World No Tobacco Day: ವಿಶ್ವ ತಂಬಾಕು ರಹಿತ ದಿನ; ಪ್ರತಿ ವರ್ಷ 80 ಲಕ್ಷ ಜನ ತಂಬಾಕಿನಿಂದ ಸಾವು!

WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ವಿಶ್ವಾದ್ಯಂತ ತಂಬಾಕು ಸೇವನೆಯು ಪರಿಸರದ ಮೇಲೂ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ.

World No Tobacco Day: ವಿಶ್ವ ತಂಬಾಕು ರಹಿತ ದಿನ; ಪ್ರತಿ ವರ್ಷ 80 ಲಕ್ಷ ಜನ ತಂಬಾಕಿನಿಂದ ಸಾವು!
ವಿಶ್ವ ತಂಬಾಕು ದಿನImage Credit source: Hindustan Times
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 31, 2022 | 12:09 PM

ಇಂದು (ಮೇ 31) ವಿಶ್ವ ತಂಬಾಕು ರಹಿತ ದಿನ. ವಿಶ್ವಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 80 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 600,000,000 ಮರಗಳನ್ನು ಕತ್ತರಿಸಲಾಗುತ್ತದೆ, 84,000,000 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಗಾಳಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು 22,000,000,000 ಟನ್‌ಗಳಷ್ಟು ನೀರನ್ನು ಬಳಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ.

WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ವಿಶ್ವಾದ್ಯಂತ ತಂಬಾಕು ಸೇವನೆಯು ಪರಿಸರದ ಮೇಲೂ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕಿನಿಂದಾಗಿ ದೊಡ್ಡ ಪ್ರಮಾಣದ ಅರಣ್ಯನಾಶ ಮತ್ತು ವನ್ಯಜೀವಿ ಸೇರಿದಂತೆ ಜೀವವೈವಿಧ್ಯದ ನಷ್ಟ ಉಂಟಾಗಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. “ಗ್ರೀನ್​ ಹೌಸ್​ನ ಗ್ಯಾಸ್​ನ ಅತಿಯಾದ ಹೊರಸೂಸುವಿಕೆ, ಕುಡಿಯುವ ನೀರಿನ ಮಾಲಿನ್ಯ ಮತ್ತು ಹೊಗೆಯ ಮೂಲಕ ಗಾಳಿಯಲ್ಲಿ ವಿಷಕಾರಿಗಳ ಹೊರಸೂಸುವಿಕೆಯಂತಹ ಸವಾಲುಗಳನ್ನು ಎದುರಿಸಲಾಗುತ್ತಿದೆ” ಎಂದು ಡಬ್ಲುಹೆಚ್​ಓ ಹೇಳಿದೆ.

ಇದನ್ನೂ ಓದಿ: Anti Tobacco Day 2022: ಬೆಂಗಳೂರಿನಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್​ ಪ್ರಕರಣಗಳೆಷ್ಟು? ವೈದ್ಯರು ಕೊಟ್ಟ ವರದಿಯಲ್ಲೇನಿದೆ?

ಇದನ್ನೂ ಓದಿ
Image
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Image
Viral: ವಿಮಾನದ ಕಿಟಕಿ ಬಳಿ ಗುಟ್ಕಾ ಚಿತ್ತಾರ, ಥೂ ಅಸಹ್ಯ ಎಂದ ನೆಟ್ಟಿಗರಿಂದ ಟ್ರೋಲ್​ಗಳ ಸುರಿಮಳೆ
Image
ತಂಬಾಕು ಉತ್ಪನ್ನಗಳಿಗೆ ಜಿಎಸ್​ಟಿ, ಅಬಕಾರಿ ಸುಂಕ; ಕೇಂದ್ರ ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

2022ರಲ್ಲಿ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು 7 ಮಿಲಿಯನ್ ವ್ಯಕ್ತಿಗಳು ಜಾಗತಿಕವಾಗಿ ಧೂಮಪಾನದಿಂದ ಬಳಲುತ್ತಿದ್ದಾರೆ. ಇನ್ನೂ 1.2 ಮಿಲಿಯನ್ ಜನರು ಇತರರಿಂದ ಸೂಸುವ ಸಿಗರೇಟ್ ಹೊಗೆಯನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಧೂಮಪಾನವು ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಸೇರಿದಂತೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಇದರಲ್ಲಿ ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಇದ್ದು, ಇದು ಕ್ಷಯರೋಗ ಮತ್ತು ಕಣ್ಣಿನ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಪ್ರತಿ ವರ್ಷ, ತಂಬಾಕು ಸೇವನೆಯಿಂದ 8 ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂದು ವಿಶ್ವಸಂಸ್ಥೆಯು ಇಂದು ‘ವಿಶ್ವ ತಂಬಾಕು ರಹಿತ ದಿನ’ದ ಆಚರಣೆ ವೇಳೆ ಹೇಳಿದೆ. ಸಿಗರೇಟ್ ತುಂಡುಗಳು ಜೈವಿಕ ವಿಘಟನೀಯವಲ್ಲದ ಕಾರಣ, ಪರಿಸರವು ಮತ್ತಷ್ಟು ಅಪಾಯವನ್ನು ಎದುರಿಸುತ್ತಿದೆ. ಭೂಮಿಯ ಮತ್ತು ಜಲಚರ ಪರಿಸರ ವ್ಯವಸ್ಥೆಗಳ ಅವನತಿಗೆ ಕೂಡ ತಂಬಾಕು ಕಾರಣವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Tue, 31 May 22