ಮಹಿಳೆಯರಿಗೆ ಅಶ್ಲೀಲ ಮೆಸೇಜು ಕಳಿಸುತ್ತಿದ್ದವನಿಗೆ ಧರ್ಮದೇಟು

ವಿವಾಹಿತೆ ಮಹಿಳೆಯರ ಮೊಬೈಲ್ ನಂಬರ್​ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿ ವಿಕೃತಾನಂದ ಅನುಭವಿಸುತ್ತಿದ್ದ ಒಬ್ಬ ಯುವಕನನ್ನು ಟ್ರ್ಯಾಪ್ ಮಾಡಿ ಧರ್ಮದೇಟು ನೀಡುವುದಲ್ಲದೆ ಅವನನ್ನು ಪೊಲೀಸರಿಗೊಪ್ಪಿಸಿದ ಘಟನೆ ಇಂದು ಮಡಿಕೇರಿ ನಗರದಲ್ಲಿ ನಡೆಯಿತು.

ವಿಕೃತ ಮನಸ್ಥಿತಿಯ ಯುವಕನನ್ನು ಮುದಾಸಿರ್ ಎಂದು ಗುರುತಿಸಲಾಗಿದ್ದು, ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ರೀಚಾರ್ಜ್​ ಮಾಡಿಸಿಕೊಳ್ಳಲು ಅಂಗಡಿಗೆ ಬರುತ್ತಿದ್ದ ಮಹಿಳೆಯರ ನಂಬರ್ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ಮುದಾಸಿರ್ ಕಳಿಸುತ್ತಿದ್ದ. ಫೇಸ್​ಬುಕ್​ನಲ್ಲೂ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕೆಟ್ಟ ಕೆಟ್ಟ ಮೆಸೇಜುಗಳನ್ನು ಕಳಿಸುತ್ತಿದ್ದನೆನ್ನಲಾಗಿದೆ.

ಮುದಾಸಿರ್​ನ ಕಾಟದಿಂದ ಬೇಸತ್ತ ನೊಂದ ಮಹಿಳೆಯರು ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅವನನ್ನು ಒಂದು ಸ್ಥಳಕ್ಕೆ ಉಪಾಯದಿಂದ ಕರೆಸಿಕೊಂಡ ಕಾರ್ಯಕರ್ತರು ಅಟ್ಟಾಡಿಸಿ ಥಳಿಸಿ ನಂತರ ಪೊಲೀಸರಿಗೊಪ್ಪಿಸಿದರು.

Related Tags:

Related Posts :

Category: