ಜಯನಗರದಲ್ಲಿ ಗುಂಪು ಕಟ್ಕೊಂಡು ಸಿಗರೇಟ್‌ ಸೇವನೆ, ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ

ನೆಲಮಂಗಲ: ಗುಂಪು ಕಟ್ಕೊಂಡು ಸಿಗರೇಟ್‌ ಸೇದುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜಯನಗರದಲ್ಲಿ 25 ವರ್ಷದ ಅರುಣ್‌ ಕೊಲೆಗೀಡಾದ ಯುವಕ.

ಅರುಣ್​ನನ್ನು‌ ಚಾಕುವಿನಿಂದ ಇರಿದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್(22), ಇಮ್ರಾನ್(21), ಸುಝೈನ್(24) ಬಂಧಿತ ಆರೋಪಿಗಳು. ನೆಲಮಂಗಲ ಟೌನ್ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Related Tags:

Related Posts :

Category: