Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೆಚ್ಚಿನ ಸೋಂಕಿತರು ದೈಹಿಕ ಚಟುವಟಿಕೆಗಳಿಂದ ದೂರ; ಸೋಮಾರಿಗಳಲ್ಲಿ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು’

ಕೊರೊನಾ ಸೋಂಕು ತಡೆಯಲು ಖಂಡಿತವಾಗಿಯೂ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಬೇಕು. ಆದರೆ ಇವೆಲ್ಲದರ ಜತೆಗೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ಆಲಸ್ಯ ಮತ್ತು ಸೋಮಾರಿತನಗಳಿಂದ ಹೊರಬರಬೇಕು. ಜಡಭರತರಂತೆ ಕಾಲ ಕಳೆಯಬಾರದು.

‘ಹೆಚ್ಚಿನ ಸೋಂಕಿತರು ದೈಹಿಕ ಚಟುವಟಿಕೆಗಳಿಂದ ದೂರ; ಸೋಮಾರಿಗಳಲ್ಲಿ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು’
ಹೆಚ್ಚಿನ ಸೋಂಕಿತರು ದೈಹಿಕ ಚಟುವಟಿಕೆಗಳಿಂದ ದೂರ; ಸೋಮಾರಿಗಳಲ್ಲಿ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು: ಅಧ್ಯಯನ ವರದಿ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Apr 15, 2021 | 10:57 AM

ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಕೂಡಿಲ್ಲದೇ ಇದ್ದರೆ ಕೊರೊನೊ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಅದರಲ್ಲೂ ಮುಖ್ಯವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಚಟುವಟಿಕೆಗಳಿಂದ ಕೂಡಿರದೇ, ಆಲಸ್ಯ ಮತ್ತು ಸೋಮಾರಿನದಿಂದಲೇ ಇದ್ದರೆ ಅಂತಹವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಅಮೆರಿಕಾ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ತಜ್ಞರನ್ನು ಒಳಗೊಂಡ ಸಂಶೋಧಕರ ತಂಡದ ಅಧ್ಯಯನದಲ್ಲಿ ಬಯಲಾಗಿದೆ. ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಒಳಗಾದವರರ ಜೀವನಶೈಲಿಯನ್ನು ಈ ತಂಡ ಅಧ್ಯಯನಕ್ಕೆ ಒಳಪಡಿಸಿದೆ. ಅಮೆರಿಕದಲ್ಲಿ ಕೊರೊನಾ ಸೊಂಕಿಗೆ ತುತ್ತಾದ ಬಹುತೇಕರು ಶ್ರಮಜೀವನ ನಡೆಸುತ್ತಿದ್ದವರಲ್ಲ ಎಂಬ ಸತ್ಯ ಈ ಮೂಲಕ ಹೊರಬಿದ್ದಂತಾಗಿದೆ. ಈ ಸಂಶೋಧನೆಯ ವರದಿಯು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್​ ಎಂಬ ಪ್ರಖ್ಯಾತ ಮ್ಯಾಗಜೀನ್​ನಲ್ಲಿ ಪ್ರಕಟವಾಗಿದೆ.

