Nobel Peace Prize 2022: ಅಲೆಸ್ ಬಿಯಾಲಿಯಾಟ್ಸ್ಕಿ,ರಷ್ಯಾ ಮತ್ತು ಉಕ್ರೇನ್​​ನ ಮಾನವ ಹಕ್ಕುಗಳ ಸಂಸ್ಥೆಗೆ ನೊಬೆಲ್ ಪ್ರಶಸ್ತಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2022 | 3:56 PM

Ales Bialiatski: ನೊಬೆಲ್ ಪ್ರಶಸ್ತಿ 2022 ಅನ್ನು ಬೆಲಾರಸ್‌ನ ಮಾನವ ಹಕ್ಕುಗಳ ಕಾರ್ಯಕರ್ತ ಅಲೆಸ್ ಬಿಯಾಲಿಯಾಟ್ಸ್ಕಿ ನೀಡಲಾಗುವುದು, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಅವರಿಗೆ ನೀಡಲಾಗಿದೆ.

Nobel Peace Prize 2022: ಅಲೆಸ್ ಬಿಯಾಲಿಯಾಟ್ಸ್ಕಿ,ರಷ್ಯಾ ಮತ್ತು ಉಕ್ರೇನ್​​ನ ಮಾನವ ಹಕ್ಕುಗಳ ಸಂಸ್ಥೆಗೆ ನೊಬೆಲ್ ಪ್ರಶಸ್ತಿ
Nobel Peace Prize
Follow us on

ಬೆಲಾರಸ್​​ನ ಮಾನವ ಹಕ್ಕುಗಳ ಕಾರ್ಯಕರ್ತ ಅಲೆಸ್ ಬಿಯಾಲಿಯಾಟ್ಸ್ಕಿ (Ales Bialiatski), ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ (Memorial) ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ (Center for Civil Liberties) ಶುಕ್ರವಾರ 2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಗೆದ್ದುಕೊಂಡಿವೆ. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅಲೆಸ್ ಮತ್ತು ಈ  ಸಂಸ್ಥೆಗಳು ತಮ್ಮ ತಾಯ್ನಾಡಿನಲ್ಲಿ ನಾಗರಿಕ ಸಮಾಜವನ್ನು ಪ್ರತಿನಿಧಿಸುತ್ತವೆ. ಅವರು ಹಲವು ವರ್ಷಗಳಿಂದ ಅಧಿಕಾರವನ್ನು ಟೀಕಿಸುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಕ್ಕನ್ನು ಇವರು ಉತ್ತೇಜಿಸಿದ್ದಾರೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಹೇಳಿದೆ. “ಯುದ್ಧಾಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗವನ್ನು ದಾಖಲಿಸಲು ಅವರು ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ. ಅವರು ಒಟ್ಟಾಗಿ ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಾಗರಿಕ ಸಮಾಜದ ಮಹತ್ವವನ್ನು ಪ್ರದರ್ಶಿಸುತ್ತಾರೆ ಎಂದು ಸಮಿತಿ ಹೇಳಿದೆ.

ಅಲೆಸ್ ಬಿಯಾಲಿಯಾಟ್ಸ್ಕಿ

1980 ರ ದಶಕದ ಮಧ್ಯಭಾಗದಲ್ಲಿ ಬೆಲಾರಸ್‌ನಲ್ಲಿ ಹೊರಹೊಮ್ಮಿದ ಪ್ರಜಾಪ್ರಭುತ್ವ ಚಳವಳಿಯ ಪ್ರಾರಂಭಿಕರಲ್ಲಿ ಅಲೆಸ್ ಬಿಯಾಲಿಯಾಟ್ಸ್ಕಿ ಒಬ್ಬರು. ಮಿನ್ಸ್ಕ್ ಮೂಲದ ಮಾನವ ಹಕ್ಕುಗಳ ಸಂಘಟನೆಯ ವಿಯಾಸ್ನಾ ಸಂಸ್ಥಾಪಕರಾದ ಇವರು ತನ್ನ ತಾಯ್ನಾಡಿನಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ಉತ್ತೇಜಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ .
ಅಲೆಸ್ ಬಿಲಿಯಾಟ್ಸ್ಕಿಯನ್ನು ಮೌನಗೊಳಿಸಲು ಸರ್ಕಾರಿ ಅಧಿಕಾರಿಗಳು ಪದೇ ಪದೇ ಪ್ರಯತ್ನಿಸುತ್ತಿದ್ದಾರೆ ಎಂದು ನೊಬೆಲ್ ಸಮಿತಿಯು ಗಮನಿಸಿದೆ.. 2021 ರಿಂದ, ಅವರನ್ನು ವಿಚಾರಣೆಯಿಲ್ಲದೆ ಬಂಧಿಸಲಾಗಿತ್ತು.
ರಷ್ಯಾ-ಉಕ್ರೇನ್-ಬೆಲಾರಸ್ ರಾಜಕೀಯವು ಜಾಗತಿಕವಾಗಿ ಕೇಂದ್ರ ಹಂತವನ್ನು ಪಡೆದುಕೊಂಡಿದೆ ಎಂದು ಸಮಿತಿಯು ಗಮನಿಸಿದೆ.

