ತುಂಬಿ ಹರಿಯುತ್ತಿರೋ ನದಿಯಲ್ಲಿ ಬ್ರಿಡ್ಜ್ ಮೇಲಿಂದ ಜಿಗಿದು ಯುವಕರ ಹುಚ್ಟಾಟ

ಹಾವೇರಿ: ಭರಪೂರ ಹರಿಯೋ ನದಿ ನೀರಲ್ಲಿ ಯುವಕರು ಸೇತುವೆ ಮೇಲಿಂದ ಜಿಗಿದು ಹುಚ್ಚಾಟ ಮೆರೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿಯ ವರದಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಆದ್ರೆ ಗ್ರಾಮದ ಕೆಲ ಯುವಕರು ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡೋ ಮೂಲಕ ಹುಚ್ಚಾಟ ಪ್ರದರ್ಶಿಸಿದದ್ದಾರೆ. ನೆರಿದಿದ್ದ ಯುವಕರು ನೋಡ ನೋಡುತ್ತಿದ್ದಂತೆ ಬ್ರಿಡ್ಜ್ ಮೇಲಿಂದ ನದಿಯಲ್ಲಿ ಜಿಗಿದು ಈಜಿ ದಡ ಸೇರಿದ್ದಾರೆ.

ಸ್ವಲ್ಪ ಯಾಮಾರಿದ್ರೂ ಸಾಕು ಹುಚ್ಚಾಟ ಮೆರೆದ ಯುವಕರು ನೀರು ಪಾಲಾಗೋದು ಪಕ್ಕಾ. ಯಾಕಂದ್ರೆ ನದಿ ಹರಿಯುತ್ತಿದ್ದು ಕೊಚ್ಚಿ ಹೊದ್ರೆ ರಕ್ಷಣೆ ಮಾಡಲು ಸಾದ್ಯವಾಗದಷ್ಟು ನದಿ ವಿಶಾಲವಾಗಿದ್ದು ಸುತ್ತಲು ಜಾಲಿ ಮುಳ್ಳಿನ ಗಿಡಗಳಿವೆ.

ಯುವಕರ ಈ ಹುಚ್ಚಾಟಕ್ಕೆ ಹುರಿದುಂಬಿಸಿ ಕೆಲವು ಯುವಕರ ಸಾಥ್ ನೀಡಿದ್ದಾರೆ. ಬ್ರಿಡ್ಜ್ ಮೇಲೆ ನಿಂತು ನದಿಯಲ್ಲಿ ಜಿಗಿದು ಹುಚ್ಚಾಟ ಪ್ರದರ್ಶಿಸಿದ ಹಾಗೂ ಯುವಕರಿಗೆ ಪ್ರೋತ್ಸಾಹಿಸುತ್ತಿರುವ ಕೆಲ ಯುವಕರ ದೃಶ್ಯ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Related Tags:

Related Posts :

Category: