Hajj: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಮಾಡುವುದು ಹೇಗೆ? ಯಾರಿಗೆಲ್ಲ ಅವಕಾಶ ಸಿಗುತ್ತೆ

ಸಾಯುವ ಮುನ್ನ ಒಮ್ಮೆಯಾದರೂ ಈ ಯಾತ್ರೆ ಮಾಡಬೇಕು ಎಂದು ಕೊಳ್ಳುವ ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಆರಂಭವಾಗಿದೆ. ಈ ಯಾತ್ರೆಗೆ ಯಾರಿಗೆಲ್ಲ ಅವಕಾಶ ಇದೆ. ಹೇಗೆ ಯಾತ್ರೆ ಕೈಗೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

Hajj: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಮಾಡುವುದು ಹೇಗೆ? ಯಾರಿಗೆಲ್ಲ ಅವಕಾಶ ಸಿಗುತ್ತೆ
ಕಾಬಾ
Follow us
|

Updated on: Jun 27, 2023 | 10:00 AM

ಹಿಂದೂ ಧರ್ಮದಲ್ಲಿ ತೀರ್ಥಯಾತ್ರೆ(Tirtha Yatra) ಮಾಡುವುದು ಎಷ್ಟು ಮುಖ್ಯವೊ ಅದೇ ರೀತಿ ಮುಸ್ಲಿಂ ಧರ್ಮದಲ್ಲಿ ಹಜ್ ಯಾತ್ರೆ(Hajj) ಮಾಡುವುದನ್ನು ಅತಿ ಮುಖ್ಯ ಹಾಗೂ ಪುಣ್ಯ ಎನ್ನಲಾಗುತ್ತೆ. ಪ್ರತಿಯೊಬ್ಬ ಮುಸಲ್ಮಾನರು(Muslims) ಜೀವನದಲ್ಲಿ ಒಮ್ಮೆಯಾದರೂ ಹಜ್ ಮಾಡಲೇ ಬೇಕು ಎಂಬ ಮಹಾದಾಸೆ ಹೊಂದಿರುತ್ತಾರೆ. ಅದೆಷ್ಟೋ ಬಡ ಜನರು ದೇವರ ಮನೆಯಂದೇ ಕರೆಯುವ ಕಾಬಾವನ್ನು ನೋಡಲು ಹಗಲು-ರಾತ್ರಿ ದುಡಿಯುವ ಪುಡಿಗಾಸನ್ನೂ ಕೂಡಿಟ್ಟು ಈ ಹಜ್ ಯಾತ್ರೆಗೆ ಹೋಗುತ್ತಾರೆ. ಸೌದಿ ಅರೇಬಿಯಾದ(Saudi Arabia) ಮೆಕ್ಕಾ(Mecca) ನಗರದಲ್ಲಿರುವ ಈ ಪವಿತ್ರ ಯಾತ್ರಾ ಸ್ಥಳ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಹಜ್‌ ಯಾತ್ರೆ ಈ ಬಾರಿ ಜೂನ್‌ 26ರಿಂದ ಜುಲೈ 1ರ ತನಕ ನಡೆಯಲಿದೆ. ಈ ಬಾರಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಲಿದ್ದಾರೆ. ಕೊರೊನಾ ನಿರ್ಬಂಧಗಳ ನಂತರ ಮೆಕ್ಕಾದಲ್ಲಿ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಜ್ ಮಾಡುವುದು ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಳಲ್ಲಿ ಬಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಕಾರ ಪ್ರತಿ ವರ್ಷ ಬಕ್ರೀದ್ ಹಬ್ಬದ ವೇಳೆ ಹಜ್ ಯಾತ್ರೆಗೆಂದು ದಿನಾಂಕ ನಿಗದಿ ಮಾಡಲಾಗುತ್ತೆ. ಹಜ್ ಮಾಡುವುದು ಅಧ್ಯಾತ್ಮಿಕ ಅನುಭವವಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಪಾಪ ಕಳೆಯುತ್ತದೆ. ದೇವರಿಗೆ ನಾವು ಮತ್ತಷ್ಟು ಹತ್ತಿರ ಆಗುತ್ತೇವೆ ಎಂಬ ಭಾವನೆ ಇದೆ. ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ಮುಸ್ಲಿಮರಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಹಜ್ ಮಾಡಲು ಅವಕಾಶ ನೀಡುವುದು ಅಸಾಧ್ಯವಾದ ಹಿನ್ನೆಲೆ ಸೌದಿ ಸರ್ಕಾರವು ಪ್ರತಿ ದೇಶಕ್ಕೂ ಕೋಟಾವನ್ನು ಮೀಸಲಿಡುತ್ತೆ. ಈ ಮೂಲಕ ಯಾವ ದೇಶದಿಂದ ಎಷ್ಟು ಜನ ಮುಸ್ಲಿಮರು ಹಜ್ ಯಾತ್ರೆಗೆ ಬರಬಹುದು ಎಂದು ಸೌದಿ ಸರ್ಕಾರವೇ ತೀರ್ಮಾನಿಸುತ್ತೆ. ಎಷ್ಟೇ ಜನರಿಗಷ್ಟೇ ಆ ವರ್ಷ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತೆ.

