Sign In

By signing in or creating an account, you agree with Associated Broadcasting Company's Terms & Conditions and Privacy Policy.

6ಜಿ ತಂತ್ರಜ್ಞಾನದ ಸರ್ವತ್ರ ಸಂಪರ್ಕ ಕುರಿತ ಭಾರತದ ಪ್ರಸ್ತಾವನೆ ಅಂಗೀಕರಿಸಿದ ವಿಶ್ವಸಂಸ್ಥೆ

India 6G vision gets global play; ಭಾರತದ ತನ್ನ 6ಜಿ ವಿಷನ್ ಡಾಕ್ಯುಮೆಂಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, 6ಜಿ ತಂತ್ರಜ್ಞಾನದ ಅಳವಡಿಕೆ ಕೈಗೆಟುಕುವ ದರದಲ್ಲಿ ಸರ್ವತ್ರ ಲಭ್ಯವಾಗಬೇಕು ಎಂದು ಪ್ರಸ್ತಾಪಿಸಲಾಗಿದೆ.

6ಜಿ ತಂತ್ರಜ್ಞಾನದ ಸರ್ವತ್ರ ಸಂಪರ್ಕ ಕುರಿತ ಭಾರತದ ಪ್ರಸ್ತಾವನೆ ಅಂಗೀಕರಿಸಿದ ವಿಶ್ವಸಂಸ್ಥೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Sep 27, 2023 | 10:31 PM

ನವದೆಹಲಿ, ಸೆಪ್ಟೆಂಬರ್ 27: 6ಜಿ ತಂತ್ರಜ್ಞಾನವನ್ನು (6G technology) ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಹೊಂದಿರುವ ದೃಷ್ಟಿಕೋನಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ (United Nations) ಇಂಟರ್​​ನ್ಯಾಶನಲ್ ಟೆಲಿಕಮ್ಯುನಿಕೇಷನ್ ಯೂನಿಯನ್​ನ (ITU) ಅಧ್ಯಯನ ತಂಡವು ಅಂಗೀಕರಿಸಿದೆ. ಜಿನೀವಾದಲ್ಲಿ ನಡೆದ ಐಟಿಯು ಅಧ್ಯಯನ ಗುಂಪಿನ ಸಭೆಯಲ್ಲಿ ಭಾರತದ ನಿಲುವನ್ನು ಅಂಗೀಕರಿಸಲಾಯಿತು. ಈ ಕ್ರಮವು ಮುಂದಿನ ಪೀಳಿಗೆಯ ತಂತ್ರಜ್ಞಾನದ ನಿಯೋಜನೆಯ ವೆಚ್ಚವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಐಟಿಯು ಅಂತಾರಾಷ್ಟ್ರೀಯ ಮೊಬೈಲ್ ದೂರಸಂಪರ್ಕ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ.

ಪ್ರಸ್ತುತ ಸಭೆಯಲ್ಲಿ, ಕೆಲವು ಸದಸ್ಯ ರಾಷ್ಟ್ರಗಳಿಂದ ಪ್ರತಿರೋಧ ಮತ್ತು ಪ್ರಗತಿಯನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳ ಹೊರತಾಗಿಯೂ, ದೂರಸಂಪರ್ಕ ಇಲಾಖೆಯು ‘ಸರ್ವತ್ರ ಸಂಪರ್ಕ’ವನ್ನು ಯಶಸ್ವಿಯಾಗಿ ಚೌಕಟ್ಟಿನಲ್ಲಿ ಸೇರಿಸಲು ಮತ್ತು ಆ ಕುರಿತ ದಾಖಲೆಯನ್ನು ಅನುಮೋದಿಸಲು ಸಾಧ್ಯವಾಯಿತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಪ್ರಸ್ತಾವನೆಯನ್ನು ಜಿನೀವಾದಲ್ಲಿ 2023ರ ಸೆಪ್ಟೆಂಬರ್ 25-26 ರಂದು ನಡೆದ ಐಟಿಯು ಸ್ಟಡಿ ಗ್ರೂಪ್ (SG-5) ಸಭೆಯು ಅಂಗೀಕರಿಸಿದೆ. ಐಎಂಟಿ 2030 ಅನ್ನು 6ಜಿ ಎಂದೂ ಕರೆಯುತ್ತಾರೆ. ಇದನ್ನು ‘ಐಟಿಯು ಆರ್ ಸ್ಟಡಿ ಗ್ರೂಪ್ 5’ನ ‘ವರ್ಕಿಂಗ್ ಪಾರ್ಟಿ 5D’ ಅಭಿವೃದ್ಧಿಪಡಿಸುತ್ತಿದೆ.

ಭಾರತದ 6ಜಿ ವಿಷನ್ ಡಾಕ್ಯುಮೆಂಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, 6ಜಿ ತಂತ್ರಜ್ಞಾನದ ಅಳವಡಿಕೆ ಕೈಗೆಟುಕುವ ದರದಲ್ಲಿ ಸರ್ವತ್ರ ಲಭ್ಯವಾಗಬೇಕು ಎಂದು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: 5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ

ಅಧ್ಯಯನ ಗುಂಪಿನ ಹಿಂದಿನ ಸಭೆಯಲ್ಲಿ ಭಾರತೀಯ ನಿಯೋಗವು ‘6ಜಿ ಸರ್ವತ್ರ ಸಂಪರ್ಕ’ ಪ್ರಸ್ತಾವನೆಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ. IMT2030 ಫ್ರೇಮ್‌ವರ್ಕ್ ಬಳಕೆಯ ಸನ್ನಿವೇಶವಾಗಿ, ಡಿಜಿಟಲ್ ವಿಭಜನೆಯನ್ನು ತಗ್ಗಿಸಲು ಮತ್ತು ಮೊಬೈಲ್ ತಂತ್ರಜ್ಞಾನಗಳ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸಲು ನಗರ ಮತ್ತು ಗ್ರಾಮೀಣ ಜನಸಂಖ್ಯೆಯನ್ನು ಒಳಗೊಂಡಂತೆ ಎಲ್ಲರಿಗೂ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಅನ್ನು ಸಕ್ರಿಯಗೊಳಿಸುತ್ತದೆ ಎಂದು ಐಟಿಯು ಎನ್​​ಜಿಎನ್​​ನ ತಜ್ಞರ ಗುಂಪಿನ ಸದಸ್ಯ ಸತ್ಯ ಎನ್ ಗುಪ್ತಾ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