ಬೆಲ್ಜಿಯಂ: ಆಫ್ರಿಕಾ (Africa) ದೇಶದಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ (Monkeypox), ಇದೀಗ ಬೆಲ್ಜಿಯಂ ದೇಶಕ್ಕೂ ಹಬ್ಬಿದೆ. ಕಳೆದ ವಾರ ಬೆಲ್ಜಿಯಂ (Belgium) ದೇಶದಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಈ ಸಂಬಂಧ ಬೆಲ್ಜಿಯಂ ರೋಗಿಗಳಿಗೆ 21 ದಿನಗಳ ಕ್ವಾರಂಟೈನ್ನ್ನು ಕಡ್ಡಾಯಗೊಳಿಸಿದೆ ಎಂದು ಸೌದಿ ಗೆಜೆಟ್ ಬೆಲ್ಜಿಯಂ ಮಾಧ್ಯಮ ವರದಿ ಮಾಡಿದೆ.
ಮಂಕಿಪಾಕ್ಸ್ ಒಂದೇ ಕುಟುಂಬದ ನಾಲ್ಕು ಜನರಿಗೆ ಬಂದಿದ್ದು, ನಾಲ್ಕೂ ಜನರನ್ನು 21 ದಿನಗಳ ಕ್ವಾರಂಟೈನ್ ಮಾಡಲಾಗಿದೆ ಎಂದು ಶುಕ್ರವಾರ ಬೆಲ್ಜಿಯಂನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ರೋಗಲಕ್ಷಣಗಳು ದದ್ದು, ಜ್ವರ, ನೋಯುತ್ತಿರುವ ಸ್ನಾಯುಗಳು ಮತ್ತು ತಲೆನೋವುಗಳನ್ನು ಒಳಗೊಂಡಿರುತ್ತದೆ. ಮಂಕಿಪಾಕ್ಸ್ ಸಿಡುಬುಗಿಂತ ಕಡಿಮೆ ಮಾರಣಾಂತಿಕವಾಗಿದೆ, ಮರಣ ಪ್ರಮಾಣವು ಶೇಕಡಾ 4 ಕ್ಕಿಂತ ಕಡಿಮೆಯಾಗಿದೆ.
ಇದನ್ನು ಓದಿ: ಕೊವಿಡ್ ಭೀತಿ: ಸೌದಿ ಪ್ರಜೆಗಳಿಗೆ ಭಾರತ ಸೇರಿ 15 ದೇಶಗಳಿಗೆ ಸಂಚಾರ ನಿರ್ಬಂಧ
ಬೆಲ್ಜಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ ಈ ರೋಗದಿಂದ ಅಷ್ಟು ದೊಡ್ಡ ಪ್ರಮಾಣದ ಅಪಾಯ ಉಂಟಾಗುವುದಿಲ್ಲ ಎಂದು ಬೆಲ್ಜಿಯನ್ ದೈನಿಕ ಲೆ ಸೊಯಿರ್ ಅನ್ನು ಉಲ್ಲೇಖಿಸಿ ಸೌದಿ ಗೆಜೆಟ್ ಹೇಳಿದೆ. ಶನಿವಾರ ಬೆಲ್ಜಿಯಂನಲ್ಲಿ COVID-19 ಗಾಗಿ ನ್ಯಾಷನಲ್ ರೆಫರೆನ್ಸ್ ಲ್ಯಾಬ್‌ನ ಉಸ್ತುವಾರಿ ವಹಿಸಿರುವ ಮೈಕ್ರೋಬಯಾಲಜಿಸ್ಟ್ ಇಮ್ಯಾನುಯೆಲ್ ಆಂಡ್ರೆ ಟ್ವೀಟ್ ಮಾಡಿ ದೇಶದಲ್ಲಿ ನಾಲ್ಕನೇ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈ ರೋಗಿಯು ವಾಲೋನಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಇತರ ಇಬ್ಬರು ಜನರು ಸೋಂಕಿಗೆ ಒಳಗಾಗಿರುವ ಆಂಟ್ವರ್ಪ್ ಘಟನೆಗೆ ಸಂಬಂಧಿಸಿದ್ದಾರೆ ಎಂದು ಅವರು ಮೇನಲ್ಲಿ ನಗರದಲ್ಲಿ ನಡೆದ ಉತ್ಸವಗಳಿಂದ ರೋಗ ಬಂದಿರಬುದು ಎಂದು ಅಂದಾಜಿಸಿದ್ದಾರೆ. ಈ ಮಧ್ಯೆ ಶನಿವಾರ, ವಿಶ್ವ ಆರೋಗ್ಯ ಸಂಸ್ಥೆಯು (WHO) 12 ವಿವಿಧ ದೇಶಗಳಲ್ಲಿ ಒಟ್ಟು 92 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿ ಮಾಡಿದೆ. 28 ಶಂಕಿತ ಪ್ರಕರಣಗಳು ತನಿಖೆಯಲ್ಲಿವೆ. ಸೌದಿ ಗೆಜೆಟ್ ವರದಿ ಮಾಡಿದಂತೆ ಯುಕೆ, ಪೋರ್ಚುಗಲ್, ಸ್ವೀಡನ್, ಇಟಲಿ, ಸ್ಪೇನ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.