ಮೆಮೋರಿಯಲ್

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಆಂಡ್ರೇ ಸಖರೋವ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಸ್ವೆಟ್ಲಾನಾ ಗನ್ನುಶ್ಕಿನಾ ಸೇರಿದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ‘ಹಿಂದಿನ ಅಪರಾಧಗಳನ್ನು’ ಎದುರಿಸಲು 1987 ರಲ್ಲಿ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ಸ್ಥಾಪಿಸಿದರು. ಸೋವಿಯತ್ ಒಕ್ಕೂಟದ ಪತನದ ನಂತರ ಮೆಮೋರಿಲ್ ರಷ್ಯಾದಲ್ಲಿ ಅತಿದೊಡ್ಡ ಮಾನವ ಹಕ್ಕುಗಳ ಸಂಘಟನೆಯಾಗಿ ಬೆಳೆದಿದೆ ಎಂದು ನೊಬೆಲ್ ಸಮಿತಿಯು ಗಮನಿಸಿದೆ. ಸ್ಟಾಲಿನಿಸ್ಟ್ ಯುಗದ ಸಂತ್ರಸ್ತರ ಬಗ್ಗೆ ದಾಖಲಾತಿ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ ಮೆಮೋರಿಯಲ್ ರಷ್ಯಾದಲ್ಲಿ ರಾಜಕೀಯ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ವ್ಯವಸ್ಥಿತಗೊಳಿಸಿತು. ಮೆಮೋರಿಯಲ್ ರಷ್ಯಾದ ಬಂಧನ ಸೌಲಭ್ಯಗಳಲ್ಲಿನ ರಾಜಕೀಯ ಕೈದಿಗಳ ಮಾಹಿತಿಯ ಅತ್ಯಂತ ಅಧಿಕೃತ ಮೂಲವಾಗಿದೆ.

ಚೆಚೆನ್ ಯುದ್ಧಗಳ ಸಮಯದಲ್ಲಿ ರಷ್ಯಾದ ಪಡೆಗಳು ಮತ್ತು ಸಹಾನುಭೂತಿಯಿಂದ ಯುದ್ಧ ಅಪರಾಧಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಲಭ್ಯವಾಗುವಂತೆ ಮಾಡಲು ಮೆಮೋರಿಯಲ್ ಇದೇ ರೀತಿಯ ಪ್ರಯತ್ನಗಳನ್ನು ಮಾಡಿದೆ.. 2009 ರಲ್ಲಿ, ಚೆಚೆನ್ಯಾದಲ್ಲಿನ ಮೊಮೋರಿಯಲ್ ಶಾಖೆಯ ಮುಖ್ಯಸ್ಥ ನಟಾಲಿಯಾ ಎಸ್ಟೆಮಿರೋವಾ ಈ ಕೆಲಸ ಮಾಡಿದ್ದಕ್ಕಾಗಿ ಕೊಲ್ಲಲ್ಪಟ್ಟರು. ಡಿಸೆಂಬರ್ 2021 ರಲ್ಲಿ, ರಷ್ಯಾದ ಅಧಿಕಾರಿಗಳು ದಿವಾಳಿ ಮಾಡಿ ಅದರ ದಾಖಲಾತಿ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವಂತೆ ಬಲವಂತ ಮಾಡಿದರು. ಆದರೆ, ಸಂಸ್ಥೆ ಮುಚ್ಚಲು ನಿರಾಕರಿಸಿತು.

ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್

ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಅನ್ನು 2007 ರಲ್ಲಿ ಕೈವ್‌ನಲ್ಲಿ ಸ್ಥಾಪಿಸಲಾಯಿತು. ಇದು ಉಕ್ರೇನ್ ಕಾನೂನಿನ ಆಳ್ವಿಕೆಯಲ್ಲಿ ರಾಜ್ಯವಾಗಿ ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತದೆ. ಉಕ್ರೇನ್ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನೊಂದಿಗೆ ಸಂಯೋಜಿತವಾಗಬೇಕೆಂದು ಅದು ಸಕ್ರಿಯವಾಗಿ ಪ್ರತಿಪಾದಿಸಿದೆ ಎಂದು ನೊಬೆಲ್ ಸಮಿತಿ ಹೇಳಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾದ ಯುದ್ಧ ಅಪರಾಧಗಳನ್ನು ಗುರುತಿಸುವ ಮತ್ತು ದಾಖಲಿಸುವ ಪ್ರಯತ್ನಗಳಲ್ಲಿ ತೊಡಗಿದೆ.

Published On - 2:47 pm, Fri, 7 October 22