Nepal Economic Crisis: ಶ್ರೀಲಂಕಾದ ಬೆನ್ನಲ್ಲೇ ನೇಪಾಳದಲ್ಲೂ ತೀವ್ರ ಆರ್ಥಿಕ ಬಿಕ್ಕಟ್ಟು; ತಜ್ಞರು ಏನಂತಾರೆ?

ಶ್ರೀಲಂಕಾದಂತೆ ನೇಪಾಳದಲ್ಲಿಯೂ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡರೆ ಭಾರತ ಸರ್ಕಾರವು ನೇಪಾಳಕ್ಕೂ ನೆರವಾಗಲೇ ಬೇಕಾಗುತ್ತದೆ. ಇದು ಭಾರತದ ಬೊಕ್ಕಸದ ಹೊರೆಯನ್ನು ಹೆಚ್ಚಿಸಬಹುದು ಎಂಬ ಭೀತಿ ವ್ಯಕ್ತವಾಗಿದೆ.

Nepal Economic Crisis: ಶ್ರೀಲಂಕಾದ ಬೆನ್ನಲ್ಲೇ ನೇಪಾಳದಲ್ಲೂ ತೀವ್ರ ಆರ್ಥಿಕ ಬಿಕ್ಕಟ್ಟು; ತಜ್ಞರು ಏನಂತಾರೆ?
ನೇಪಾಳ ಆರ್ಥಿಕ ಬಿಕ್ಕಟ್ಟು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 15, 2022 | 1:28 PM

ನವದೆಹಲಿ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು (Sri Lanka Economic Crisis) ಎದುರಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶ್ರೀಲಂಕಾ ಬಳಿಕ ನೇಪಾಳ ಅತ್ಯಂತ ಕೆಟ್ಟ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗುತ್ತಿದೆ. ಭಾರತದ ನೆರೆಯ ದೇಶಗಳಲ್ಲಿ ಒಂದಲ್ಲ ಒಂದು ಸಮಸ್ಯೆ ತಲೆದೋರುತ್ತಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿ ಜನಜೀವನ ಪರಿತಪಿಸುತ್ತಿರುವಾಗಲೇ ನೇಪಾಳದಲ್ಲಿಯೂ (Nepal Economic Crisis) ಅಂಥದ್ದೇ ಸ್ಥಿತಿ ನಿರ್ಮಾಣವಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ. ಚಿಲ್ಲರೆ ಹಣದುಬ್ಬರದ ಹೆಚ್ಚಳ ಸೇರಿದಂತೆ ಹಲವು ಭಾರತದ ಆರ್ಥಿಕತೆಯೂ ಮೊದಲಿನಷ್ಟು ಸಶಕ್ತವಾಗಿಲ್ಲ. ಆದರೆ ದೇಶೀಯ ಸಮಸ್ಯೆಗಳ ನಡುವೆಯೂ ನೆರೆ ದೇಶಗಳ ಕಷ್ಟಕ್ಕೆ ಸ್ಪಂದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಭಾರತ ಈಗಾಗಲೇ ಶ್ರೀಲಂಕಾಕ್ಕೆ ಇಂಧನ, ಆಹಾರ ಮತ್ತು ಕ್ರೆಡಿಟ್​ ಲೈನ್ ಸೇರಿ ಹಲವು ರೀತಿಯಲ್ಲಿ ನೆರವಾಗಿದೆ. ಇದೀಗ ನೇಪಾಳದಲ್ಲಿಯೂ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡರೆ ಭಾರತ ಸರ್ಕಾರವು ನೇಪಾಳಕ್ಕೂ ನೆರವಾಗಲೇ ಬೇಕಾಗುತ್ತದೆ. ಇದು ಭಾರತದ ಬೊಕ್ಕಸದ ಹೊರೆಯನ್ನು ಹೆಚ್ಚಿಸಬಹುದು ಎಂಬ ಭೀತಿ ವ್ಯಕ್ತವಾಗಿದೆ.

