ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!

ಎಲ್ಲವೂ ಸರಿಯಾಗಿದ್ದಿದ್ರೆ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ.

ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ ಯುವರತ್ನ ಚಿತ್ರತಂಡ ಸೆಂಕೆಡ್ ಹಾಫ್ ಡಬ್ಬಿಂಗ್ ಅನ್ನ ಅರಂಭಿಸಿದೆ. ಈ ಸಂತಸದ ವಿಷಯವನ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್ ಹಾಗೂ ಅಪ್ಪು ಇಬ್ಬರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಾಜಕುಮಾರ ಬಳಿಕ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್ ಸಿನಿಮಾ ಯುವರತ್ನ. ಹೀಗಾಗಿ ಸಹಜವಾಗೇ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಇದೇ ವೇಳೆ ಕೊರೊನಾದಿಂದ ಥಿಯೇಟರ್​ಗಳು ಬಾಗಿಲು ಮುಚ್ಚಿವೆ. ಹಾಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೆ ಅಂತ ಸುದ್ದಿ ಹಬ್ಬಿತ್ತು. ಆದ್ರೆ ಚಿತ್ರತಂಡ ಇನ್ನೂ ಆರು ತಿಂಗಳಾದ್ರೂ ಯುವರತ್ನವನ್ನ ಚಿತ್ರಮಂದಿರದಲ್ಲೇ ರಿಲೀಸ್ ಮಾಡ್ತೀವಿ ಅಂತ ಹೇಳೊ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೀಗಾಗಿ ಕೊರೊನಾ ಬಿಕ್ಕಟ್ಟು ಮುಗಿದ ಕೂಡ್ಲೇ ಯುವರತ್ನ ಥಿಯೇಟರ್​ಗೆ ಅಪ್ಪಳಿಸೋದು ಗ್ಯಾರಂಟಿ.

Related Posts :

Category:

error: Content is protected !!

This website uses cookies to ensure you get the best experience on our website. Learn more