ಫಿನ್‌ಲ್ಯಾಂಡ್‌ನಲ್ಲಿ ಕಾರ್ಮಿಕರ ಬಿಕ್ಕಟ್ಟು; ಭಾರತೀಯ ಟೆಕ್ಕಿ, ನರ್ಸ್ಗಳಿಗೆ ಹೆಚ್ಚಿನ ಬೇಡಿಕೆ
ಮಾರ್ಚ್‌ನಲ್ಲಿ ಫಿನ್‌ಲ್ಯಾಂಡ್‌ನ ಉದ್ಯೋಗ ಸಚಿವಾಲಯದ ಸಮೀಕ್ಷೆ ಮತ್ತು ಉದ್ಯಮದ ಸಮೀಕ್ಷೆಗಳು ಫಿನ್‌ಲ್ಯಾಂಡ್‌ನಲ್ಲಿ ಶೇ 70 ಕ್ಕಿಂತ ಹೆಚ್ಚು ಕಂಪನಿಗಳು ಈಗ ಕುಶಲ ಕಾರ್ಮಿಕರ ಕೊರತೆಯಿಂದ ತೊಂದರೆಗೀಡಾಗಿವೆ ಎಂದು ತೋರಿಸಿ
ಫಿನ್‌ಲ್ಯಾಂಡ್‌ನಲ್ಲಿ (Finland) ಕೌಶಲ ಹೊಂದಿರುವ ಕಾರ್ಮಿಕರ ಕೊರತೆ (labour crunch) ಇದ್ದು, ಫಿನ್‌ಲ್ಯಾಂಡ್‌ನ ಸರ್ಕಾರವು 2030 ರ ವೇಳೆಗೆ ದೇಶಕ್ಕೆ ಪ್ರವೇಶಿಸುವ ಉದ್ಯೋಗ ವಲಸಿಗರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ನಿಯೋಜನೆಯನ್ನು ಮೂರು ಪಟ್ಟು ಹೆಚ್ಚಿಸಲು ಯೋಜಿಸುತ್ತಿದೆ ಎಂದು ಫಿನ್‌ಲ್ಯಾಂಡ್‌ನ ಆರ್ಥಿಕ ವ್ಯವಹಾರಗಳು ಮತ್ತು ಉದ್ಯೋಗ ಖಾತೆ ಸಚಿವೆ ಟುಲಾ ಹಾಟೈನೆನ್ (Tuula Haatainen )ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರೊಂದಿಗೆ “ವಲಸೆ ಮತ್ತು ಚಲನಶೀಲತೆಯ ಮೇಲಿನ ಉದ್ದೇಶದ ಜಂಟಿ ಘೋಷಣೆ” ಗೆ ಸಹಿ ಮಾಡಿದ ಹಾಟೈನೆನ್, ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಕ್ಷೇತ್ರಗಳಲ್ಲಿ ಕಾರ್ಮಿಕರನ್ನು ಮತ್ತು ದಾದಿಯರನ್ನು ಆಕರ್ಷಿಸಲು ಫಿನ್‌ಲ್ಯಾಂಡ್ ಆಶಿಸುತ್ತಿದೆ ಎಂದು ಹೇಳಿದರು.ಆದಾಗ್ಯೂ, ವಲಸಿಗರಿಗೆ ಮಾರ್ಗವನ್ನು ಸುಗಮಗೊಳಿಸಲು ತನ್ನ ಸರ್ಕಾರವು ಆಶಿಸುತ್ತಿದೆಯಾದರೂ, ಪೌರತ್ವದ ಮಾರ್ಗವು ಇನ್ನೂ ಪ್ರಸ್ತಾಪವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಮಗೆ ಅಗತ್ಯವಿರುವ ವೃತ್ತಿಪರ ಪ್ರತಿಭೆಗಳ ಸಮೂಹವನ್ನು ಭಾರತ ಹೊಂದಿದೆ ಎಂದು ನಮಗೆ ಅನಿಸಿದೆ. ನಮಗೆ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದೆ, ನಮಗೆ ಪ್ರತಿಭೆ ಬೇಕು, ನಮಗೆ ವೃತ್ತಿಪರರು, ನುರಿತ ಜನರು ಬೇಕು. ಅವರು ಫಿನ್‌ಲ್ಯಾಂಡ್‌ಗೆ ಪ್ರವೇಶಿಸಲು ಬಯಸಿದರೆ, ಅದು ಎರಡೂ ಕಡೆಯವರಿಗೆ ಪ್ರಯೋಜನವಾಗಬೇಕು. ಜನರು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿ ಏನನ್ನಾದರೂ ಸಂಪಾದಿಸುತ್ತಾರೆ ಮತ್ತು ಕಲಿಯುತ್ತಾರೆ ಎಂದು