂಡ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.

ಲಸಿಕೆ ಪರಿಣಾಮಕಾರಿ ಕ್ಯಾನ್ಸರ್ ರೋಗಿಗಳು ಕೊರೊನಾ ಚಿಕಿತ್ಸೆಯಿಂದಾಗಿ ರೋಗನಿರೋಧಕ ಶಕ್ತಿಯನ್ನು ಪಡೆದಿದ್ದಾರೆ. ಹಾಗೇ ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್ -19 ಲಸಿಕೆ ಪರಿಣಾಮಕಾರಿಯಾಗಿದೆ ಎಂದು ತಂಡವು ಕಂಡುಹಿಡಿದಿದೆ. ಅಧ್ಯಯನದ ಅವಧಿಯಲ್ಲಿ Covid-19 ಲಸಿಕೆಯ ಎರಡು ಡೋಸ್‌ಗಳ ನಂತರ ಸಾಮಾನ್ಯ ಜನಸಂಖ್ಯೆಯಲ್ಲಿ ಸೋಂಕಿನ ವಿರುದ್ಧ ಒಟ್ಟಾರೆ ಲಸಿಕೆ ಪ್ರಭಾರ 69.8% ಆಗಿದ್ದರೆ, ಕ್ಯಾನ್ಸರ್ ರೋಗಿಗಳಲ್ಲಿ ಒಟ್ಟಾರೆ ಲಸಿಕೆ ಪ್ರಭಾವವು 65.5% ರಷ್ಟಿದೆ. ಇದು ಸಾಮಾನ್ಯ ಜನರಿಗಿಂತ ಕಡಿಮೆಯಾಗಿದೆ ಎಂದು ವಿಶ್ಲೇಷಣೆ ಹೇಳಿದೆ.

ಇದನ್ನು ಓದಿ: ಮೇ 25ಕ್ಕೆ ಭಾರತ್ ಬಂದ್​​: ಬಂದ್​​ಗೆ ಕರೆ ನೀಡಿದ್ದು ಯಾರು? ಬೇಡಿಕೆಗಳು ಏನು?

ಕ್ಯಾನ್ಸರ್ ರೋಗಿಗಳಲ್ಲಿ ವ್ಯಾಕಕ್ಸಿನ್ ಪ್ರಭಾವವು  ವೇಗವಾಗಿ ಕ್ಷೀಣಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಎರಡನೇ ಲಸಿಕೆ  ನಂತರ ಮೂರು-ಆರು ತಿಂಗಳ ನಂತರ ಸಾಮಾನ್ಯ ಜನಸಂಖ್ಯೆಯಲ್ಲಿ ಶೇ 61.4 ರಷ್ಟು ಕಡಿಮೆಯಾದರೇ, ಕ್ಯಾನ್ಸರ್ ರೋಗಿಗಳಲ್ಲಿ ಶೇ 47.0 ರಷ್ಟು ಲಸಿಕೆ ಪ್ರಭಾವ ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ” ಎಂದು ಅಧ್ಯಯನ ತಂಡ  ಹೇಳಿದೆ.

ರಕ್ತದ ಕ್ಯಾನ್ಸರ್ ಲಿಂಫೋಮಾ ಮತ್ತು ಲ್ಯುಕೇಮಿಯಾ ವಿರುದ್ಧ ಹೋರಾಡುತ್ತಿರುವವರಿಗೆ ಈ ಸಂಶೋಧನೆಗಳು ಹೆಚ್ಚು ಗೊಂದಲವನ್ನುಂಟುಮಾಡಿದೆ.  ಏಕೆಂದರೆ ಅವರು ಕ್ಯಾನ್ಸರ್ ಹೊಂದಿರುವ ಇತರ ರೋಗಿಗಳಿಗಿಂತ ಹೆಚ್ಚು ವೇಗವಾಗಿ ಲಸಿಕೆಯ ಪ್ರಭಾವವನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಯುಕೆ ಕೊರೊನಾವೈರಸ್ ಕ್ಯಾನ್ಸರ್ ಮೌಲ್ಯಮಾಪನ ಯೋಜನೆ ಹೇಳಿದೆ.

