Sri Lanka Crisis ಜೀವಭಯದಿಂದ ನೌಕಾನೆಲೆಯಲ್ಲಿ ಆಶ್ರಯ ಪಡೆದ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬ

ಕೊಲಂಬೊದಲ್ಲಿರುವ ಸಿಎಂ ಅಧಿಕೃತ ನಿವಾಸವನ್ನು ರಾತ್ರೋರಾತ್ರಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಸುತ್ತುವರಿದ ನಂತರ ಪೊಲೀಸರು ಅಶ್ರುವಾಯು ಮತ್ತು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದ್ದಾರೆ. ಇದಾದ ನಂತರ ಗುಂಪು ಚದುರಿಸಿ...

Sri Lanka Crisis ಜೀವಭಯದಿಂದ ನೌಕಾನೆಲೆಯಲ್ಲಿ ಆಶ್ರಯ ಪಡೆದ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬ
ಮಹಿಂದಾ ರಾಜಪಕ್ಸೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 10, 2022 | 5:25 PM

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ(Mahinda Rajapaksa) ಮತ್ತು ಅವರ ಕುಟುಂಬವು ಶ್ರೀಲಂಕಾದ (Sri Lanka) ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿ (Trincomalee) ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಅದೇ ವೇಳೆ ದೇಶದಾದ್ಯಂತ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿವೆ. ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಕೊಂಡೊಯ್ಯಲಾಯಿತು ಎಂದು ಈ ಬಗ್ಗೆ ಗೊತ್ತಿರುವ ಜನರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ರಾಜಧಾನಿ ಕೊಲಂಬೊದಿಂದ ಸುಮಾರು 270 ಕಿಮೀ ದೂರದಲ್ಲಿರುವ ನೌಕಾ ನೆಲೆಯ ಹೊರಗೆಯೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಐದು ಜನರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲು ಶ್ರೀಲಂಕಾ ಇಂದು ಸಾವಿರಾರು ಸೈನಿಕರು ಮತ್ತು ಪೊಲೀಸರನ್ನು ನಿಯೋಜಿಸಿದೆ. ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ ಸೋಮವಾರ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಕೊಲಂಬೊದಲ್ಲಿರುವ ಸಿಎಂ ಅಧಿಕೃತ ನಿವಾಸವನ್ನು ರಾತ್ರೋರಾತ್ರಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಸುತ್ತುವರಿದ ನಂತರ ಪೊಲೀಸರು ಅಶ್ರುವಾಯು ಮತ್ತು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದ್ದಾರೆ. ಇದಾದ ನಂತರ ಗುಂಪು ಚದುರಿಸಿ ಮಿಲಿಟರಿ ಪಡೆ ಮುಂಜಾನೆ ರಾಜಪಕ್ಸೆ ಕುಟುಂಬವನ್ನು ಅಲ್ಲಿಂದ ರಕ್ಷಿಸಿದೆ. ಕನಿಷ್ಠ 10 ಪೆಟ್ರೋಲ್ ಬಾಂಬ್‌ಗಳನ್ನು ಕಾಂಪೌಂಡ್‌ಗೆ ಎಸೆಯಲಾಯಿತು” ಎಂದು ಉನ್ನತ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್​ಪಿ ವರದಿ ಮಾಡಿದೆ.

ಕನಿಷ್ಠ 10 ಪೆಟ್ರೋಲ್ ಬಾಂಬ್‌ಗಳನ್ನು ಕಾಂಪೌಂಡ್‌ಗೆ ಎಸೆಯಲಾಯಿತು ಎಂದು ಉನ್ನತ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್​ಪಿ  ವರದಿ ಮಾಡಿದೆ. ಶ್ರೀಲಂಕಾದಲ್ಲಿ 1948 ರಲ್ಲಿ ಸ್ವತಂತ್ರವಾದ ನಂತರದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು, ಇಂಧನ, ವಿದ್ಯುತ್,ಆಹಾರಕೊರತೆಯಿಂದಾಗಿ ರಾಜಪಕ್ಸೆ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿದೆ. ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಅಧಿಕಾರದಲ್ಲಿ ಉಳಿದುಕೊಂಡಿದ್ದು ಭದ್ರತಾ ಪಡೆಗಳ ಮೇಲೆ ವ್ಯಾಪಕ ಅಧಿಕಾರ ಮತ್ತು ಆಜ್ಞೆಯನ್ನು ಹೊಂದಿದ್ದಾರೆ.

ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯಾ ಅಥವಾ ಎಸ್​​ಜೆಪಿ ಮಧ್ಯಂತರ ಸರ್ಕಾರವನ್ನು ರಚಿಸುವ ಅಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಅಧ್ಯಕ್ಷ ಗೊಟಾಬಯ ರಾಜೀನಾಮೆಗೆ ಒತ್ತಾಯಿಸಿದೆ. ಸೋಮವಾರ ಮಹಿಂದಾ ರಾಜಪಕ್ಸೆ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ಕೋಲ,ದೊಣ್ಣೆಗಳಿಂದ ಪ್ರಹಾರ ಮಾಡಿದ್ದು, ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

ಇದನ್ನೂ ಓದಿ
Image
Sri Lanka Crisis: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ಕೊಲಂಬೊದ ಹೊರಗೆ ಆಡಳಿತ ಪಕ್ಷದ ಶಾಸಕ ಅಮರಕೀರ್ತಿ ಅತುಕೋರಾಲ ಅವರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಗುಂಪಿನಿಂದ ಸುತ್ತುವರಿದ ನಂತರ ಇಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೆ ಗುಂಡಿಕ್ಕಿದ ನಂತರ ಅವರು ತನ್ನ ರಿವಾಲ್ವರ್‌ನಿಂದ ತನ್ನ ಪ್ರಾಣ ತೆಗೆದುಕೊಂಡಿದ್ದಾರೆ  ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎಫ್ ಪಿಗೆ ತಿಳಿಸಿದರು. ಅತುಕೋರಾಲ ಅವರ ಅಂಗರಕ್ಷಕ ಕೂಡ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕರ್ಫ್ಯೂ ಹೇರಿದ್ದರೂ ಆಡಳಿತ ಪಕ್ಷದ ಉನ್ನತ ರಾಜಕಾರಣಿಗಳ ಕನಿಷ್ಠ 41 ಮನೆಗಳನ್ನು ರಾತ್ರಿ ಸುಟ್ಟು ಹಾಕಲಾಯಿತು. ಆ ಮನೆಗಳಲ್ಲಿ ನಿಲ್ಲಿಸಿದ್ದ ನೂರಾರು ದ್ವಿಚಕ್ರ ವಾಹನಗಳೂ ಸುಟ್ಟು ಕರಕಲಾಗಿವೆ. “ಇದು ನಾವು ಮೊದಲೇ ಮಾಡಬೇಕಾದ ಕೆಲಸ, ನಾವು ಮೊದಲೇ ಬೆಂಕಿ ಹಚ್ಚಬೇಕಿತ್ತು ” ಎಂದು ಸಚಿವರ ಮನೆ ಹೊತ್ತಿ ಉರಿಯುತ್ತಿರುವಾಗ ಅದರ ಮುಂದೆ ನಿಂತ ಅಪರಿಚಿತ ವ್ಯಕ್ತಿಯೊಬ್ಬರು ಸ್ಥಳೀಯ ಮಾಧ್ಯಮ ನೆಟ್​​ವರ್ಕ್​​​ಗೆ​​ ಹೇಳಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಪ್ರವಾಸೋದ್ಯಮ ಕುಸಿದಿದ್ದ ಶ್ರೀಲಂಕಾದ ಪ್ರಮುಖ ಆದಾಯಕ್ಕೆ ಹೊಡೆತ ಬಿದ್ದಾಗ ಪ್ರತಿಭಟನೆಗಳು ನಡೆದಿವೆ. ಇದು ಅನೇಕ ಆಮದುಗಳನ್ನು ನಿಷೇಧಿಸಲು ಸರ್ಕಾರವನ್ನು ಒತ್ತಾಯಿಸಿತು. ಇದರಿಂದಾಗಿ ಹಣದುಬ್ಬರ ಮತ್ತು ಸುದೀರ್ಘ ವಿದ್ಯುತ್ ಕಡಿತವನ್ನು ಇಲ್ಲಿನ ಜನರು ಅನುಭವಿಸಬೇಕಾಗಿ ಬಂತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಜಪಕ್ಸೆ ಅವರ ಮುಂದಿನ ನಡೆ ಏನು ಎಂಬುದು ಸ್ಪಷ್ಟವಾಗಿಲ್ಲ. ತನ್ನ ಸಹೋದರನಂತೆ ರಾಜೀನಾಮೆ ನೀಡಬಹುದು ಇಲ್ಲವೇ ಉಸ್ತುವಾರಿ ಸರ್ಕಾರವನ್ನು ನೇಮಿಸಬಹುದು. ಇಲ್ಲವೇ ಪ್ರತಿಭಟನೆಗಳನ್ನು ನಿಗ್ರಹಿಸಲು ಮಿಲಿಟರಿ ಮತ್ತು ಪೊಲೀಸರನ್ನು ನಿಯೋಜಿಸಬಹುದು ಅಥವಾ ಸಹಜವಾಗಿ ಪರಿಸ್ಥಿತಿ ತಿಳಿಯಾಗಲು ಕಾಯಬಹುದು ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಅಖಿಲ್ ಬೆರಿ ಅವರವು ಹೇಳಿರುವುದಾಗಿ ಎಎಫ್​​ಪಿಗೆ ವರದಿ ಮಾಡಿದೆ.

ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:45 pm, Tue, 10 May 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