ವಿಶ್ವಸಂಸ್ಥೆಯಲ್ಲಿ ರಷ್ಯಾ ಕ್ರಮ ಖಂಡಿಸುವ ಮತದಾನದಿಂದ ಭಾರತ ದೂರ ಉಳಿದದ್ದು ನಿರಾಶದಾಯಕ: ಅಮೆರಿಕ ಸೆನೆಟ್ ಸದಸ್ಯ

‘ಮೊದಲಿಗೆ ವ್ಲಾದಿಮಿರ್ ಪುಟಿನ್ ಮತ್ತು ರಷ್ಯಾದ ಸರ್ಕರವನ್ನು ಹೊಣೆಗಾರನ್ನಾಗಿ ಮಾಡಬೇಕಿದೆ. ನಿರ್ಬಂಧ ಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಕುಣಿಕೆಯನ್ನು ಬಿಗಿಗೊಳಿಸುತ್ತೇವೆ, ಈ ಕೆಲಸ ನಾವಿನ್ನೂ ಆರಂಭಿಸಿಲ್ಲ,’ ಎಂದು ಫಿಜ್ ಪ್ಯಾಟ್ರಿಕ್ ಹೇಳಿದರು.

ವಿಶ್ವಸಂಸ್ಥೆಯಲ್ಲಿ ರಷ್ಯಾ ಕ್ರಮ ಖಂಡಿಸುವ ಮತದಾನದಿಂದ ಭಾರತ ದೂರ ಉಳಿದದ್ದು ನಿರಾಶದಾಯಕ: ಅಮೆರಿಕ ಸೆನೆಟ್ ಸದಸ್ಯ
ಯುದ್ಧದಲ್ಲಿ ಹಾಳಾಗಿರುವ ಉಕ್ರೇನ್ ಪಟ್ಟಣಗಳು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 6:21 AM

ವಾಷಿಂಗ್ಟನ್:  ಉಕ್ರೇನ್ ವಿರುದ್ಧ ರಷ್ಯಾದ ಸೇನೆ ನಡೆಸಿರುವ ಆಕ್ರಮಣದ ಮೇಲೆ ವಿಶ್ವಸಂಸ್ಥೆಯಲ್ಲಿ ನಡೆದ ವೋಟಿಂಗ್ ನಲ್ಲಿ ಇಂಡಿಯ (India) ಭಾಗವಹಿಸದಿರುವುದು ತೀವ್ರ ಸ್ವರೂಪದ ನಿರಾಶೆಯನ್ನುಂಟು ಮಾಡಿದೆ ಎಂದು ಯುಎಸ್ ಕಾಂಗ್ರೆಸ್ ಸದಸ್ಯರೊಬ್ಬರು ಗುರುವಾರ ವಾಷಿಂಗ್ಟನ್ ನಲ್ಲಿ ಹೇಳಿದ್ದಾರೆ. ಪೆನ್ ಸಿಲ್ವೇನಿಯಾದ (Pennsylvania) ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯರಾಗಿರುವ ಬ್ರಿಯಾನ್ ಫಿಜ್ ಪ್ಯಾಟ್ರಿಕ್ (Brian Fitzpatrick) ಅವರು, ರಷ್ಯಾದೆಡೆ ತಮ್ಮ ಒಲವು ಪ್ರಕಟಿಸುತ್ತಿರುವ ದೇಶಗಳನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆ ಈಗ ತಲೆದೋರಿದೆ ಎಂದು ಸಿ ಎನ್ ಎನ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಿನ್ನೆಯಷ್ಟೇ ನಾನು ಇಂಡಿಯಾದ ರಾಯಭಾರಿ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯಲ್ಲಿ ನಡೆದ ವೋಟಿಂಗ್ ನಲ್ಲಿ ಭಾರತ ಗೈರುಹಾಜರಾಗಿದ್ದ ಸಂಗತಿಯನ್ನು ಪ್ರಸ್ತಾಪಿಸಿದೆ. ಭಾರತದ ಈ ನಡೆಯಿಂದ ನಮಗೆ ಬಹಳ ನಿರಾಶೆಯಾಗಿದೆ,’ ಎಂದು ಹೇಳಿದ ಬ್ರಿಯಾನ್ ಫಿಜ್ ಪ್ಯಾಟ್ರಿಕ್ ಅವರು ವಾಷಿಂಗ್ಟನ್ ನಲ್ಲಿ ಭಾರತದ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಅವರನ್ನು ಭೇಟಿಯಾದ ವಿಷಯವನ್ನು ಉಲ್ಲೇಖಿಸಿದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಜಾರಿಯಲ್ಲಿರುವ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಕಠಿಣ ನಿಲುವು ತಳೆಯಲು ಹಿಂಜರಿಯುತ್ತಿರುವ ದೇಶಗಳ ಬಗ್ಗೆ ಅಮೇರಿಕಾ ಏನು ಭಾವಿಸುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಫಿಜ್ ಪ್ಯಾಟ್ರಿಕ್ ಅವರು, ‘ಈಗ ತಲೆದೋರಿರುವ ಸ್ಥಿತಿಗೆ ಅವರನ್ನು ಹೊಣೆಗಾರನ್ನಾಗಿ ಮಾಡುವುದು,’ ಅಂತ ಹೇಳಿ, ‘ಗುರುವಾರ ಬೆಳಗ್ಗೆ ನಮಗೆ ಲಭ್ಯವಾಗಿರುವ ವರದಿಯ ಪ್ರಕಾರ ರಷ್ಯಾ ವಿರುದ್ಧ ಸಂಪೂರ್ಣ ತೈಲ ನಿಷೇಧ ಹೇರಲು ಜರ್ಮನಿ ಹಿಂಜರಿಯುತ್ತಿದೆ,’ ಎಂದರು.

‘ಮೊದಲಿಗೆ ವ್ಲಾದಿಮಿರ್ ಪುಟಿನ್ ಮತ್ತು ರಷ್ಯಾದ ಸರ್ಕರವನ್ನು ಹೊಣೆಗಾರನ್ನಾಗಿ ಮಾಡಬೇಕಿದೆ. ನಿರ್ಬಂಧ ಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಕುಣಿಕೆಯನ್ನು ಬಿಗಿಗೊಳಿಸುತ್ತೇವೆ, ಈ ಕೆಲಸ ನಾವಿನ್ನೂ ಆರಂಭಿಸಿಲ್ಲ,’ ಎಂದು ಫಿಜ್ ಪ್ಯಾಟ್ರಿಕ್ ಹೇಳಿದರು.

ಎರಡನೇಯದಾಗಿ, ನಾವು ಮಾಡದಿರುವ ಮತ್ತೊಂದು ಕೆಲಸವಿದೆ. ಅದೇನೆಂದರೆ, ಉಕ್ರೇನ್ ಜನರಿಗೆ ಅಗತ್ಯವಿರುವ ಎಲ್ಲ ರಕ್ಷಣಾ ಸಾಮಗ್ರಿಗಳನ್ನು ಒದಗಿಸುವುದು, ಆದಷ್ಟು ಬೇಗ ಈ ಕೆಲಸವನ್ನೂ ಆರಂಭಿಸುತ್ತೇವೆ,’ ಎಂದು ಫಿಜ್ ಪ್ಯಾಟ್ರಿಕ್ ತಮ್ಮ ಸಂದರ್ಶನದಲ್ಲಿ ಹೇಳಿದರು.

ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚಣೆ ಆರಂಭಿಸಿದ ಬಳಿಕ ತುರ್ತಾಗಿ ಒಂದು ಸ್ವತಂತ್ರ ಅಂತರರಾಷ್ಟ್ರೀಯ ಆಯೋಗ ಸ್ಥಾಪಿಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ ನಲ್ಲಿ ನಡೆದ ವೋಟಿಂಗ್ ನಲ್ಲಿ ಭಾರತ ಭಾಗವಹಿಸದೆ ಹಿಂತೆಗೆದಿತ್ತು.

ವಿಶ್ವಸಂಸ್ಥೆಯ 15-ರಾಷ್ಟ್ರಗಳ ಭದ್ರತಾ ಮಂಡಳಿ ತೆಗೆದುಕೊಂಡು ಎರಡು ನಿರ್ಣಯಗಳಲ್ಲಿ ಮತ್ತು 193-ಸದಸ್ಯ ರಾಷ್ಟ್ರಗಳ ಸಾಮಾನ್ಯ ಸಭೆ ತೆಗೆದುಕೊಂಡ ಒಂದು ನಿರ್ಣಯದಲ್ಲಿ ಭಾರತ ಭಾಗಿಯಾಗಿರಲಿಲ್ಲ.

ಇದನ್ನೂ ಓದಿ:  ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್