ಹ್ಯಾಟೈನೆನ್ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಂಶೋಧಕರು, ವ್ಯಾಪಾರಸ್ಥರು ಮತ್ತು ವೃತ್ತಿಪರರ ಚಲನಶೀಲತೆಯನ್ನು ಸುಲಭಗೊಳಿಸಲು ಮತ್ತು ಅನಿಯಮಿತ ವಲಸೆಯನ್ನು ಎದುರಿಸಲು ಜಂಟಿ ಉದ್ದೇಶದ ಘೋಷಣೆಗೆ ಕಳೆದ ವಾರ ಸಹಿ ಹಾಕಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ. ಭಾರತ ಈ ವರ್ಷ ಜರ್ಮನಿಯೊಂದಿಗೆ ಮತ್ತು ಕಳೆದ ವರ್ಷ ಯುನೈಟೆಡ್ ಕಿಂಗ್‌ಡಮ್ (ಯುಕೆ) ನೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ನಿಂದ ಅನುಭವಿಸಿದ ನಷ್ಟಗಳು ಮತ್ತು ಗಡಿ ಲಾಕ್‌ಡೌನ್‌ಗಳಿಂದ ವ್ಯವಹಾರಗಳು ಚೇತರಿಸಿಕೊಳ್ಳುವುದರಿಂದ ಯುರೋಪಿನಾದ್ಯಂತ ಭಾರಿ ಕಾರ್ಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ನುರಿತ ಮಾನವಶಕ್ತಿ ಬಗ್ಗೆ ಇತರ ರಾಷ್ಟ್ರಗಳು ಗಮನ ಹರಿಸಿದೆ. ನಿರ್ದಿಷ್ಟವಾಗಿ ಫಿನ್‌ಲ್ಯಾಂಡ್ ಸುಮಾರು 5.5 ಮಿಲಿಯನ್ ಜನರನ್ನು ಹೊಂದಿರುವ ದೇಶವಾಗಿದ್ದು, ಕೇವಲ 2.5 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದೆ. ಇಲ್ಲಿ ನಿವೃತ್ತಿಯ ಪ್ರಮಾಣ ಹೆಚ್ಚುತ್ತಿದೆ.
ಇದನ್ನೂ ಓದಿ: Pakistan Blast ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 12 ಸಾವು
ಮಾರ್ಚ್‌ನಲ್ಲಿ ಫಿನ್‌ಲ್ಯಾಂಡ್‌ನ ಉದ್ಯೋಗ ಸಚಿವಾಲಯದ ಸಮೀಕ್ಷೆ ಮತ್ತು ಉದ್ಯಮದ ಸಮೀಕ್ಷೆಗಳು ಫಿನ್‌ಲ್ಯಾಂಡ್‌ನಲ್ಲಿ ಶೇ 70 ಕ್ಕಿಂತ ಹೆಚ್ಚು ಕಂಪನಿಗಳು ಈಗ ಕುಶಲ ಕಾರ್ಮಿಕರ ಕೊರತೆಯಿಂದ ತೊಂದರೆಗೀಡಾಗಿವೆ ಎಂದು ತೋರಿಸಿದೆ. ತಮ್ಮ ಸರ್ಕಾರವು ತನ್ನ GDP ಯ ಸುಮಾರು ಶೇ4 ಅನ್ನು ಸಂಶೋಧನೆ ಮತ್ತು ಅಭಿವೃದ್ಧಿ (R&D) ವಲಯದಲ್ಲಿ ಹೂಡಿಕೆ ಮಾಡಲು ಬಯಸುತ್ತದೆ, ಆದರೆ ಅದಕ್ಕಾಗಿ ಹೆಚ್ಚು ತರಬೇತಿ ಪಡೆದ ಉದ್ಯೋಗಿಗಳ ಅಗತ್ಯವಿದೆ ಎಂದು ಹ್ಯಾಟೈನೆನ್ ಹೇಳಿದ್ದಾರೆ. ಇದರ ಪರಿಣಾಮವಾಗಿ, ಫಿನ್‌ಲ್ಯಾಂಡ್ ಕುಟುಂಬಗಳೊಂದಿಗೆ ಕೆಲಸ ಮಾಡುವ ವಲಸಿಗರಿಗೆ ಅನುಕೂಲವಾಗುವಂತೆ ಡೇಕೇರ್, ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವುದರ ಜೊತೆಗೆ ಅವರಿಗೆ ಸ್ಥಳೀಯ ಭಾಷೆಯನ್ನು ಕಲಿಸುವ ಅರ್ಧದಷ್ಟು ವೆಚ್ಚವನ್ನು ಕೈಗೊಳ್ಳಲು ಮುಂದಾಗಿದೆ.
ತಂತ್ರಜ್ಞಾನ ಮತ್ತು ಐಸಿಟಿ ಹೊರತುಪಡಿಸಿ ನಮಗೆ ವೃತ್ತಿಪರರ ಅಗತ್ಯವಿರುವ ಒಂದು ಕ್ಷೇತ್ರವೆಂದರೆ ಆರೋಗ್ಯ ಕ್ಷೇತ್ರ. ಭಾರತದಲ್ಲಿ, ಫಿನ್‌ಲ್ಯಾಂಡ್‌ನಲ್ಲಿ ಕೆಲಸಕ್ಕೆ ಬರಲು ಸಿದ್ಧರಿರುವ ಹೆಚ್ಚು ಅರ್ಹವಾದ ದಾದಿಯರು ಇದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ವಿಶೇಷವಾಗಿ ಪ್ರವಾಸೋದ್ಯಮ, ಹಾಸ್ಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ವಲಯದಲ್ಲಿ ನಮಗೆ ಜನರ ಕೊರತೆಯಿದೆ ಎಂದು ಸಚಿವರು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ “ಆಕ್ಯುಪೇಶನ್ ಬ್ಯಾರೋಮೀಟರ್” ಅನ್ನು ಪ್ರಕಟಿಸಿದ ಸಚಿವಾಲಯದ ವರದಿಯ ಪ್ರಕಾರ, ದಾದಿಯರು, ಸಾಮಾಜಿಕ ಕಾರ್ಯ ಮತ್ತು ಸಮಾಲೋಚನೆ ಸಿಬ್ಬಂದಿ, ಸಾಮಾನ್ಯ ವೈದ್ಯರು ಮತ್ತು ಹಿರಿಯ ವೈದ್ಯರ ಕೊರತೆ ಆರೋಗ್ಯ ಕ್ಷೇತ್ರದಲ್ಲಿದೆ. ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ವಿಶ್ವಾದ್ಯಂತ 34 ನೇ ವಯಸ್ಸಿನಲ್ಲಿ ಸರ್ಕಾರದ ಕಿರಿಯ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದರು, ನಿರ್ದಿಷ್ಟವಾಗಿ ವಲಸಿಗರಲ್ಲಿ ಲಿಂಗ ಸಮತೋಲನವನ್ನು ಬಯಸುತ್ತಿದ್ದಾರೆ.
ನಾವು ಪ್ರಸ್ತುತ ಫಿನ್‌ಲ್ಯಾಂಡ್‌ನಲ್ಲಿ ಭಾರತದಿಂದ 1,500 ವಿದ್ಯಾರ್ಥಿಗಳು ಮತ್ತು 15,000 ವಲಸೆಗಾರರನ್ನು ಹೊಂದಿದ್ದೇವೆ. 2030 ರವರೆಗೆ ಉದ್ಯೋಗ ಸಂಬಂಧಿತ ವಲಸೆಯ ಸಂಖ್ಯೆಯನ್ನು ದ್ವಿಗುಣಗೊಳಿಸಲಿದ್ದೇವೆ ಎಂದು ಇಲ್ಲಿನ ಸರ್ಕಾರ ನಿರ್ಧರಿಸಿದೆ. ಅದೇ ವೇಳೆ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುತ್ತೇವೆ ಎಂದು ಹ್ಯಾಟೈನೆನ್ ಹೇಳಿದರು.
ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