ಇದನ್ನು ಓದಿ: ಶಹಬ್ಬಾಸ್ ಹುಡುಗ; ಜಪಾನಿ ಮಗು ಬಾಯಲ್ಲಿ ಹಿಂದಿ ಕೇಳಿ ಖುಷಿಪಟ್ಟ ನರೇಂದ್ರ ಮೋದಿ
ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಪ್ರಕಾರ ಮೇ 7 ರಂದು ಇತ್ತೀಚೆಗೆ ನೈಜೀರಿಯಾದಿಂದ ಪ್ರಯಾಣಿಸಿದ ರೋಗಿಯಿಂದ ಇಂಗ್ಲೆಂಡ್‌ನಲ್ಲಿ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಮೇ 18 ರಂದು ಯುಎಸ್ ಮ್ಯಾಸಚೂಸೆಟ್ಸ್ ಸಾರ್ವಜನಿಕ ಆರೋಗ್ಯ ಇಲಾಖೆಯು ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣಿಸಿದ ವಯಸ್ಕ ಪುರುಷನಲ್ಲಿ ಮಂಕಿಪಾಕ್ಸ್ ವೈರಸ್ ಕಂಡು ಬಂದಿದೆ ಎಂದು ಹೇಳಿದರು.
ಮಂಕಿಪಾಕ್ಸ್ ರೋಗದ ಲಕ್ಷಣಗಳು ಕೆಲವು ದೇಶಗಳಲ್ಲಿ ಮಾತ್ರ ಕಂಡು ಬಂದಿದೆ. ಈ ರೋಗ ಸದ್ಯ ಆಫ್ರಿಕಾದದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ವೈದ್ಯರಿಗೆ ಇದು ತೆಲೆನೋವಾಗಿ ಸಂಭವಿಸಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ ಮತ್ತು ಅಮೇರಿಕನ್ ದೇಶಗಳ ಜನರು ತುತ್ತಾಗಿದ್ದಾರೆ. ಆದರೆ ಆಫ್ರಿಕಾದಷ್ಟು ವ್ಯಾಪಕವಾಗಿ ಹಬ್ಬಿಲ್ಲ. ಆಫ್ರಿಕಾದ ಸಾಕಷ್ಟು ಜನರು ಈ ರೋಗಕ್ಕೆ ತುತ್ತಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಪ್ರಕರಣಗಳ ಪ್ರಗತಿಯ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲದೇ ಆಫ್ರಿಕಾಕ್ಕೆ ಪ್ರಯಾಣ ಬೆಳಸಿದವರಲ್ಲೂ ಈ ರೋಗ ಕಂಡು ಬಂದಿದೆ. ಈ ರೋಗ ಹೆಚ್ಚಾಗಿ ಯುವಕರಲ್ಲಿ ಕಂಡು ಬಂದಿದ್ದು, ಇದರಿಂದ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ದಂಶಕಗಳು ಮತ್ತು ಪ್ರೈಮೇಟ್‌ಗಳಂತಹ ಕಾಡು ಪ್ರಾಣಿಗಳಿಂದ ಹಬ್ಬುತ್ತದೆ ಎಂದು ವರದಿಯಾಗಿದೆ. ಈ ರೋಗದ ಹೆಚ್ಚಿನ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ.
ವಿದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