ಹೋರಿ ಹಿಡಿಯಲು ಹೋದ ಯುವಕ ತಿವಿತಕ್ಕೆ ಬಲಿ

ನಿಷೇಧವಿದ್ದರೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಹೋರಿ ಹಬ್ಬ ನಡೆದಿತ್ತು.

  • ganapathi bhat
  • Published On - 18:01 PM, 24 Nov 2020
ಮೃತ ಯುವಕ ಚಂದ್ರು ಈರಕ್ಕನವರ

ಹಾವೇರಿ: ತಾಲ್ಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಹೋರಿ ತಿವಿದು ಯುವಕನೊಬ್ಬ ಮೃತಪಟ್ಟಿದ್ದಾನೆ.

ಮೃತನನ್ನು ರಾಣೆಬೆನ್ನೂರು ತಾಲ್ಲೂಕು ಅಸುಂಡಿ ಗ್ರಾಮದ ಚಂದ್ರು ಈರಕ್ಕನವರ (20) ಎಂದು ಗುರುತಿಸಲಾಗಿದೆ.

ನಿಷೇಧವಿದ್ದರೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಹೋರಿ ಹಬ್ಬ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.