ಸಿಂಪಲ್ಲಾಗ್ ಒಂದು ಸೆಲ್ಫಿ ಪ್ಲೀಸ್.. ಕಾಡಾನೆ ಜೊತೆ ಯುವಕನ ಸಾಹಸ!

ಕೊಡಗು: ಈಗಿನ ಜನರೇಷನ್​ಗೆ ಸಾಹಸಮಯವಾಗಿ, ಡಿಫರೆಂಡ್ ಆಗಿ ಸೆಲ್ಫಿ ತೆಗೆಸಿಕೊಳ್ಳೋ ಕ್ರೇಜ್ ಇರುತ್ತೆ. ಅದಕ್ಕಾಗಿ ಏನೇನೂ ಸಾಹಸ ಮಾಡಿ ಸಂಕಟಕ್ಕೆ ಒಳಗಾಗರೋ ಹೆಚ್ಚು. ಅದೇ ರೀತಿ ಇಲ್ಲೊಬ್ಬ ಭೂಪ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ.

ಸೋಮವಾರಪೇಟೆ ತಾಲೂಕಿನ ಪೊನತ್ ಮೊಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕ ದಾರಿಯಲ್ಲಿ ಬರುತ್ತಿದ್ದ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಾಹಸ ಮಾಡಿದ್ದಾನೆ. ಸದ್ಯ ಈತನ ಸೆಲ್ಫಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಒಂಟಿ ಸಲಗ ದಾಳಿ ಮಾಡಬಹುದು ಎಂಬುವುದನ್ನೂ ಮರೆತು ಯುವಕ ಆನೆ ಜೊತೆ ತನ್ನ ವಿಡಿಯೋ ಮಾಡಿದ್ದಾನೆ. ಆನೆ ಬರೋ ದಾರಿಗೆ ಅಡ್ಡಲಾಗಿ ಓರ್ವ ನಿಂತರೆ ಮತ್ತೊಬ್ಬ ಆನೆ ಜೊತೆ ಸೆಲ್ಫಿ ವಿಡಿಯೋ ಮಾಡುವ ಸಾಹಸ ಮಾಡಿದ್ದಾರೆ. ಒಂಟಿ ಸಲಗ ದಾಳಿ ಮಾಡಿದ್ರೆ, ಅಪಾಯ ತಪ್ಪಿದ್ದಲ್ಲ. ಅದೃಷ್ಟವಶಾತ್ ಯುವಕನಿಗೆ ಯಾವುದೇ ತೊಂದರೆಗಳಾಗಿಲ್ಲ.

Related Tags:

Related Posts :

Category:

error: Content is protected !!