‘ಅಕಟಕಟ’! ಅರೇ.. ಹುಟ್ಟುಹಬ್ಬದ ದಿನವೇ ಏನಿದು ಯೋಗಿ?

ಜುಲೈ 6ರಂದು ಯೋಗಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಆದ್ರೆ ಹುಟ್ಟುಹಬ್ಬದ ದಿನವೇ ಅಕಟಕಟ ಅಂತಾ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ಯೋಗಿ ತಮ್ಮ ಬರ್ತ್​ ಡೇ ದಿನವೇ ಅಕಟಕಟ ಅಂದಿದ್ದೇಕೆ ? ಇದಕ್ಕಿದ್ದಂತೆ ಏನಾಯ್ತು ಯೋಗಿಗೆ ಅಂತಾ ನಿಮಗೂ ಡೌಟ್​ ಬಂದಿರಬಹುದು ಅಲ್ವಾ? ಬಟ್​ ಡೋಂಟ್​ ವರಿ!

ಅಸಲಿಗೆ, ಅಕಟಕಟ ಅನ್ನೋದು ಲೂಸ್ ಮಾದ ಯೋಗಿ ನಟಿಸ್ತಿರೋ ಹೊಚ್ಚ ಹೊಸ ಸಿನಿಮಾ. ಹುಟ್ಟುಹಬ್ಬದಂದೇ ತಮ್ಮ ಅಭಿಮಾನಿಗಳಿಗಾಗಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅಂದ ಹಾಗೆ, ‘ದಿ ಬೆಸ್ಟ್ ಆ್ಯಕ್ಟರ್’ ಅನ್ನೋ ಕಿರುಚಿತ್ರ ನಿರ್ದೇಶಿಸಿ ಎಲ್ಲರ ಪ್ರಶಂಸೆ ಗಿಟ್ಟಿಸಿಕೊಂಡಿರುವ ನಾಗರಾಜ್ ಸೋಮಯಾಜಿ ಈ ಹೊಸ ಸಿನಿಮಾದ ನಿರ್ದೇಶಕ.

ಇಂಟರೆಸ್ಟಿಂಗ್​ ವಿಷಯ ಅಂದ್ರೆ ನಾಗರಾಜ್ ಹೇಳಿದ ಅಕಟಕಟ ಕಥೆಯನ್ನ ಕೇಳಿದ ಯೋಗಿ ಬರೀ ಹತ್ತೇ ನಿಮಿಷದಲ್ಲಿ ಓಕೆ ಮಾಡಿಬಿಟ್ರಂತೆ. ಅದಕ್ಕೆ ಕಾರಣ ಸಿನಿಮಾದ ಸ್ಟೋರಿ ಅಷ್ಟು ಅದ್ಭುತವಾಗಿದ್ಯಂತೆ. ಈ ಸಿನಿಮಾ ಲೂಸ್ ಮಾದ ಯೋಗಿಯ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗಲಿದೆ. 100% ಕಮರ್ಷಿಯಲ್ ಌಂಡ್​ ಪಕ್ಕಾ ಎಂಟರ್ಟೈನರ್.

ಹುಟ್ಟುಹಬ್ಬದಂದೇ ಯೋಗಿ ಹಾಗೂ ನಿರ್ದೇಶಕ ನಾಗರಾಜ್ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಇನ್ನು, ಪೋಸ್ಟರ್ ನೋಡಿದ್ರೆ, ಮೆದುಳಿಗೇ ಜೋಕಾಲಿ ಹಾಕಿ ಜೀಕುತ್ತಿರುವ ದೃಶ್ಯ ಕಂಡುಬರುತ್ತೆ. ಹಾಗಾಗಿ, ಸಿನಿಮಾ ಹೇಗೆ ಮೂಡಿಬರಬಹುದು ಎಂಬ ಕುತೂಹಲ ಶುರುವಾಗಿದೆ.

Related Tags:

Related Posts :

Category:

error: Content is protected !!