World War 2: ಉಕ್ರೇನ್ ನೆಪದಲ್ಲಿ ಹೊರಬಂದ ರಷ್ಯಾ ಜಪಾನ್ ಕಹಿ: ತಾಂತ್ರಿಕವಾಗಿ ಎರಡೂ ದೇಶಗಳು ಯುದ್ಧದಲ್ಲಿವೆ

2ನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಜಪಾನ್​ನ ಕುರಿಲ್ ದ್ವೀಪಗಳಿಗೆ ಇಷ್ಟು ದಿನ ಜಪಾನೀಯರು ವೀಸಾ ಇಲ್ಲದೆ ಭೇಟಿ ನೀಡಬಹುದಾಗಿತ್ತು. ಆದರೆ ಈ ಸವಲತ್ತನ್ನು ರಷ್ಯಾ ಇದೀಗ ಹಿಂಪಡೆದಿದೆ.

World War 2: ಉಕ್ರೇನ್ ನೆಪದಲ್ಲಿ ಹೊರಬಂದ ರಷ್ಯಾ ಜಪಾನ್ ಕಹಿ: ತಾಂತ್ರಿಕವಾಗಿ ಎರಡೂ ದೇಶಗಳು ಯುದ್ಧದಲ್ಲಿವೆ
ಜಪಾನ್ ಪ್ರಧಾನಿ ಕಿಶಿದಾ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ನಡುವೆ ಕುರಿಲ್ ದ್ವೀಪಗಳು
Follow us
|

Updated on:Mar 25, 2022 | 2:14 PM

77 ವರ್ಷಗಳ ಹಿಂದಿನ ಇಂಥದ್ದೇ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಜಪಾನ್ ಶರಣಾಯಿತು. ಸೆಪ್ಟೆಂಬರ್ 2, 1945ರಂದು ಜಪಾನ್ ಅಧಿಕೃತವಾಗಿ ಶರಣಾಗತಿಯ ಘೋಷಣೆ ಹೊರಡಿಸಿದ ನಂತರ ಜಗತ್ತು ಕಂಡ ವಿಪ್ಲವಕಾರಿ ಯುದ್ಧ ಎನಿಸಿದ 2ನೇ ಮಹಾಯುದ್ಧವು ಕೊನೆಯಾಯಿತು. ಅಮೆರಿಕ-ಜಪಾನ್ ನಡುವಣ ಯುದ್ಧ ಕೊನೆಯಾಯಿತಾದರೂ, ಅಂದು ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ರಷ್ಯಾದೊಂದಿಗಿನ ಜಪಾನ್​ನ ಹೋರಾಟ ಮಾತ್ರ ಮುಗಿಯಲೇ ಇಲ್ಲ. ಎರಡೂ ದೇಶಗಳ ನಡುವೆ ಯುದ್ಧ ನಿಲ್ಲಿಸುವ ಒಪ್ಪಂದ ನಡೆಯಲಿಲ್ಲ. ಹೀಗಾಗಿ ತಾಂತ್ರಿಕವಾಗಿ ಜಪಾನ್ ಮತ್ತು ರಷ್ಯಾ ಇಂದಿಗೂ ಯುದ್ಧ ಮುಂದುವರಿಸಿದಂತೆಯೇ ಸರಿ. ಜಪಾನ್ ಮತ್ತು ರಷ್ಯಾಗಳ ನಡುವೆ ಇರುವ ನಾಲ್ಕು ದ್ವೀಪಗಳು ಯಾರಿಗೆ ಸೇರಬೇಕು ಎಂಬ ವಿವಾದವೂ ಇಂದಿಗೂ ಬಗೆಹರಿದಿಲ್ಲ.