ವಿದ್ಯುತ್ ಬ್ಲಾಕ್​ಔಟ್ ಮತ್ತು ಆಹಾರ ಕೊರತೆ, ಇಂಧನ ಮತ್ತು ಔಷಧಗಳ ತೀವ್ರ ಕೊರತೆ, ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಂತೆ ನೇಪಾಳ ಸಹ ಗಂಭೀರ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ನೇಪಾಳದ ಪ್ರಮುಖ ವಿರೋಧ ಪಕ್ಷವಾದ ಸಿಪಿಎನ್-ಯುಎಂಎಲ್ ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತಮ್ಮ ಆರ್ಥಿಕತೆಯು ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿಕೊಂಡಿದೆ. ವಿತ್ತೀಯ ಕೊರತೆಯ ಪ್ರಮಾಣದ ಹೆಚ್ಚಳ ಮತ್ತು ಬಂಡವಾಳ ಹಿಂತೆಗೆದ ಗುರಿಗಳನ್ನು ಈಡೇರಿಸಲು ಸಾಧ್ಯವಾಗದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಂದಿನ ದಿನಗಳಲ್ಲಿ ಇದು ದೊಡ್ಡ ಸವಾಲಾಗಬಹುದು ಎಂದು ಹೇಳಲಾಗುತ್ತಿದೆ

ಶ್ರೀಲಂಕಾದಲ್ಲಿ ಒಂದು ಲೀಟರ್ ಹಾಲಿನ ಬೆಲೆ 300 ರೂ. ಆಗಿದೆ. ಇದೀಗ ಶ್ರೀಲಂಕಾದ ಬೆನ್ನಲ್ಲೇ ನೇಪಾಳದ ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತಿದೆ ಎಂಬ ವರದಿ ಆತಂಕ ಮೂಡಿಸುತ್ತಿದೆ. ಆಹಾರ ಉತ್ಪನ್ನಗಳ ಕೊರತೆ, ಔಷಧಿ ಸೇರಿದಂತೆ ವೈದ್ಯಕೀಯ ಕೊರತೆ, ತೈಲ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ನೇಪಾಳದಲ್ಲಿ ಮೂಡಿದೆ. 4 ತಿಂಗಳ ಹಿಂದೆ ಶ್ರೀಲಂಕಾದಲ್ಲಿ ಉಂಟಾಗಿದ್ದ ಪರಿಸ್ಥಿತಿಯೇ ಈಗ ನೇಪಾಳದಲ್ಲಿ ಉಂಟಾಗಿದೆ. ನೇಪಾಳ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಶ್ರೀಲಂಕಾಗಿಂತಲೂ ನೇಪಾಳ ಕೆಟ್ಟ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ.

ವಿರೋಧ ಪಕ್ಷಗಳ ಆರೋಪ, ಮಾಧ್ಯಮಗಳ ವರದಿ ಬೆನ್ನಲ್ಲೇ ಶ್ರೀಲಂಕಾ ಹಣಕಾಸು ಸಚಿವ ಜನಾರ್ಧನ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನೇಪಾಳದ ಆರ್ಥಿಕತೆ ಶ್ರೀಲಂಕಾದ ರೀತಿ ಇಲ್ಲ. ನಮ್ಮ ದೇಶದ ಆರ್ಥಿಕತೆ ಉತ್ತಮವಾಗಿದೆ. ನೇಪಾಳದ ಉತ್ಪಾದನೆ ಹಾಗೂ ಆದಾಯ ಸಮತೋಲನದಲ್ಲಿದೆ. ನೇಪಾಳದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ. ಆದರೆ, ಇದಕ್ಕೆ ನೇಪಾಳದ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ನೇಪಾಳದ ಆರ್ಥಿಕತೆ ದಿನದಿಂದ ದಿನಕ್ಕೆ ಅಧೋಗತಿಗೆ ಸಾಗುತ್ತಿದೆ ಎಂದು ಹೇಳಿದ್ದಾರೆ.

