ಲಾಕ್​ಡೌನ್​ ಮುಂದುವರಿಕೆಯ ಹಿಂದೆ ನನ್ನ ಹೆಂಡ್ತಿ ‘ಕೈವಾಡವಿದೆ’ ಅನ್ಸುತ್ತೆ! ಯಶ್​

ಸ್ಯಾಂಡಲ್​ವುಡ್​​ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಕೊರೊನಾದ ಆರ್ಭಟ ಹೆಚ್ಚಾಗಿರೋದ್ರಿಂದ ಮನೆಯಲ್ಲೇ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಎಲ್ಲೂ ಹೊರಹೋಗಲು ಬಯಸದೆ ಎರಡು ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ಕುಟುಂಬದವರೊಂದಿಗೆ ಎಂಜಾಯ್​ ಮಾಡ್ತಿದ್ದಾರೆ.

ಈ ಬಗ್ಗೆ ತಮಾಷೆಯಾಗಿ ತಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿರುವ ಯಶ್, ಸರ್ಕಾರ ಹೊಸ ಲಾಕ್‌ಡೌನ್ ನಿಯಮಗಳನ್ನು ಘೋಷಿಸಿದೆ. ಆದರೆ ಏಕೋ, ಏನೋ ಗೊತ್ತಿಲ್ಲ. ಇದರ ಹಿಂದೆ ನನ್ನ ಪತ್ನಿಯ ಕೈವಾಡವಿದೆ ಅಂತಾ ಅನಿಸುತ್ತಿದೆ ಎಂದು ಜೋಕ್​ ಹೊಡೆದಿದ್ದಾರೆ.

ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಬಾ, ವೀಕೆಂಡ್‌ನಲ್ಲಿ ಮನೆಯಲ್ಲೇ ಇರು ಎಂಬ ನಿಯಮಗಳಿಂದ ಮನೆಯಲ್ಲೇ ಕಾಲ ಕಳೆಯುವಂತೆ ಆಗಿದೆ. ಆದರೆ, ಇಂಥ ‘ಪತ್ನಿ ಸ್ನೇಹಿ’ ನಿಯಮಗಳು ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ’ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more