ಬೈಕ್​ಗೆ ಪೆಟ್ರೋಲ್​ ಹಾಕಿಸೋಕೆ ಹಣ ಕೊಡಲಿಲ್ಲ ಅಂತಾ.. ನೇಣಿಗೆ ಶರಣಾದ ಯುವಕ

ಬಿಬಿಎ ವ್ಯಾಸಂಗ ಮಾಡುತ್ತಿದ್ದ ಮೇಘರಾಜ್​ ಬೈಕ್​ಗೆ ಪೆಟ್ರೋಲ್​ ಹಾಕಿಸಲು ಹಣ ನೀಡುವಂತೆ ಮನೆಯಲ್ಲಿ ಕೇಳಿದ್ದಾನೆ. ಆದರೆ, ಪೋಷಕರು ದುಡ್ಡು ಕೊಡಲು ನಿರಾಕರಿಸಿದ ಕಾರಣ ಬೇಸತ್ತು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

  • TV9 Web Team
  • Published On - 23:08 PM, 14 Jan 2021
ಆತ್ಮಹತ್ಯೆಗೆ ಶರಣಾದ ಯುವಕ

ಶಿವಮೊಗ್ಗ: ಬೈಕ್​ಗೆ ಪೆಟ್ರೋಲ್​ ಹಾಕಿಸಲು ಪೋಷಕರು ಹಣ ನೀಡದದ್ದಕ್ಕೆ ಮನನೊಂದು ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ನಗರದ ಗೋಪಾಳ ಬಡಾವಣೆಯ ಮೇಘರಾಜ್​ (22) ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಿಬಿಎ ವ್ಯಾಸಂಗ ಮಾಡುತ್ತಿದ್ದ ಮೇಘರಾಜ್​ ಬೈಕ್​ಗೆ ಪೆಟ್ರೋಲ್​ ಹಾಕಿಸಲು ಹಣ ನೀಡುವಂತೆ ಮನೆಯಲ್ಲಿ ಕೇಳಿದ್ದಾನೆ. ಆದರೆ, ಪೋಷಕರು ದುಡ್ಡು ಕೊಡಲು ನಿರಾಕರಿಸಿದ ಕಾರಣಕ್ಕೆ ಬೇಸತ್ತು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.