ಇದೀಗ ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ರಷ್ಯಾ ವಿರುದ್ಧ ಜಪಾನ್ ಹಲವು ನಿರ್ಬಂಧಗಳನ್ನು ಘೋಷಿಸಿತು. ಇದನ್ನೇ ನೆಪವಾಗಿಸಿಕೊಂಡ ರಷ್ಯಾ ಹಳೆಯ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಹಲವು ವರ್ಷಗಳಿಂದ ನಡೆಯುತ್ತಲೇ ಇದ್ದ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ರಷ್ಯಾ ಘೋಷಿಸಿದೆ. ‘ಪ್ರಜ್ಞಾಪೂರ್ವಕವಾಗಿ ಜಪಾನ್ ರಷ್ಯಾ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ’ ಎನ್ನುವುದು ತನ್ನ ನಿರ್ಧಾರಕ್ಕೆ ಕಾರಣ ಎಂದು ರಷ್ಯಾ ಘೋಷಿಸಿದೆ. ಎರಡೂ ದೇಶಗಳ ನಡುವೆ ಈ ಹಿಂದೆ ಮಾಡಿಕೊಂಡಿದ್ದ ಆರ್ಥಿಕ ಸಹಭಾಗಿತ್ವದ ಒಪ್ಪಂದಗಳಿಂದಲೂ ದೂರ ಸರಿಯುವುದಾಗಿ ರಷ್ಯಾ ಹೇಳಿದೆ.

ಶಾಂತಿ ಮಾತುಕತೆಯಿಂದ ರಷ್ಯಾ ಹಿಂದೆ ಸರಿದಿದ್ದು ಏಕೆ? ರಷ್ಯಾ ಮತ್ತು ಜಪಾನ್ ನಡುವೆ ಈ ಹಿಂದೆ ಹಲವು ಆರ್ಥಿಕ ಒಪ್ಪಂದಗಳು ಚಾಲ್ತಿಯಲ್ಲಿದ್ದವು. ರಷ್ಯಾಕ್ಕೆ ನೀಡಿದ್ದ ‘ಅತಿ ವಿಶ್ವಾಸಾರ್ಹ ದೇಶ’ದ ‘most-favoured nation’ (MFN) ಸ್ಥಾನಮಾನವನ್ನು ಜಪಾನ್ ಹಿಂಪಡೆಯಿತು. ಸದಸ್ಯ ದೇಶಗಳ ನಡುವೆ ತಾರತಮ್ಯವಿಲ್ಲದಂತೆ ವ್ಯಾಪಾರ-ವಹಿವಾಟು ನಡೆಸಲು MFN ಸ್ಥಾನಮಾನ ಇರಬೇಕು ಎಂಬುದು ವಿಶ್ವ ವ್ಯಾಪಾರ ಸಂಘಟನೆಯ (World Trade Organisation – WTO) ಅತಿಮುಖ್ಯ ನಿಬಂಧನೆಯಾಗಿದೆ. ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್​ಗಳು ರಷ್ಯಾ ವಿರುದ್ಧ ಶಿಸ್ತುಕ್ರಮ ಘೋಷಿಸಿದ ನಂತರ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸಹ ಇಂಥದ್ದೇ ಕ್ರಮಕ್ಕೆ ಮುಂದಾದರು. ಜಪಾನ್​ನಲ್ಲಿರುವ ರಷ್ಯಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ ಹಲವು ಉತ್ಪನ್ನಗಳ ಆಮದು ಮೇಲೆಯೂ ಜಪಾನ್ ನಿರ್ಬಂಧಗಳನ್ನು ಹೇರಿದೆ. ಸೆಮಿಕಂಡಕ್ಟರ್​, ಕಂಪ್ಯೂಟರ್​ ಸೇರಿದಂತೆ ರಷ್ಯಾಕ್ಕೆ ಅತ್ಯಗತ್ಯವಾಗಿ ಬೇಕಿರುವ ಹಲವು ಉತ್ಪನ್ನಗಳ ರಫ್ತನ್ನೂ ಜಪಾನ್ ನಿರ್ಬಂಧಿಸಿದೆ.

