ಭಯಾನಕ ವಿಡಿಯೋ: ಮನೆಯೊಂದರ ಈಜುಕೊಳಕ್ಕೆ ಅಪ್ಪಳಿಸಿದ ಲಾವಾರಸ; ಜ್ವಾಲಾಮುಖಿ ತೀವ್ರತೆಗೆ ನಲುಗಿದ ಜನ

ಜ್ವಾಲಾಮುಖಿ ಮೊದಲು ಎದ್ದಿದ್ದು ಮೊನ್ನೆ ಭಾನುವಾರ. ಅದಕ್ಕೂ ಮೊದಲು ಇಲ್ಲಿ ಅನೇಕ ದಿನಗಳಿಂದ ಆಗಾಗ ಸಣ್ಣಸಣ್ಣ ಭೂಕಂಪನ ಆಗುತ್ತಿತ್ತು.

ಭಯಾನಕ ವಿಡಿಯೋ: ಮನೆಯೊಂದರ ಈಜುಕೊಳಕ್ಕೆ ಅಪ್ಪಳಿಸಿದ ಲಾವಾರಸ; ಜ್ವಾಲಾಮುಖಿ ತೀವ್ರತೆಗೆ ನಲುಗಿದ ಜನ
ಜ್ವಾಲಾಮುಖಿ

ಸ್ಪೇನ್​ನ ಕ್ಯಾನರಿ ದ್ವೀಪ ಸಮೂಹದಲ್ಲಿರುವ ಲಾ ಪಾಲ್ಮಾ (La Palma) ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಈ ದುರಂತದಲ್ಲಿ ಅನೇಕ ಮನೆಗಳು ಸರ್ವನಾಶಗೊಂಡಿದ್ದು, ಪ್ರಾಣಹಾನಿಯನ್ನು ತಪ್ಪಿಸಲು 5000 ಜನರನ್ನು ಸ್ಥಳಾಂತರ ಮಾಡಿಸಲಾಗಿದೆ. ಇದೀಗ ಜ್ವಾಲಾಮುಖಿಯ ಲಾವಾರಸ ಮನೆಯೊಂದರ ಈಜುಕೊಳಕ್ಕೆ ನುಗ್ಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಲಾವಾರಸ ಈಜುಕೊಳಕ್ಕೆ ಬೀಳುತ್ತಿದ್ದಂತೆ ವಿಷಕಾರಿ ಅನಿಲ ಭುಗಿಲೆದ್ದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿದ್ದಾರೆ. 

ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ. ಜ್ವಾಲಾಮುಖಿ ಮೊದಲು ಎದ್ದಿದ್ದು ಮೊನ್ನೆ ಭಾನುವಾರ. ಅದಕ್ಕೂ ಮೊದಲು ಇಲ್ಲಿ ಅನೇಕ ದಿನಗಳಿಂದ ಆಗಾಗ ಸಣ್ಣಸಣ್ಣ ಭೂಕಂಪನ ಆಗುತ್ತಿತ್ತು. ನಂತರ ಕ್ಯಾನರಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ. ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ.

ಜ್ವಾಲಾಮುಖಿಯಿಂದ ಎದ್ದ ಲಾವಾರಸ ಈ ದಿನದವರೆಗೆ 106 ಹೆಕ್ಟೇರ್​ (106 ಎಕರೆ) ಭೂ ಪ್ರದೇಶವನ್ನು ಆವರಿಸಿದೆ. 166 ಮನೆಗಳು, ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಈ ಲಾವಾರಸದ ಪ್ರವಾಹ ಎದುರಿಗೆ ಸಿಕ್ಕ ಗುಡ್ಡ ಬೆಟ್ಟಿಗಳನ್ನು ಪುಡಿ ಮಾಡಿದೆ. ಹರಿವ ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ನಾಶಗೊಳಿಸಿದೆ ಎಮದು ಯುರೋಪಿಯನ್​ ಯೂನಿಯನ್ಸ್​ ಭೂ ವೀಕ್ಷಣಾ ಪ್ರೋಗ್ರಾಂ ತಿಳಿಸಿದೆ.

ಇದನ್ನೂ ಓದಿ:  Fixed Deposits: ಎಸ್​ಬಿಐ, ಪಿಎನ್​ಬಿ, ಬಿಒಬಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ 5 ವರ್ಷಗಳ ಎಫ್​ಡಿ ದರ ಹೋಲಿಕೆ ಇಂತಿದೆ

ಉದ್ಯಮಿಯ ಮನೆಯೆದುರು ಬಂದು ಹೆಡೆ ಎತ್ತಿ ನಿಂತ 12 ಅಡಿ ಉದ್ದದ ಕಾಳಿಂಗ ಸರ್ಪ; ಶುಭದಿನವಂತೆ !

 

Read Full Article

Click on your DTH Provider to Add TV9 Kannada