Perseverance Rover: ಸೆರೆಯಾಯ್ತು ಮಂಗಳನ ಅಂಗಳದ ಸದ್ದು, ನೀವೂ ಕೇಳಿನೋಡಿ
ಈ ಸಾಧನ ಮಂಗಳನಲ್ಲಿನ ಪುರಾತನ ಕಾಲದಲ್ಲಿ ಜೀವಿಗಳು ನೆಲೆಸಿರುವ ಕುರಿತು ಸಂಶೋಧನೆ ನಡೆಸಲಿದೆ. ಮಂಗಳನ ವಾತಾವರಣದ ಈ ಆಡಿಯೋ ತುಣುಕುಗಳು ಸಮುದ್ರದ ಅಲೆಯ ಸದ್ದನ್ನು ಕೇಳಿಸಿಕೊಂಡ ಅನುಭವ ನೀಡುತ್ತವೆ ಎಂದು ನಾಸಾ ವ್ಯಾಖ್ಯಾನಿಸಿದೆ.
ಫೆಬ್ರವರಿ 18ರಂದು ಮಂಗಳನ ಅಂಗಳಕ್ಕೆ ಕಾಲಿಟ್ಟ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ಸೆರೆಹಿಡಿದ ಆಡಿಯೋ ತುಣುಕುಗಳನ್ನು ನಾಸಾ ಬಿಡುಗಡೆಗೊಳಿಸಿದೆ. ನಾಸಾದ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ನೌಕೆಯಾಗಿರುವ ಪರ್ಸೆವೆರೆನ್ಸ್ ರೋವರ್ 6 ಚಕ್ರಗಳ ರೋಬೋಟ್ ಡಿವೈಸ್ ಆಗಿದ್ದು, 470,000,000 ಕಿಮೀ ಪ್ರಯಾಣಿಸಿ ಭೂಮಿಯಿಂದ ಮಂಗಳನನ್ನು ತಲುಪಿದೆ. ಪರ್ಸೆವೆರೆನ್ಸ್ ರೋವರ್ ಸೆರೆಹಿಡಿದ ಮೂರು ಆಡಿಯೋ ತುಣುಕುಗಳನ್ನು ಸೂಪರ್ ಕ್ಯಾಮ್ ಎಂಬ ಸಾಧನದಲ್ಲಿ ಸೆರೆಹಿಡಿಯಲಾಗಿದೆ ಎಂದು ನಾಸಾ ಹೇಳಿದೆ.
ಈ ಸಾಧನ ಮಂಗಳನಲ್ಲಿನ ಪುರಾತನ ಕಾಲದಲ್ಲಿ ಜೀವಿಗಳು ನೆಲೆಸಿರುವ ಕುರಿತು ಸಂಶೋಧನೆ ನಡೆಸಲಿದೆ. ಮಂಗಳನ ವಾತಾವರಣದ ಈ ಆಡಿಯೋ ತುಣುಕುಗಳು ಸಮುದ್ರದ ಅಲೆಯ ಸದ್ದನ್ನು ಕೇಳಿಸಿಕೊಂಡ ಅನುಭವ ನೀಡುತ್ತವೆ ಎಂದು ನಾಸಾ ವ್ಯಾಖ್ಯಾನಿಸಿದೆ.
ಪರ್ಸೆವೆರೆನ್ಸ್ ರೋವರ್ ಸೆರೆಹಿಡಿದು ಕಳುಹಿಸಿದ ಶಾಡಿಯೋ ತುಣುಕುಗಳು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಈ ಆಡಿಯೋಗಳನ್ನು ಸಂಶೋಧನೆಯ ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡು ಮಂಗಳನಲ್ಲಿ ಜೀವಿಗಳ ವಾಸದ ಕುರಿತು ಹೆಚ್ಚಿನ ವಿವರ ಕಂಡುಹಿಡಿಯಲಿದ್ದೇವೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಈ ಆಡಿಯೋ ತುಣುಕುಗಳು ಬಾಹ್ಯಾಕಾಶ ನೌಕೆ ಮಂಗಳನಲ್ಲಿ ಇಳಿದ 18 ಗಂಟೆಗಳ ನಂತರ ಸೆರೆಹಿಡಿದಿದ್ದು ಎಂದು ಸಹ ನಾಸಾ ತಿಳಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಆಳ ಅಧ್ಯಯನ ನಡೆಸಲಿದೆ.