ವಾಣಿಜ್ಯ ಕ್ಷೇತ್ರದಲ್ಲಿ ರಷ್ಯಾ ವಿರುದ್ಧ ಜಪಾನ್ ಕ್ರಮಗಳನ್ನು ಪ್ರಕಟಿಸಿದ ಬೆನ್ನಿಗೇ ರಷ್ಯಾ ಕೂಡ ಪ್ರತಿಕಾರ ಕ್ರಮಗಳನ್ನು ಘೋಷಿಸಿ, ಜಪಾನ್ ವಿರುದ್ಧದ ಶಾಂತಿ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತು. ‘ದೇಶದ ಹಿತಾಸಕ್ತಿಗೆ ವ್ಯತಿರಿಕ್ತ ನಿಲುವು ತಳೆದಿರುವ ದೇಶದೊಂದಿಗೆ ಮಾತುಕತೆ ನಡೆಸಲು ಆಗುವುದಿಲ್ಲ’ ಎಂದು ರಷ್ಯಾ ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. 2ನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಜಪಾನ್​ನ ಕುರಿಲ್ ದ್ವೀಪಗಳಿಗೆ ಇಷ್ಟು ದಿನ ಜಪಾನೀಯರು ವೀಸಾ ಇಲ್ಲದೆ ಭೇಟಿ ನೀಡಬಹುದಾಗಿತ್ತು. ಆದರೆ ಈ ಸವಲತ್ತನ್ನು ರಷ್ಯಾ ಇದೀಗ ಹಿಂಪಡೆದಿದೆ.

ಆಗಲೇ ಇಲ್ಲ ಶಾಂತಿ ಒಪ್ಪಂದ ಜಪಾನ್ ಮತ್ತು ರಷ್ಯಾ ದೇಶಗಳು ಸಾಂಪ್ರದಾಯಿಕ ವೈರಿಗಳು. ಎರಡೂ ದೇಶಗಳ ನಡುವಣ ಸಂಘರ್ಷಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಆದರೆ 2ನೇ ಮಹಾಯುದ್ಧದ ಕೊನೆಕೊನೆಗೆ ಎರಡೂ ದೇಶಗಳ ಸಂಬಂಧ ತೀವ್ರವಾಗಿ ಹಳಸಿತು. ರಷ್ಯಾ ಮೇಲೆ ಜಪಾನ್ ದಾಳಿ ಮಾಡುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡ ನಂತರವೇ ರಷ್ಯಾದ ಸರ್ವಾಧಿಕಾರಿ ಸ್ಟಾಲಿನ್ ಪಶ್ಚಿಮದತ್ತ, ಅಂದರೆ ಜರ್ಮನಿಯ ವಿರುದ್ಧ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದ. ಆದರೆ ರಷ್ಯಾದ ರೆಡ್ ಆರ್ಮಿ ಜರ್ಮನಿ ರಾಜಧಾನಿ ಬರ್ಲಿನ್ ವಶಪಡಿಸಿಕೊಂಡ ನಂತರ ಧೋರಣೆ ಬದಲಾಯಿತು. ರಷ್ಯಾ ಸೇನೆ ತನ್ನ ಗಮನವನ್ನು ಪೂರ್ವ ಗಡಿಯತ್ತ, ಅಂದರೆ ಜಪಾನ್​ ಕಡೆಗೆ ಗಮನ ಹರಿಸಿದ. ಜಪಾನ್ ವಿರುದ್ಧ ಯುದ್ಧ ಘೋಷಿಸಿ, ಹೊಕೈಡೊ ಸಮೀಪ ಜಪಾನ್​ಗೆ ಸೇರಿದ್ದ ಕೆಲ ದ್ವೀಪಗಳನ್ನು ವಶಪಡಿಸಿಕೊಂಡ. ಆ ದ್ವೀಪಗಳಲ್ಲಿದ್ದ ಎಲ್ಲ 17,000 ಜಪಾನ್ ನಾಗರಿಕರನ್ನು ಗಡಿಪಾರು ಮಾಡಲಾಯಿತು.

