ಕಾಲು ಜಾರಿ ನದಿಗೆ ಬಿದ್ದ ಯುವತಿಯ ರಕ್ಷಣೆಗೆ ಯುವಕರ ತಂಡ ದೌಡು

ದಾವಣಗೆರೆ: ಕಾಲು ಜಾರಿ ನದಿಗೆ ಬಿದ್ದ ಯುವತಿಯನ್ನು ಯುವಕ ರಕ್ಷಿಸಿ ಜೀವ ಉಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹೊರವಲಯದ ತುಂಗಭದ್ರಾ ನದಿ ಸೇತುವೆ ಬಳಿ ನಡೆದಿದೆ.

ತುಂಗಭದ್ರ ನದಿ ವೀಕ್ಷಿಸಲು ಸೇತುವೆ ಮೇಲೆ ನಿಂತಿದ್ದ ಯುವತಿ‌ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಇದನ್ನ ಗಮನಿಸಿದ ಅಲ್ಲಿಯೇ ಸ್ನಾನ ಮಾಡುತ್ತಿದ್ದ ಡಿಶ್ ಬೀರಪ್ಪ ಹಾಗೂ ಇತರರು ಯುವತಿಯನ್ನು ರಕ್ಷಿಸಿದ್ದಾರೆ. ಮೀನುಗಾರರು ಬಳಸುವ ತೆಪ್ಪದಲ್ಲಿ ತೆರಳಿ ಯುವತಿಯ ಜೀವ ಉಳಿಸಿದ್ದಾರೆ.

ಯುವತಿಗೆ ಹೊನ್ನಾಳಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹೊನ್ನಾಳಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ನದಿಗೆ ಬಿದ್ದ ಯುವತಿ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

Related Tags:

Related Posts :

Category: