ಹೆಲ್ಮೆಟ್‌ನಲ್ಲಿ ಬ್ರೌನ್ ಶುಗರ್ ಸಾಗಿಸುತ್ತಿದ್ದ ಆರೋಪಿ ಬಂಧನ, ಯಾವೂರಲ್ಲಿ?

ಬೆಂಗಳೂರು: ಡ್ರಗ್ಸ್​ ಬಳಕೆ ವಿರುದ್ಧ ರಾಜ್ಯದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರಲ್ಲೂ ಸಿಟಿ ಮಾರ್ಕೆಟ್​ಗೆ ಹೊಂದಿಕೊಂಡು ಕಚೇರಿ ಹೊಂದಿರುವ ಸಿಸಿಬಿ ಅಂತೂ ಹಗಲು ಇರುಳು ಡ್ರಗ್ಸ್​ ವಿರುದ್ಧ ಸಮರ ಸಾರಿದೆ. ಆದ್ರೆ ಸಿಸಿಬಿ ಕಚೇರಿಯ ಆಸುಪಾಸಿನಲ್ಲೇ ವ್ಯಕ್ತಿಯೊಬ್ಬ ರಾಜಾರೋಷವಾಗಿ ಬ್ರೌನ್ ಶುಗರ್ ಸಾಗಿಸುತ್ತಿರುವುದು ಕಂಡುಬಂದಿದೆ. ಅದೂ ಆಸಾಮಿ, ಹೆಲ್ಮೆಟ್​ನಲ್ಲಿ ಬ್ರೌನ್ ಶುಗರ್ ಇಟ್ಕೊಂಡು ಸಾಗಿಸಿದ್ದಾನೆ.

ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ವಿಕ್ರಮ್ ಖಿಲೇರಿ (25) ಎಂಬ ಯುವಕನನ್ನು ಬಂಧಿಸಿದ್ದಾರೆ. ಹೆಲ್ಮೆಟ್ ಒಳಗಿನ ಸ್ಪಾಂಜ್ ಅಡಿಯಲ್ಲಿಟ್ಟು ಬ್ರೌನ್ ಶುಗರ್ ಸಾಗಿಸುತಿದ್ದ ವೇಳೆ ಸಿಟಿ ಮಾರ್ಕೆಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧಿತನಿಂದ 90 ಗ್ರಾಂ ಬ್ರೌನ್ ಶುಗರ್, ಮೊಬೈಲ್ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಸಿಟಿ ಮಾರ್ಕೆಟ್ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Related Tags:

Related Posts :

Category: