ಆಗ್ರಾ ಹೆಸರು ಬದಲಾವಣೆಗೆ ಮುಂದಾಯ್ತಾ ಯೋಗಿ ಆದಿತ್ಯನಾಥ್ ಸರ್ಕಾರ?

ಜಗತ್​ ಪ್ರಸಿದ್ಧ ತಾಜ್​ ಮಹಲ್​ ಹೊಂದಿರೋ ಆಗ್ರಾ ನಗರದ ಹೆಸರು ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಆಗ್ರಾ ನಗರವನ್ನು ಆಗ್ರಾವನ ಅಂತಾ ಬದಲಾಯಿಸುವ ಕುರಿತು ಬಿಜೆಪಿಯ ಕೆಲ ನಾಯಕರು ಸಲಹೆ ನೀಡಿದ್ದಾರೆ.

ಬಿಜೆಪಿ ಕಟ್ಟಡ ಧ್ವಂಸ:
ಪಶ್ಚಿಮ ಬಂಗಾಳದ ಅಸಾನ್ ಸೋಲ್​ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಚೇರಿಯನ್ನ ದ್ವಂಸಗೊಳಿಸಿದ್ದಾರೆ. ಕಚೇರಿಯಲ್ಲಿ ಚೇರ್, ಬೇಂಚ್​ಗಳನ್ನೆಲ್ಲ ಪುಡಿ ಪುಡಿ ಮಾಡಿದ್ದು, ಹಾಗೆ ಬಿಜೆಪಿ ಬಾವುಟವನ್ನ ಹರಿದು ಹಾಕಿ, ಕಚೇರಿ ಕಟ್ಟಡವನ್ನೆಲ್ಲ ಧ್ವಂಸಗೊಳಿಸಿದ್ದಾರೆ.

ಕೆಮಿಕಲ್ ಫ್ಯಾಕ್ಟರಿ ಸ್ಪೋಟ:
ಹೈದರಾಬಾದ್​ನ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿಯ ವಿಭಿನ್ನ ಜಾಗೃತಿ:
ಮಧ್ಯಪ್ರದೇಶ ಇಂದೋರ್‌ನಲ್ಲಿ ಎಂಬಿಎ ವಿದ್ಯಾರ್ಥಿನಿ ಶುಬಿ ಜೈನ್ ಎಂಬ ವಿದ್ಯಾರ್ಥಿ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರಲ್ಲಿ ಜಾಗೃತಿ ಮೂಡಿಸಿದ್ದಾಳೆ. ಸಿಗ್ನಿಲ್ ಬಿದ್ದಾಗ ಡ್ಯಾನ್ಸ್ ಮಾಡ್ತಾ ಮಾಡ್ತಾ, ಕೈ ಮುಗಿದು ದಯವಿಟ್ಟು ಹೆಲ್ಮೆಟ್‌ ಬಳಸಿ ಅಂತ ಮನವಿ ಮಾಡಿದ್ದಾಳೆ.

ಪುಕ್ಕಲು ಪಾಕ್‌ನಿಂದ ಕ್ಷಿಪಣಿ ಪರೀಕ್ಷೆ:
ಭಾರತ ಅಗ್ನಿ-2 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸಹ ಕ್ಷಿಪಣಿ ಪರೀಕ್ಷೆ ನಡೆಸಿದೆ. ಪಾಪಿ ಪಾಕ್ ಶಾಹೀನ್-1 ಕ್ಷಿಪಣಿಯನ್ನು ಪರೀಕ್ಷೆ ನಡೆಸಿದೆ. ಭಾರತದ ಮೇಲೆ ಭಯದಿಂದ ತನ್ನ ಬಳಿಯೂ ಕ್ಷಿಪಣಿಗಳಿವೆ ಅನ್ನೋದನ್ನ ತೋರಿಸುತ್ತಿದೆ.

Related Posts :

Category:

error: Content is protected !!