ಕಳೆದ ವರ್ಷ ಭಾರತ ನೀಡಿದ್ದ ಸಹಾಯ ಸ್ಮರಿಸಿದ ಯೂರೋಪಿಯನ್ ಯೂನಿಯನ್ ನಾಯಕರು

European union: ಅಲ್ಲದೇ ಕೊರೊನಾ ಲಸಿಕೆಯ ಪೇಟೆಂಟ್ ವಿನಾಯಿತಿಗೆ ಬೆಂಬಲ ನೀಡುವಂತೆಯೂ ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ಭಾರತ ನೀಡಿದ್ದ ಸಹಾಯ ಸ್ಮರಿಸಿದ ಯೂರೋಪಿಯನ್ ಯೂನಿಯನ್ ನಾಯಕರು
ಪ್ರಾತಿನಿಧಿಕ ಚಿತ್ರ

ದೆಹಲಿ: ಭಾರತ ಮಾನವೀಯತೆಯಿಂದ ಸಾಕಷ್ಟು ದೇಶಗಳಿಗೆ ಲಸಿಕೆ ರಫ್ತು ಮಾಡಿದೆ. ಆದರೆ ಈಗ ಭಾರತದಲ್ಲಿರುವ ಸ್ಥಿತಿ ನಮಗೆ ಗೊತ್ತಿದೆ. ಇಡೀ ವಿಶ್ವ ಕೊರೊನಾ ಕಾಲದಲ್ಲಿ ಭಾರತದ ಜೊತೆಗೆ ಇದೆ. ಕೊರೊನಾ ಲಸಿಕೆ ಪೂರೈಕೆ ಬಗ್ಗೆ ಭಾರತ ಯಾರದ್ದೇ ಉಪನ್ಯಾಸ ಕೇಳುವ ಅಗತ್ಯವಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಯೂರೋಪಿಯನ್ ಯೂನಿಯನ್ ರಾಷ್ಟ್ರಗಳ ಸಮಾವೇಶದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಕ್ಕೂಟ ರಾಷ್ಟ್ರಗಳು ಕೊವಿಡ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಬೆಂಬಲ ಸೂಚಿಸಿವೆ. ಅಷ್ಟೇ ಅಲ್ಲದೇ, ಕಳೆದ ವರ್ಷ ಭಾರತ ಲಸಿಕೆ, ವೈದ್ಯಕೀಯ ನೆರವು ನೀಡಿದ್ದಕ್ಕಾಗಿ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳ ನಾಯಕರು ಸಮಾವೇಶದಲ್ಲಿ ವೈಯಕ್ತಿಕವಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಸಮಾವೇಶದಲ್ಲಿ ವರ್ಚುವಲ್ ಮೂಲಕ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕೆಮ್ ಚೋ ಎಂದು ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಶುಭಕೋರಿದ್ದಾರೆ. ಬೆಲ್ಜಿಯಂನಲ್ಲಿ ಏಳು ಸಾವಿರ ಮಂದಿ ಗುಜರಾತಿಗಳಿದ್ದಾರೆ ಎಂದು ಅವರು ಈ ವೇಳೆ ನೆನಪಿಸಿಕೊಂಡಿದ್ದಾರೆ. ಜತೆಗೆ ಕಳೆದ ವರ್ಷ ಭಾರತದ ನೆರವು ಪಡೆದಿದ್ದ ಕುರಿತು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಜ್ ಸಹ ಸ್ಮರಿಸಿಕೊಂಡಿದ್ದಾರೆ. ಸಮಾವೇಶದಲ್ಲಿ ಉಪಸ್ಥಿತರಿದ್ದ ಪೋರ್ಚುಗೀಸ್ ಪ್ರಧಾನಿ ಅಂಟೋನಿಯೋ ಕೋಸ್ಟಾ ‘ತಾವು ಸಾಗರೋತ್ತರ ಭಾರತೀಯ ನಾಗರಿಕ. 1961 ಕ್ಕೂ ಮುಂಚೆ ಗೋವಾ ಪೋರ್ಚುಗೀಸ್ ರ ಆಳ್ವಿಕೆಯಲ್ಲಿ ಇತ್ತು. ಆಗ ನನ್ನ ತಂದೆಯವರು ಗೋವಾದಲ್ಲಿ ವಾಸವಿದ್ದರು. ಹೀಗಾಗಿ ಪೋರ್ಚುಗೀಸ್ ಪ್ರಧಾನಿ ಆದ ನಾನು ಈಗಲೂ ಸಾಗರೋತ್ತರ ಭಾರತೀಯ ನಾಗರಿಕ ಎಂದು ಉಲ್ಲೇಖಿಸಿದ್ದಾರೆ.

ಭಾರತಕ್ಕೆ ಕೊರೊನಾ ಸಂಕಷ್ಟ ಕಾಲದಲ್ಲಿ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳಿಂದ ಬೆಂಬಲ
ವರ್ಡ್ ಟ್ರೇಡ್ ಆರ್ಗನೈಸೇಶನ್ ಸಭೆಯಲ್ಲಿ ಟ್ರಿಪ್ಸ್ ವಿನಾಯಿತಿಗೆ ಬೆಂಬಲ ನೀಡಲು ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಕೊರೊನಾ ಲಸಿಕೆಯ ಪೇಟೆಂಟ್ ವಿನಾಯಿತಿಗೆ ಬೆಂಬಲ ನೀಡುವಂತೆಯೂ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಜತೆಗೆ ಭಾರತದ ಜತೆಗೆ ಅತ್ಯಂತ ಮಹತ್ವದ ವಾಣಿಜ್ಯ ಒಪ್ಪಂದಗಳಿಗೆ ಯೂರೋಪಿಯನ್ ಯೂನಿಯನ್​ನ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ಯಾವುದೇ ಕೊವಿಡ್​ 19 ಕೇಂದ್ರಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ;  ನೀತಿ ಪರಿಷ್ಕರಿಸಿದ ಕೇಂದ್ರ  

(European union leaders praise India and support in Covid war in virtual summit )