ಕ್ಯಾನ್ಸರ್ ರೋಗಿಗಳಿಗೆ ನೀಡಿರುವ ಚಿಕಿತ್ಸೆ  ರೋಗನಿರೋಧಕ ಹೆಚ್ಚಿಸಿದೆ. ಒಂದು ವರ್ಷದ ಹಿಂದೆ ಕೀಮೋಥೆರಪಿ ಅಥವಾ ರೇಡಿಯೊಥೆರಪಿಯೊಂದಿಗೆ ಚಿಕಿತ್ಸೆ ಪಡೆದ ಕ್ಯಾನ್ಸರ್ ರೋಗಿಗಳಲ್ಲಿ ಲಸಿಕೆ ಪ್ರಭಾವವು ಕಡಿಮೆಯಾಗಿದೆ. ಕೊರೊನಾ ಚಿಕಿತ್ಸೆಯನ್ನು ಪಡೆದ ಕ್ಯಾನ್ಸರ್ ರೋಗಿಗಳಲ್ಲೂ ರೋಗನಿರೋಧಕ ಶಕ್ತಿ ಮೂರರಿಂದ ಆರು ತಿಂಗಳ ಒಳಗೆ ಕ್ಷೀಣಿಸಿತು. .

ಬೂಸ್ಟರ್ ಹೊಡೆತಗಳು ನಿರ್ಣಾಯಕ ಸೌತಾಂಪ್ಟನ್ ವಿಶ್ವವಿದ್ಯಾಲಯದ ವೈದ್ಯಕೀಯ ಆಂಕೊಲಾಜಿ ಪ್ರಾಧ್ಯಾಪಕ ಪೀಟರ್ ಜಾನ್ಸನ್, ಅವರು ಕ್ಯಾನ್ಸರ್ ರೋಗಿಗಳ ಬೂಸ್ಟರ್ ಡೋಸ್ ಪಡೆಯುವುದು ಅತ್ಯವಶ್ಯಕ ಎಂದು ಹೇಳಿದ್ದಾರೆ. ಸಂಶೋಧನೆಯ ನಿರ್ದೇಶಕ ಹೆಲೆನ್ ರೌನ್‌ಟ್ರೀ  “ರಕ್ತ ಕ್ಯಾನ್ಸರ್ ಇರುವವರಿಗೆ ಲಸಿಕೆಗಳು ಎಷ್ಟು ಮುಖ್ಯವೆಂದು ನಮಗೆ ತಿಳಿದಿದೆ. ರಕ್ತದ ಕ್ಯಾನ್ಸರ್ ಇರುವವರಲ್ಲಿ ರೋಗನಿರೋಧಕ ಶಕ್ತಿ ವೇಗವಾಗಿ ಕ್ಷೀಣಿಸುತ್ತದೆ ಎಂದು ಈ ಅಧ್ಯಯನವು ಮುಖ್ಯವಾಗಿ ತೋರಿಸುತ್ತದೆ ಮತ್ತು ರಕ್ತ ಕ್ಯಾನ್ಸರ್ ಹೊಂದಿರುವ ಪ್ರತಿಯೊಬ್ಬರು ಬೂಸ್ಟರ್ ಡೋಸ್​ನ್ನು ಪಡೆಯುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.

ಅಧ್ಯಯನವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಕೇರ್ ರಿಸರ್ಚ್ ಆಕ್ಸ್‌ಫರ್ಡ್ ಬಯೋಮೆಡಿಕಲ್ ರಿಸರ್ಚ್ ಸೆಂಟರ್, ಸೌತಾಂಪ್ಟನ್ ವಿಶ್ವವಿದ್ಯಾಲಯ, ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯ, ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಮತ್ತು ಬ್ಲಡ್ ಕ್ಯಾನ್ಸರ್ ಯುಕೆ ಬೆಂಬಲಿಸಿವೆ.

ಇದನ್ನೂ ಓದಿ

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada