AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಕೂಗು, ಎಲ್ಲೆಡೆ ಪ್ರತಿಭಟನೆ

ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಮತ್ತೆ ಆಗ್ರಹಗಳು ಕೇಳಿಬರುತ್ತಿವೆ, ನೇಪಾಳಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಗಳು ಕೂಡ ನಡೆಯುತ್ತಿವೆ. ಜತೆಗೆ ರಾಜಪ್ರಭುತ್ವವನ್ನು ಮರುಸ್ಥಾಪಿಸುವ ಕುರಿತು ಕೂಗು ಕೇಳಿಬರುತ್ತಿದೆ.

ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಕೂಗು, ಎಲ್ಲೆಡೆ ಪ್ರತಿಭಟನೆ
ನೇಪಾಳ ಪ್ರತಿಭಟನೆImage Credit source: Times Algebra
Follow us
ನಯನಾ ರಾಜೀವ್
|

Updated on: Feb 22, 2024 | 11:57 AM

ನೇಪಾಳ(Nepal)ವನ್ನು ಹಿಂದೂ ರಾಷ್ಟ್ರ(Hindu Nation)ವನ್ನಾಗಿ ಘೋಷಿಸಬೇಕೆಂದು ನೇಪಾಳಿ ಕಾಂಗ್ರೆಸ್​ ಪಕ್ಷವು ಮತ್ತೆ ಬೇಡಿಕೆಯನ್ನಿಟ್ಟಿದೆ. ಈ ಹಿನ್ನೆಲೆಯಲ್ಲಿ ನೇಪಾಳಿ ಕಾಂಗ್ರೆಸ್​ ಪಕ್ಷವು ಹಿಂದೂ ರಾಷ್ಟ್ರ ಹಾಗೂ ರಾಜ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಒತ್ತಾಯಿಸಿ ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿತು. ಪ್ರಧಾನಿ ಪುಷ್ಪ ಕಮಲ್ ದಹಲ್ ಅವರಿಗೆ 40 ಅಂಶಗಳ ಕಾರ್ಯಸೂಚಿಯನ್ನು ಸಲ್ಲಿಸಿದೆ. ದೇಶವು ನಿರ್ಣಾಯಕ ಹಂತವನ್ನು ತಲುಪಿದೆ ಆದ್ದರಿಂದ ನಮಗೆ ರಾಜಕೀಯ ಪಕ್ಷಗಳ ನಡುವೆ ಹೊಸ ತಿಳಿವಳಿಕೆ ಮತ್ತು ಒಪ್ಪಂದದ ಅಗತ್ಯವಿದೆ ಎಂದು ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಅಧ್ಯಕ್ಷ ರಾಜೇಂದ್ರ ಹೇಳಿದ್ದಾರೆ.

ನಾವು ಹಿಂದೂ ರಾಷ್ಟ್ರ ಮತ್ತು ರಾಜಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯಿಸಿದ್ದೇವೆ. ಹಣದುಬ್ಬರವನ್ನು ಕೊನೆಗೊಳಿಸಲು, ಸಾರ್ವಜನಿಕ ಜೀವನವನ್ನು ಸರಾಗಗೊಳಿಸಲು, ಫೆಡರಲ್ ರಚನೆಯನ್ನು ರದ್ದುಗೊಳಿಸಲು, ಭ್ರಷ್ಟಾಚಾರ ನಿಯಂತ್ರಣ, ಉತ್ತಮ ಆಡಳಿತಕ್ಕೆ ಕರೆ ನೀಡಿದ್ದೇವೆ ಎಂದು ಪಕ್ಷದ ವಕ್ತಾರ ಮೋಹನ್ ಶ್ರೇಷ್ಠಾ ಹೇಳಿದ್ದಾರೆ.

ನೇಪಾಳದ 81 ಪ್ರತಿಶತ ನಾಗರಿಕರು ಹಿಂದೂಗಳಾಗಿರುವುದರಿಂದ ಇತ್ತೀಚಿಗೆ ಮುಕ್ತಾಯಗೊಂಡ ವಸಂತ ಪಂಚಮಿ ಆಚರಣೆ ಸೇರಿದಂತೆ ಪ್ರಧಾನಿಯಿಂದ ರಾಷ್ಟ್ರಪತಿಗಳವರೆಗೆ ಎಲ್ಲಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರಿಂದ ಹಿಂದೂ ರಾಷ್ಟ್ರ ಮರುಸ್ಥಾಪನೆಗಾಗಿ ಧ್ವನಿ ಎತ್ತುತ್ತಿದೆ.

ಮತ್ತಷ್ಟು ಓದಿ: Hindu Temples: ಭಾರತದ ಹೊರಗಿನ 12 ಪ್ರಸಿದ್ಧ, ಸುಂದರವಾದ ಹಿಂದೂ ದೇವಾಲಯಗಳು ಇಲ್ಲಿವೆ

2008 ರಲ್ಲಿ ರಾಜಪ್ರಭುತ್ವದ ಅಂತ್ಯ ನೇಪಾಳ ಅಧಿಕೃತವಾಗಿ 28 ಮೇ 2008 ರಂದು ಗಣರಾಜ್ಯವಾಯಿತು. ನಂತರ ನೇಪಾಳದ ಸಂವಿಧಾನ ಸಭೆಯ ಮೊದಲ ಸಭೆ ನಡೆಯಿತು, ಅದರ ನಂತರ ಶಾ ರಾಜರ 240 ವರ್ಷಗಳ ರಾಜಪ್ರಭುತ್ವವು ಕೊನೆಗೊಂಡಿತು. ನೇಪಾಳವು ಜಾತ್ಯತೀತ ರಾಷ್ಟ್ರವಾಗಿದ್ದರೂ, ಅದು ತನ್ನ ಹಿಂದೂ ಪೂರ್ವಜರ ಬಗ್ಗೆ ಹೆಮ್ಮೆಪಡುತ್ತದೆ. ಪ್ರಸ್ತುತ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆಯನ್ನು ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ.

ಜನರ ಹೋರಾಟದ ಫಲವಾಗಿ 2006ರಲ್ಲಿ ರಾಜಪ್ರಭುತ್ವ ಕೊನೆಗೊಂಡ ಬಳಿಕ 2008ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ನೇಪಾಳವನ್ನು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತ್ತು.

2015ರಲ್ಲಿ ಏನಾಗಿತ್ತು? ನೇಪಾಳವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕು ಎನ್ನುವ ಪ್ರಸ್ತಾಪವನ್ನು ಸಂವಿಧಾನ ಸಭೆ ಭಾರಿ ಬಹುಮತದೊಂದಿಗೆ ತಿರಸ್ಕರಿಸಿತ್ತು. ಈ ದೇಶ ಧರ್ಮನಿರಪೇಕ್ಷವಾಗಿಯೇ ಉಳಿದುಕೊಳ್ಳಲಿದೆ ಎಂದು ಹೇಳಿತ್ತು.

ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದುರಾಷ್ಟ್ರ ಎಂದು ಘೋಷಿಸಬೇಕು ಎಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷ ಮಂಡಿಸಿದ್ದ ನಿರ್ಣಯದ ಪರವಾಗಿ ಕೇವಲ 21 ಮತಗಳು ಮಾತ್ರ ಬಿದ್ದವು. ಉಳಿದ 580 ಮಂದಿ ಸಂಸದರು ಅದಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ. ಪ್ರತಿಭಟನೆ ಹಿಂದು ರಾಷ್ಟ್ರ ಎಂದು ನಾಮಕಾರಣ ಮಾಡುವ ಪ್ರಸ್ತಾಪ ಬಿದ್ದು ಹೋಗಿದ್ದನ್ನು ಪ್ರತಿಭಟಿಸಿ, ಇಲ್ಲಿನ ಹೊಸ ಬಾಣೇಶ್ವರ ಪ್ರದೇಶದಲ್ಲಿ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ವಾಹನಗಳನ್ನು ಜಖಂ ಗೊಳಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​