ಈ ಬೆಳವಣಿಗೆಯ ನಂತರ ದ್ವೀಪಗಳು ಯಾರ ಸುಪರ್ದಿಗೆ ಬರಬೇಕು ಎನ್ನುವ ವಿವಾದ ಪರಿಹಾರ ಆಗಲೇ ಇಲ್ಲ. ‘ಈ ದ್ವೀಪಗಳು ಜಪಾನ್​ನ ಅವಿಭಾಜ್ಯ ಅಂಗ’ ಎಂದು ಜಪಾನ್, ‘ಇವು ನಮಗೆ ಸೇರಿದ ದ್ವೀಪಗಳು. ಇಲ್ಲಿ ಜಪಾನ್​ನ ಹಕ್ಕು ಮಾನ್ಯ ಮಾಡಲು ಆಗದು’ ಎಂದು ರಷ್ಯಾ ವಾದಿಸುತ್ತಲೇ ಬಂದಿತ್ತು. ಇದೇ ಕಾರಣಕ್ಕೆ 1945ರಲ್ಲಿ ಜಪಾನ್ ವಿರುದ್ಧ ರಷ್ಯಾ ಘೋಷಿಸಿದ್ದ ಯುದ್ಧ ಕೊನೆಗೊಳ್ಳುವ ಒಪ್ಪಂದ ನಡೆಯಲೇ ಇಲ್ಲ. ಆದರೆ ಎರಡೂ ದೇಶಗಳು 1956ರಲ್ಲಿ ಯುದ್ಧ ಸ್ಥಿತಿಯಿಂದ ಹೊರಬಂದಿರುವ ಘೋಷಣೆಯೊಂದನ್ನು ಹೊರಡಿಸಿದವು. ಈ ಘೋಷಣೆಯಲ್ಲಿಯೂ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕೆಂದು ಷರತ್ತು ಇತ್ತು. ಆದರೆ ಈವರೆಗೆ ಅದು ಈಡೇರಿಲ್ಲ.

ಅತಿಮುಖ್ಯ ದ್ವೀಪಗಳಿವು ಮೀನುಗಾರಿಕೆ ಸಂಪನ್ಮೂಲ ಸಮೃದ್ಧವಾಗಿರುವ ಈ ದ್ವೀಪ ಸಮೂಹಗಳು ಜಾಗತಿಕ ಮಿಲಿಟರಿ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದಿವೆ. ರಷ್ಯಾದ ಪೆಸಿಫಿಕ್ ನೌಕಾದಳ ಇಲ್ಲಿಯೇ ನೆಲೆ ಹೊಂದಿದೆ. ಕಳೆದ ಕೆಲ ವರ್ಷಗಳಿಂದ ಈ ದ್ವೀಪಗಳ ಆಸುಪಾಸಿನಲ್ಲಿ ರಷ್ಯಾದ ಸೇನಾ ಚಟುವಟಿಕೆಗಳು ಹೆಚ್ಚಾಗಿದ್ದವು. 2016ರಲ್ಲಿ ರಷ್ಯಾ ನೌಕಾಪಡೆಯು ಈ ದ್ವೀಪಗಳಲ್ಲಿ ಯುದ್ಧನೌಕೆಗಳು ಹಾಗೂ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಅಷ್ಟೇ ಅಲ್ಲದೆ ಯುದ್ಧವಿಮಾನಗಳನ್ನೂ ರಷ್ಯಾ ಇಲ್ಲಿ ನೆಲೆಗೊಳಿಸಿದೆ. ಜಪಾನ್ ಹಲವು ಬಾರಿ ಈ ಬೆಳವಣಿಗೆಯನ್ನು ವಿರೋಧಿಸಿದೆ.

