ವಿಶ್ವದ ನಾನಾ ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಈಗಲೂ ಹೆಚ್ಚುತ್ತಿವೆ, ದಯವಿಟ್ಟು ಯಾಮಾರಬೇಡಿ: ಸೌಮ್ಯ ಸ್ವಾಮಿನಾಥನ್

ಡೆಲ್ಟಾ ರೂಪಾಂತರಿಯ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಪ್ರಪಂಚದ ನಾನಾ ಪ್ರಾಂತ್ಯಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಡಬ್ಲ್ಯುಹೆಚ್ಒ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ವಿಶ್ವದ ನಾನಾ ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಈಗಲೂ ಹೆಚ್ಚುತ್ತಿವೆ, ದಯವಿಟ್ಟು ಯಾಮಾರಬೇಡಿ: ಸೌಮ್ಯ ಸ್ವಾಮಿನಾಥನ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 7:30 AM

ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ದಿನೇದಿನೇ ಕಡಿಮೆಯಾಗುತ್ತಿವೆ, ಸಾವಿನ ಪ್ರಮಾಣ ಇಳಿಕೆಯಾಗಿದೆ, ಸರ್ಕಾರವೂ ಲಾಕ್​ಡೌನ್​ ತೆರವು ಮಾಡಿದೆ ಅಂತ ನಾವೆಲ್ಲ ಸಂತೋಷಪಡುತ್ತಿದ್ದೇವೆ. ಅದು ಸಹಜವೂ ಹೌದು. ಸುಮಾರು ಎರಡೂವರೆ ತಿಂಗಳ ಕಾಲ ಗೃಹಬಂಧನದಲ್ಲಿದ್ದವರಿಗೆ ಯಾವಾಗ ಸೋಂಕು ಪ್ರಮಾಣ ಕಡಿಮೆಯಾದೀತು ಯಾವಾಗ ಮೊದಲಿನಂತೆ ಹೊರಗಡೆ ತಿರುಗಾಡಲಾದೀತು ಅಂತ ಅನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂಥ ಸಮಯ ನಮಗೆ ಒದಗಿ ಬಂದಿರುವುದು ನಿಜವಾದರೂ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್ಒ) ಮುಖ್ಯ ವಿಜ್ಞಾನಿ ಹೇಳಿರುವುದನ್ನು ಗಮನಿಸಿದರೆ ನಮ್ಮ ಖುಷಿ, ಸಂತೋಷಗಳು ಅಲ್ಪಾಯುಷಿಯೇನೋ ಎಂಬ ಸಂದೇಹ ಹುಟ್ಟಿಕೊಳ್ಳುತ್ತದೆ.

ಡೆಲ್ಟಾ ರೂಪಾಂತರಿಯ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಪ್ರಪಂಚದ ನಾನಾ ಪ್ರಾಂತ್ಯಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಡಬ್ಲ್ಯುಹೆಚ್ಒ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಅದರರ್ಥ ಮೂರನೇ ಇಷ್ಟರಲ್ಲೇ ಅಪ್ಪಳಿಸಲಿದೆ ಅಥವಾ ಎರಡನೇ ಅಲೆಯೇ ನಮ್ಮನ್ನು ಇನ್ನೂ ಕಾಡಲಿದೆ.

‘ವಿಶ್ವದ ಕೆಲ ಭಾಗಗಳಲ್ಲಿ ಕೊವಿಡ್​ ಲಸಿಕೆಯಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆಯಾರೂ ಬಹಳಷ್ಟು ಕಡೆಗಳಲ್ಲಿ ಆಮ್ಲಜನಕದ ಕೊರತೆ, ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಮತ್ತು ಮರಣ ಪ್ರಮಾಣ ಇನ್ನೂ ಹಾಗೆಯೇ ಇದೆ,’ ಎಂದು ಸೌಮ್ಯ ಸ್ವಾಮಿನಾಥನ್ ಟಿವಿ ಚ್ಯಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 5,00,000 ಹೊಸ ಕೊರೋನಾವೈರಸ್ ಪ್ರಕರಣಗಳು ಮತ್ತು 9,300 ಸೋಕಿಗೆ ಸಂಬಂಧಿಸಿದ ಸಾವುಗಳು ವರದಿಯಾಗಿವೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಪಿಡುಗು ಇನ್ನೂ ಇಳಿಮುಖಗೊಂಡಿಲ್ಲ,’ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ

ಡಬ್ಲ್ಯುಹೆಚ್ಒದ ಆರು ಪ್ರಾಂತ್ಯಗಳ ಪೈಕಿ ಐದರಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಆಫ್ರಿಕಾದಲ್ಲಿ ಸಾವಿನ ಪ್ರಮಾಣ ಕಳೆದೆರಡು ವಾರಗಳಲ್ಲಿ ಶೇಕಡಾ 30 ರಿಂದ ಶೇಕಡಾ 40ಕ್ಕೆ ಜಿಗಿದಿದೆ. ಪ್ರಕರಣಗಳು ಹೆಚ್ಚಿತ್ತಿರುವುದಕ್ಕೆ ಪ್ರಮುಖ ಕಾರಣಗಳೆಂದರೆ; ತ್ವರಿತ ಗತಿಯಲ್ಲಿ ಹಬ್ಬುತ್ತಿರುವ ಡೆಲ್ಟಾ ರೂಪಾಂತರಿ, ಅಮೆ ಗತಿಯಲ್ಲಿ ಸಾಗುತ್ತಿರುವ ಲಸಿಕಾ ಕಾರ್ಯಕ್ರಮಗಳು ಮತ್ತು ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಜಾಗತಿಕವಾಗಿ ಸಡಿಲಗೊಳಿಸಿರುವುದು ಎಂದು ಡಬ್ಲ್ಯುಹೆಚ್ಒ ವಿಜ್ಞಾನಿ ಹೇಳಿದ್ದಾರೆ.

ಹಾಗಾಗೇ, ಲಾಕ್​ಡೌನ್​ ತೆರವುಗೊಳಿಸಲು ಧಾವಂತ ತೋರಿದರೆ, ಇದುವೆರೆಗೆ ಪಡೆದುಕೊಂಡಿರುವ ಪ್ರಯೋಜನಗಳು ಹಾಳಾಗುತ್ತವೆ ಎಂದು ಈ ವಾರ ಸರ್ಕಾರಗಳಿಗೆ ಡಬ್ಲ್ಯುಹೆಚ್ಒ ಆಗ್ರಹಿಸಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಇಂಗ್ಲೆಂಡ್​ನಲ್ಲಿ ಕಾನೂನಾತ್ಮಕ ನಿರ್ಬಂಧಗಳು ಜುಲೈ 19 ರಂದು ಕೊನೆಗೊಳ್ಳುತ್ತವೆ, ಮತ್ತು ಮಾಸ್ಕ್ ಧರಿಸುವಂಥ ಸುರಕ್ಷತಾ ಕ್ರಮ ವೈಯಕ್ತಿಕ ಆಯ್ಕೆಗೆ ಬಿಡಲಾಗುತ್ತಿದೆ. ಪ್ರಕರಣಗಳು ಕಾಡಿಮೆಯಾಗುತ್ತಿರುವಂತೆಯೇ, ಅಮೇರಿಕ ಮತ್ತು ಯುರೋಪಿನ ಹಲವಾರು ರಾಷ್ಟ್ರಗಳು ನಿರ್ಬಂಧಗಳನ್ನು ಸಡಲಗೊಳಿಸಿವೆ.

‘ಇನ್ನು ಮೇಲೆ ಎಲ್ಲರೂ ಸುರಕ್ಷಿತ, ವೈರಸ್ ನಾಶವಾಯಿತು, ಎಲ್ಲವೂ ಮೊದಲಿನಂತೆ ಆಗಲಿದೆ ಎಂದು ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಜನ ಭಾವಿಸುವುದು ತಪ್ಪು,’ ಎಂದು ಡಬ್ಲ್ಯುಹೆಚ್ಒದ ಆರೋಗ್ಯ ತುರ್ತು ಸ್ಥಿತಿ ಪ್ರೋಗ್ರಾಮ್​ನ ಮುಖ್ಯಸ್ಥರಾಗಿರುವ ಮೈಕ್​ ರಿಯಾನ್ ಅವರು ಬುಧವಾರದಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Delta Variant: ಡೆಲ್ಟಾ ವೈರಾಣು ಮಿದುಳಿಗೆ ಅಟ್ಯಾಕ್​ ಆದ್ರೆ ಏನಾಗುತ್ತದೆ?-ಐಸಿಎಂಆರ್​ ಮಾಜಿ ಮುಖ್ಯ ವಿಜ್ಞಾನಿ ನೀಡಿದ್ದಾರೆ ಮತ್ತೊಂದು ಎಚ್ಚರಿಕೆ..

ಇದನ್ನೂ ಓದಿ: Delta Variant: ಡೆಲ್ಟಾ ಮಾದರಿ ಕೊರೊನಾ ಸೋಂಕಿನ ಲಕ್ಷಣಗಳು ಈ ಮೊದಲ ಕೊವಿಡ್ ರೋಗಲಕ್ಷಣಕ್ಕಿಂತ ಭಿನ್ನವಾಗಿರಬಹುದು: ಅಧ್ಯಯನ