ಜೀವನ ಶೈಲಿ ಎಂಬುದು ಯಾವುದೇ ಒಂದು ರೋಗ ಅಥವಾ ಸೋಂಕು ನಮ್ಮನ್ನು ತಗುಲದಂತೆ ಕಾಪಾಡುವ ಬಹುಮುಖ್ಯ ಅಂಶ. ಧೂಮಪಾನ. ಮದ್ಯಪಾನ ಮಧುಮೇಹ, ಅತಿ ಒತ್ತಡ ಮುಂತಾದ ಅಂಶಗಳು ಕೊರೊನಾ ಸೋಂಕನ್ನು ನಮಗೆ ತಗುಲಿಸುವ ಅಂಶಗಳಾಗಿ ಕೆಲಸ ಮಾಡಬಲ್ಲವು. ಯಾರು ಈ ಅಭ್ಯಾಸಗಳಿಂದ ದೂರವಿರುತ್ತಾರೋ ಅವರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ಸಹಜವಾಗಿ ಕಡಿಮೆ. ಅಲ್ಲದೇ ತಗುಲಿದರೂ ಸಹ, ಉಂಟಾಗುವ ಪ್ರಭಾವಗಳು ಕಡಿಮೆಯಾಗಿರುತ್ತವೆ. ಈ ಎಲ್ಲ ಅಂಶಗಳ ಜತೆ ಆಲಸ್ಯ ಮತ್ತು ಸೋಮಾರಿತನಭರಿತ ಜೀವನ ಶೈಲಿಯು ನಮ್ಮನ್ನು ಕೊವಿಡ್ ಸೋಂಕಿಗೆ ಅತಿ ಹತ್ತಿರ ಕರೆದೊಯ್ಯಬಹುದು ಎಂಬುದು ತಿಳಿದುಬಂದಿದೆ.

ಸೋಮಾರಿಗಳಿಗೆ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು ಆಲಸ್ಯಭರಿತ ಜೀವಶೈಲಿಯು ಕೇವಲ ಕೊವಿಡ್ 19 ಒಂದೇ ಅಲ್ಲದೇ, ಇತರ ಕೆಲವು ಖಾಯಿಲೆಗಳಿಗೂ ದಾರಿ ಮಾಡಿಕೊಡಬಲ್ಲದು. ಅಮೆರಿಕದಲ್ಲಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು ಬಹುತೇಕರು ಹೆಚ್ಚು ವ್ಯಾಯಾಮದಂತಹ ಚಟುವಟಿ ಮಾಡುತ್ತಿರಲಿಲ್ಲ. ಹೆಚ್ಚಿನವರು ಒಂದು ವಾರಕ್ಕೆ ಕೇವಲ ಎರಡೂವರೆ ಗಂಟೆಗಳಷ್ಟೇ ವ್ಯಾಯಾಮದಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಈ ವರದಿ ಹೇಳಿದೆ. ಅಲ್ಲದೇ, ಅಂತಹ ಸೋಂಕಿತರನ್ನು ಇತರರಿಗಿಂತ ಶೇ 73ರಷ್ಟು ಹೆಚ್ಚು ಪಾಲು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಎದುರಾಗಿತ್ತು. ಅಲ್ಲದೇ ಅಂತವರ ಮರಣದ ಪ್ರಮಾಣವೂ ಇತರರಗಿಂತ ಶೇ 2.5ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸುತ್ತದೆ.

ಕೊರೊನಾ ಸೋಂಕು ತಡೆಯಲು ಖಂಡಿತವಾಗಿಯೂ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಬೇಕು. ಆದರೆ ಇವೆಲ್ಲದರ ಜತೆಗೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ಆಲಸ್ಯ ಮತ್ತು ಸೋಮಾರಿತನಗಳಿಂದ ಹೊರಬರಬೇಕು. ಜಡಭರತರಂತೆ ಕಾಲ ಕಳೆಯಬಾರದು. ನಿರಂತರವಾಗಿ ವ್ಯಾಯಾಮ ಯೋಗಾಭ್ಯಾಸಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಲಾಗಿದೆ. ಕೊರೊನಾ ಇಲ್ಲದಿದ್ದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ನಮ್ಮ ಆರೋಗ್ಯಕ್ಕೆ ಉತ್ತಮವೇ ತಾನೇ? ಮತ್ತೇಕೆ ತಡ!

ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

Covid India Update: ಭಾರತದಲ್ಲಿ ಒಂದೇ ದಿನ 1027 ಮಂದಿ ಸಾವು; 1.84 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ

(Physically inactive people suffer from Covid 19 says research)

Published On - 7:52 am, Thu, 15 April 21

ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