Did you know? Some sounds that we’re used to on Earth, like whistles, bells or bird songs, would be almost inaudible on Mars.
Learn more in the “Sounds of Mars” episode of our Curious Universe podcast.
? Listen: https://t.co/KgSQExqgut pic.twitter.com/YXxjE55ytT
— NASA (@NASA) March 10, 2021
ಉಡಾವಣೆಯಾಗಿದ್ದು ಯಾವಾಗ?
ಕಳೆದ ವರ್ಷ ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು.
‘ಹೆಗಲಿಗೆ ಹೆಗಲು ಕೊಟ್ಟು ದುಡಿದಾಗ, ಕೈಜೋಡಿಸಿ ಕೆಲಸ ಮಾಡಿದಾಗ, ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ, ನಾವು ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಬಹುದು’ ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮುಖ್ಯ ಇಂಜಿನಿಯರ್, ರಾಬ್ ಮ್ಯಾನ್ನಿಂಗ್ ತಿಳಿಸಿದ್ದಾರೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಂಗಳ ಗ್ರಹಕ್ಕೆ ಕಾಲಿರಿಸುವುದು ಬಹುದೊಡ್ಡ ಸವಾಲಾಗಿದೆ. ಅಂಥಾ ಕಠಿಣ ಸವಾಲನ್ನು ನಾಸಾ (NASA) ಯಶಸ್ವಿಯಾಗಿ ಎದುರಿಸಿದೆ.
ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆ ! ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಿಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ. ರೋವರ್ ಸಂಗ್ರಹಿಸಿದ ಮಾದರಿಗಳಿಂದ ನಾಸಾ ಹಾಗೂ ಯುರೋಪ್ನ ಸ್ಪೇಸ್ ಏಜನ್ಸಿ (ESA) ವಿಜ್ಞಾನಿಗಳು ಪ್ರಾಚೀನ ಜೀವದ ಕುರುಹುಗಳನ್ನು ಅಧ್ಯಯನ ನಡೆಸಲು ನೆರವಾಗಲಿದೆ.
ಬಂಡೆ ಹಾಗೂ ಇತರ ಭೌಗೋಳಿಕ ಅಂಶಗಳನ್ನು ನಾಸಾ ಅಧ್ಯಯನಕ್ಕಾಗಿ ರೋವರ್ ಸಂಗ್ರಹಿಸಲಿದೆ. 1997ರ ಬಳಿಕ ಮಂಗಳ ಗ್ರಹಕ್ಕೆ ಕಾಲಿಡಲು ನಾಸಾ ನಡೆಸಿದ 5ನೇ ಪ್ರಯತ್ನ ಇದಾಗಿತ್ತು. ಮಂಗಳ ಗ್ರಹ ಸ್ಪರ್ಶಿಸಲು ಕಳೆದ 50 ವರ್ಷಗಳಲ್ಲಿ ನಡೆಸಿದ ಪ್ರಯತ್ನದಲ್ಲಿ ಅರ್ಧಕ್ಕೂ ಹೆಚ್ಚು ಯತ್ನಗಳು ವಿಫಲವಾಗಿದ್ದವು. ಸೋವಿಯತ್ ಯೂನಿಯನ್ (ರಷ್ಯಾ) ಮಾತ್ರ ಈ ಮೊದಲು ಮಂಗಳನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸಲು ಯಶಸ್ವಿಯಾಗಿತ್ತು.
ಇದನ್ನೂ ಓದಿ: Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