Perseverance Rover: ಮಂಗಳದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ! ಮಂಗಳ ಗ್ರಹಕ್ಕೆ ಕಾಲಿರಿಸಿದ NASA ಬಾಹ್ಯಾಕಾಶ ನೌಕೆ
NASA: ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ Perseverance Rover.
ವಾಷಿಂಗ್ಟನ್: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.
ಕಳೆದ ವರ್ಷ ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು.
‘ಹೆಗಲಿಗೆ ಹೆಗಲು ಕೊಟ್ಟು ದುಡಿದಾಗ, ಕೈಜೋಡಿಸಿ ಕೆಲಸ ಮಾಡಿದಾಗ, ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ, ನಾವು ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಬಹುದು’ ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮುಖ್ಯ ಇಂಜಿನಿಯರ್, ರಾಬ್ ಮ್ಯಾನ್ನಿಂಗ್ ತಿಳಿಸಿದ್ದಾರೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಂಗಳ ಗ್ರಹಕ್ಕೆ ಕಾಲಿರಿಸುವುದು ಬಹುದೊಡ್ಡ ಸವಾಲಾಗಿದೆ. ಅಂಥಾ ಕಠಿಣ ಸವಾಲನ್ನು ನಾಸಾ (NASA) ಯಶಸ್ವಿಯಾಗಿ ಎದುರಿಸಿದೆ.
ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆ ಇದಾಗಿದೆ! ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ. ರೋವರ್ ಸಂಗ್ರಹಿಸಿದ ಮಾದರಿಗಳಿಂದ ನಾಸಾ ಹಾಗೂ ಯುರೋಪ್ನ ಸ್ಪೇಸ್ ಏಜನ್ಸಿ (ESA) ವಿಜ್ಞಾನಿಗಳು ಪ್ರಾಚೀನ ಜೀವದ ಕುರುಹುಗಳನ್ನು ಅಧ್ಯಯನ ನಡೆಸಲು ನೆರವಾಗಲಿದೆ.
ಬಂಡೆ ಹಾಗೂ ಇತರ ಭೌಗೋಳಿಕ ಅಂಶಗಳನ್ನು ನಾಸಾ ಅಧ್ಯಯನಕ್ಕಾಗಿ ರೋವರ್ ಸಂಗ್ರಹಿಸಲಿದೆ. 1997ರ ಬಳಿಕ ಮಂಗಳ ಗ್ರಹಕ್ಕೆ ಕಾಲಿಡಲು ನಾಸಾ ನಡೆಸಿದ 5ನೇ ಪ್ರಯತ್ನ ಇದಾಗಿತ್ತು. ಮಂಗಳ ಗ್ರಹ ಸ್ಪರ್ಶಿಸಲು ಕಳೆದ 50 ವರ್ಷಗಳಲ್ಲಿ ನಡೆಸಿದ ಪ್ರಯತ್ನದಲ್ಲಿ ಅರ್ಧಕ್ಕೂ ಹೆಚ್ಚು ಯತ್ನಗಳು ವಿಫಲವಾಗಿದ್ದವು. ಸೋವಿಯತ್ ಯೂನಿಯನ್ (ರಷ್ಯಾ) ಮಾತ್ರ ಈ ಮೊದಲು ಮಂಗಳನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸಲು ಯಶಸ್ವಿಯಾಗಿತ್ತು.
ನಾಸಾ ಪರ್ಸಿವರೆನ್ಸ್ ಮಾರ್ಸ್ ರೋವರ್ ಕಳಿಸಿದ ಚಿತ್ರ:
Hello, world. My first look at my forever home. #CountdownToMars pic.twitter.com/dkM9jE9I6X
— NASA's Perseverance Mars Rover (@NASAPersevere) February 18, 2021
ರೋವರ್ಗೆ ಮಂಗಳ ಗ್ರಹ ಸ್ಪರ್ಶಿಸಿದ ಸಂಭ್ರಮ:
Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021
ಇದನ್ನೂ ಒದಿ: ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ
Published On - 1:10 pm, Fri, 19 February 21