ಸಾಮಾನ್ಯವಾಗಿ ಹೇಳುವುದಾದರೆ, ಮುಸ್ಲಿಂ-ಬಹುಸಂಖ್ಯಾತ ದೇಶಗಳಲ್ಲಿ ಪ್ರತಿ 1,000 ಮುಸ್ಲಿಮರಿಗೆ ಒಬ್ಬ ಯಾತ್ರಿಕ ಎಂಬ ನಿಯಮವಿದೆ. ಇದು 1987ರ ಇಸ್ಲಾಮಿಕ್ ಕಾನ್ಫರೆನ್ಸ್ ಸಂಘಟನೆಯಲ್ಲಿ ಒಪ್ಪಿಕೊಳ್ಳಲಾಗಿತ್ತು. ಉದಾಹರಣೆಗೆ, ಇಂಡೋನೇಷ್ಯಾದಲ್ಲಿ, ಸುಮಾರು 276 ಮಿಲಿಯನ್ ಜನಸಂಖ್ಯೆಯಲ್ಲಿ ಅಂದಾಜು 88% ಮುಸ್ಲಿಮರಿದ್ದಾರೆ. ಈ ವರ್ಷ, ಹಜ್‌ಗಾಗಿ ಇಂಡೋನೇಷ್ಯಾದ ಕೋಟಾ ಕೇವಲ 230,000 ನೀಡಲಾಗಿದೆ.

ಇದನ್ನೂ ಓದಿ: Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?

ಸೌದಿ ಸರ್ಕಾರ ಕೋಟಾಗಳನ್ನು ನಿಗದಿಪಡಿಸಿದರೆ, ಯಾತ್ರಿಕರಿಗೆ ಸೌದಿ ಹಜ್ ವೀಸಾಗಳನ್ನು ಹೇಗೆ ವಿತರಿಸಬೇಕೆಂದು ಕೆಲಸ ಮಾಡಲು ಹಲವು ದೇಶಗಳು ತಮ್ಮದೇ ಆದ ಆಂತರಿಕ ಲಾಟರಿ ಅಥವಾ ಕೋಟಾ ಮತ್ತು ಅರ್ಹತಾ ವ್ಯವಸ್ಥೆಗಳನ್ನು ಹೊಂದಿವೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ವ್ಯವಸ್ಥೆ ಇದೆ.

ಇಂಡೋನೇಷ್ಯಾದಂತಹ ಕೆಲ ದೇಶಗಳಲ್ಲಿ ಹಜ್ ಯಾತ್ರಾ ಅರ್ಜಿದಾರರು ಶುಲ್ಕ ಪಾವತಿಸಿ ಲಾಟರಿ ಎತ್ತುತ್ತಾರೆ. ಆಗ ಅವರ ಹೆಸರು ಬರಲಿಲ್ಲವೆಂದರೆ ಅವರನ್ನು ವೈಟಿಂಗ್ ಲಿಸ್ಟ್​ಗೆ ಹಾಕಲಾಗುತ್ತೆ. ಅವರ ಹೆಸರು ಬರುವವರೆಗೂ ಅವರು ಕಾಯಬೇಕಾಗುತ್ತೆ. ಈ ರೀತಿ ಅದೆಷ್ಟೋ ಮಂದಿ ದಶಕಗಳ ವರೆಗೆ ತಮ್ಮ ಸರದಿಗಾಗಿ ಕಾದಿದ್ದಾರೆ. ಇನ್ನು ಜೋರ್ಡಾನ್‌ ದೇಶದಲ್ಲಿ ವೆಬ್‌ಸೈಟ್ ಮೂಲಕ ಅರ್ಜಿ ನೋಂದಣಿ ಮಾಡುವಾಗಲೇ ಯಾತ್ರಿಕರ ಜನ್ಮ ದಿನಾಂಕವನ್ನು ಕೇಳಲಾಗುತ್ತೆ. ಅರ್ಜಿ ಸಲ್ಲಿಸಿದವರಲ್ಲಿ ಯಾವ ವ್ಯಕ್ತಿ ಈ ಹಿಂದೆ ಹಜ್​ಗೆ ಹೋಗಿಲ್ಲ ಎಂಬುದನ್ನು ಪರಿಶೀಲಿಸಿ, ಮೊದಲ ಬಾರಿಗೆ ಹಜ್‌ ಮಾಡುವವರಿಗೆ ಹಾಗೂ ವಯಸ್ಸಾದ ಹಿರಿಯರಿಗೆ ಆಧ್ಯತೆ ನೀಡಲಾಗುತ್ತೆ.

ಹಜ್ ಕೋಟಾದಲ್ಲೂ ಭ್ರಷ್ಟಾಚಾರ

ಇನ್ನು ಹಜ್ ಯಾತ್ರೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಸ್ಥಳೀಯ ಟೂರ್ ಆಪರೇಟರ್‌ಗಳು ಸೌದಿ ಸರ್ಕಾರ ನಿಗದಿ ಮಾಡಿದ ಕೋಟಾದ ವೆಚ್ಚಕ್ಕಿಂತ ಹೆಚ್ಚಿನ ದರವನ್ನು ಪಡೆದ ಆರೋಪಗಳು ಕೇಳಿ ಬಂದಿವೆ. ಯಾತ್ರಿಕರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಿಳಿಯಲು ಸಹ ಹಣ ಪಡೆಯಲಾಗುತ್ತಿದೆ. ಹಜ್ ಯಾತ್ರೆ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳು ಕೂಡ ಭಾಗಿಯಾಗಿದ್ದರೆ ಎಂಬ ಆರೋಪ ಕೇಳಿ ಬಂದಿತ್ತು.

ದೇಶದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