ನೇಪಾಳದ ಆರ್ಥಿಕತೆಯು ನಿರ್ಣಾಯಕ ಸ್ಥಿತಿಯಲ್ಲಿದೆ ಮತ್ತು ಬಾಹ್ಯ ವಲಯದ ಅಸಮತೋಲನವು ವಿದೇಶಿ ಕರೆನ್ಸಿ ಮೀಸಲು ಮೇಲೆ ಒತ್ತಡವನ್ನು ಹೇರುತ್ತಿದೆ ಎನ್ನಲಾಗಿದೆ. ನೇಪಾಳದ ಹಣಕಾಸು ಸಚಿವ ಜನಾರ್ದನ್ ಶರ್ಮಾ ಅವರೊಂದಿಗಿನ ಅವರ ಉದ್ದೇಶಪೂರ್ವಕ ಭಿನ್ನಾಭಿಪ್ರಾಯಗಳ ನಡುವೆ ಮತ್ತು ಆರ್ಥಿಕತೆಯನ್ನು ಬಿಕ್ಕಟ್ಟಿನಿಂದ ಹೊರತೆಗೆಯಲು ಪ್ರಯತ್ನಿಸದ ಕಾರಣದಿಂದ ನೇಪಾಳ ಸರ್ಕಾರವು ಭಾನುವಾರ ದೇಶದ ಸೆಂಟ್ರಲ್ ಬ್ಯಾಂಕ್ ಗವರ್ನರ್ ಮಹಾಪ್ರಸಾದ್ ಅಧಿಕಾರಿ ಅವರನ್ನು ಅಮಾನತುಗೊಳಿಸಿದೆ.

ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್‌ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್‌ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪ್ರವಾಸೋದ್ಯಮದ ವೆಚ್ಚದಲ್ಲಿ ಕುಸಿತ ಮತ್ತು ವಿದೇಶದಲ್ಲಿ ಕೆಲಸ ಮಾಡುವ ನೇಪಾಳಿಗರು ಮನೆಗೆ ಕಳುಹಿಸುವ ಹಣದ ಕೊರತೆ ಸರ್ಕಾರದ ಸಾಲವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೇಪಾಳದ ಆರ್ಥಿಕತೆ ಇನ್ನಷ್ಟು ಹದಗೆಡುತ್ತದೆ ಎಂದು ಅಲ್ಲಿನ ಪ್ರತಿಪಕ್ಷ ಹೇಳಿದೆ. ಶ್ರೀಲಂಕಾದಂತೆಯೇ ನೇಪಾಳವು ಆರ್ಥಿಕ ಕುಸಿತದ ಅಂಚಿನಲ್ಲಿದೆ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ.

ನೇಪಾಳದ ರಾಷ್ಟ್ರೀಯ ಬ್ಯಾಂಕ್ ಪ್ರಕಾರ, 7 ತಿಂಗಳ ಅವಧಿಯಲ್ಲಿ ಇಲ್ಲಿನ ವಿದೇಶಿ ಕರೆನ್ಸಿ ರಿಸರ್ವ್ಸ್‌ ಶೇ.16ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಅದೇ ಅವಧಿಯಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ನೇಪಾಳಕ್ಕೆ ಕಳುಹಿಸುವ ಹಣದ ಪ್ರಮಾಣ ಕೂಡ ಸುಮಾರು ಶೇ.5ರಷ್ಟು ಕಡಿಮೆಯಾಗಿದೆ. ಆದರೆ, ನೇಪಾಳ ಸರ್ಕಾರದ ಮೇಲೆ ಹೊರಲಾರದಂತಹ ಸಾಲದ ಭಾರವಿಲ್ಲ ಎಂದು ಹಣಕಾಸು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಎಲ್ಲರೂ ನೇಪಾಳವನ್ನು ಯಾಕೆ ಶ್ರೀಲಂಕಾ ಜೊತೆಗೆ ಹೋಲಿಸ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ನೇಪಾಳವು ಆರ್ಥಿಕ ಕುಸಿತವನ್ನು ಅನುಭವಿಸುತ್ತಿದೆ. ಆದರೆ. ನೇಪಾಳದ ಹಣಕಾಸು ಸಚಿವ ಜನಾರ್ದನ ಶರ್ಮಾ ತಮ್ಮ ಆರ್ಥಿಕತೆಯು ಶ್ರೀಲಂಕಾದಂತೆಯೇ ಹಿಂದುಳಿಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ನೇಪಾಳದ ಆರ್ಥಿಕ ಅಸ್ಥಿರತೆಯ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ ಅವರು, ದೇಶದ ಆರ್ಥಿಕತೆಯು ಉತ್ಪಾದನೆ ಮತ್ತು ಆದಾಯ ವ್ಯವಸ್ಥೆಯ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ. ಐಷಾರಾಮಿ ವಸ್ತುಗಳ ಹೆಚ್ಚಿನ ಆಮದುಗಳಿಂದಾಗಿ ದೇಶದ ವಿದೇಶಿ ವಿನಿಮಯ ಮೀಸಲು ಒತ್ತಡದಲ್ಲಿದೆ ಎಂದು ಒಪ್ಪಿಕೊಳ್ಳುವಾಗ ನೇಪಾಳವು ದೊಡ್ಡ ವಿದೇಶಿ ಸಾಲದ ಹೊರೆಯಿಂದ ತುಂಬಿಲ್ಲ ಎಂದು ಅವರು ಹೇಳಿದ್ದಾರೆ.

