ದನ ಮೇಯಿಸುತ್ತಿದ್ದ ಮಹಿಳೆ ತಲೆಗೆ ಹೊಡೆದು ಸರಗಳ್ಳತನ

ಹಾಸನ: ದನ ಮೇಯಿಸುತ್ತಿದ್ದ ಮಹಿಳೆ ತಲೆಗೆ ಹೊಡೆದು ಸರಗಳ್ಳತನ ಮಾಡಿರುವ ಘಟನೆ ಹಾಸನ ತಾಲೂಕಿನ ಶಂಕದಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಶಾರದಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲು ಮಾಂಗಲ್ಯ ಸರ ಕೀಳಲು ಆರೋಪಿ ಚಿಕ್ಕಕೊಂಡಕೊಳ್ಳ ಗ್ರಾಮದ ಚಂದನ್​ ಯತ್ನಿಸಿದ್ದಾನೆ. ಇದಕ್ಕೆ ಶಾರದಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾರದಮ್ಮಗೆ ಮರದ ತುಂಡಿನಿಂದ ಹಲ್ಲೆ ಮಾಡಿ ಸರ ಕಸಿದು ಆರೋಪಿ ಎಸ್ಕೇಪ್ ಆಗಿದ್ದಾನೆ. ಪರಾರಿಯಾಗುವ ಭರದಲ್ಲಿ ಬೈಕನ್ನು ಅಲ್ಲಿಯೇ ಬಿಟ್ಟಿದ್ದಾನೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಚಂದನ್​ನನ್ನು ಹಾಸನದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Related Tags:

Related Posts :

Category:

error: Content is protected !!