ರಷ್ಯಾ ಸಂವಿಧಾನ ತಿದ್ದುಪಡಿ: ಜಪಾನ್ ಕನಸಿಗೆ ತಣ್ಣೀರು 80 ವರ್ಷಗಳಷ್ಟು ಹಳೆಯದಾದ ಈ ವಿವಾದ ಪರಿಹರಿಸಿಕೊಳ್ಳಲು ರಷ್ಯಾ ಮತ್ತು ಜಪಾನ್ ಸತತ ಪ್ರಯತ್ನ ನಡೆಸಿದ್ದವು. 2012ರಿಂದ 2020ರ ಅವಧಿಯಲ್ಲಿ ಈ ಪ್ರಯತ್ನ ತೀವ್ರವಾಗಿತ್ತು. ಎರಡೂ ದೇಶಗಳ ನಡುವೆ ಸುಮಾರು 25 ಸಭೆಗಳು ನಡೆದವು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಜಪಾನ್​ನ ಮಾಜಿ ಪ್ರಧಾನಿ ಶಿಂಜೊ ಅಬೆ ನಡುವೆ ನೇರ ಮಾತುಕತೆ ನಡೆದು, 1956ರ ಯುದ್ಧ ವಿರಾಮ ಘೋಷಣೆಗೆ ಅನುಗುಣವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ವಿಚಾರ ಮುನ್ನಡೆಗೆ ಬಂತು. ಈ ಸೂತ್ರದ ಅನ್ವಯ ಒಪ್ಪಂದವಾಗಿದ್ದರೆ ಜಪಾನ್​ಗೆ ಎರಡು ದ್ವೀಪಗಳನ್ನು ರಷ್ಯಾ ಬಿಟ್ಟುಕೊಡಬೇಕಾಗುತ್ತಿತ್ತು. ಇದು ಸಾಧ್ಯವಾಗಬೇಕಾದರೆ ಮೊದಲು ಈ ದ್ವೀಪಗಳ ಮೇಲೆ ರಷ್ಯಾಕ್ಕೆ ಇರುವ ಅಧಿಕಾರವನ್ನು ಜಪಾನ್ ಒಪ್ಪಿಕೊಳ್ಳಬೇಕೆಂದು ರಷ್ಯಾ ಷರತ್ತು ವಿಧಿಸಿದ್ದರಿಂದ ಮಾತುಕತೆ ಅಷ್ಟಕ್ಕೆ ನಿಂತು ಹೋಯಿತು. 2020ರಲ್ಲಿ ರಷ್ಯಾ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದು, ತನ್ನ ದೇಶದ ಯಾವುದೇ ಭೂಭಾಗವನ್ನು ಇನ್ನೊಂದು ದೇಶಕ್ಕೆ ಬಿಟ್ಟುಕೊಡುವುದು ಅಕ್ರಮ ಎಂದು ಘೋಷಿಸಿತು. ಅನಂತರ ಮಾತುಕತೆಗಳಿಗೂ ಮಹತ್ವ ಇಲ್ಲದಂತಾಯಿತು.

ಇದೀಗ ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ರಷ್ಯಾವನ್ನು ಶಿಕ್ಷಿಸಲು ಹೊರಟ ಜಪಾನ್ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಮತ್ತೊಮ್ಮೆ ಬಡಿದೆಬ್ಬಿಸಿದೆ. ದಕ್ಷಿಣ ಚೀನಾ ಸಮುದ್ರ ವಿವಾದಲ್ಲಿ ಪದೇಪದೆ ಚೀನಾ ನೌಕಾಪಡೆಯಿಂದ ಆತಂಕ ಎದುರಿಸುತ್ತಿರುವ ಜಪಾನ್​ನ ಮುಂದಿನ ನಡೆಯನ್ನು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ. ಜಪಾನ್​ಗೆ ಅಮೆರಿಕದ ಭದ್ರತಾ ಖಾತ್ರಿ ಇರುವುದರಿಂದ ಈ ವಲಯದಲ್ಲಿ ನಡೆಯುವ ಯಾವುದೇ ಬೆಳವಣಿಗೆ ವಿಶ್ವಮಟ್ಟದ ವಿದ್ಯಮಾನವಾಗುತ್ತದೆ.

ಇದನ್ನೂ ಓದಿ: Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನು ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

Published On - 2:13 pm, Fri, 25 March 22

‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್