ನೇಪಾಳದ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ನೇಪಾಳದಲ್ಲಿ ಬ್ಯಾಂಕ್‌ಗಳಲ್ಲಿ ಡಾಲರ್ ಖಾತೆ ತೆರೆಯಲು ಮತ್ತು ಹೂಡಿಕೆ ಮಾಡಲು ವಿದೇಶಗಳಲ್ಲಿ ನೆಲೆಸಿರುವ ನೇಪಾಳೀಯರನ್ನು ನೇಪಾಳ ಸರ್ಕಾರ ಒತ್ತಾಯಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮದಲ್ಲಿನ ಕುಸಿತದಿಂದ ನೇಪಾಳದ ವಿದೇಶಿ ಮೀಸಲುಗಳು ಹಾನಿಗೊಳಗಾಗಿವೆ. ಪೆಟ್ರೋಲ್ ಬೆಲೆ ಹೆಚ್ಚಾದಂತೆ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡಬೇಕಾಗಿದೆ. ವಿದೇಶದಲ್ಲಿ ನೆಲೆಸಿರುವ ನೇಪಾಳೀಯರ ಅನುಕೂಲಕ್ಕಾಗಿ ಡಾಲರ್ ಖಾತೆಗೆ ಸರಿಯಾದ ನೀತಿ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿದೆ ಎಂದು ನೇಪಾಳ ಸರ್ಕಾರ ಹೇಳಿದೆ. ನೇಪಾಳಕ್ಕೆ ಬರುವ ಪ್ರವಾಸಿಗರಿಗೆ ಉಚಿತ ವೀಸಾ ನೀಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದು ಎನ್‌ಆರ್‌ಎನ್‌ಗಳಿಗೂ ಸುಲಭವಾಗಲಿದೆ ಎಂದು ನೇಪಾಳದ ಸಚಿವ ಜನಾರ್ದನ ಶರ್ಮಾ ಹೇಳಿದ್ದಾರೆ.

ಜುಲೈ 2021ರಿಂದ ನೇಪಾಳವು ಹೆಚ್ಚುತ್ತಿರುವ ಆಮದುಗಳು, ರವಾನೆಯ ಒಳಹರಿವು ಮತ್ತು ಪ್ರವಾಸೋದ್ಯಮ ಮತ್ತು ರಫ್ತುಗಳಿಂದ ಅಲ್ಪ ಗಳಿಕೆಯಿಂದಾಗಿ ವಿದೇಶೀ ವಿನಿಮಯ ಮೀಸಲು ಕುಸಿತವನ್ನು ಕಂಡಿದೆ.

ಇದನ್ನೂ ಓದಿ: ತಿಂಗಳ ಕೊನೆಗೆ ಶ್ರೀಲಂಕಾದಲ್ಲಿ ಇಂಧನಕ್ಕಾಗಿ ಹಾಹಾಕಾರ ಸಾಧ್ಯತೆ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ದೇಶದಲ್ಲಿ ಆತಂಕ

Sri Lanka Crisis ದೇಶದಾದ್ಯಂತ ಪ್ರತಿಭಟನೆ ನಡೆದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡುವುದಿಲ್ಲ: ಶ್ರೀಲಂಕಾ ಸಚಿವ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