ಆನ್​ಲೈನ್ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ಕುಟುಂಬಕ್ಕೆ ಜಮೀರ್ ನೆರವಿನ ಹಸ್ತ

ಗದಗ: ತನ್ನ ಮಕ್ಕಳಿಗೆ ಆನ್​ಲೈನ್ ಶಿಕ್ಷಣಕ್ಕೆ ಸಹಾಯವಾಗಲೆಂದು ಕತ್ತಿನಲ್ಲಿದ್ದ ಚಿನ್ನದ ತಾಳಿಯನ್ನು ಅಡವಿಟ್ಟು, ಟಿವಿ ಖರೀದಿಸಿ ತಂದಿದ್ದ ತಾಯಿಯ ಮಹಾನ್ ತ್ಯಾಗವನ್ನು ಅರಿತ ಮಾಜಿ ಸಚಿವರೊಬ್ಬರು ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಮಕ್ಕಳ ಶಿಕ್ಷಣಕ್ಕೂ ಸಹಾಯ ನೀಡುವ ಭರವಸೆ
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಮಕ್ಕಳಿಗೆ ಆನ್​ಲೈನ್ ಶಿಕ್ಷಣಕ್ಕೆ ಸಹಾಯವಾಗಲೆಂದು ತಮ್ಮ ಕೊರಳಲ್ಲಿದ್ದ ತಾಳಿಯನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಟಿವಿಯನ್ನು ಖರೀದಿಸಿದ್ದರು. ಈ ಸುದ್ದಿಯನ್ನು ಟಿವಿ9  ಬಿತ್ತರಿಸಿತ್ತು.

ಟಿವಿ9 ವರದಿಗೆ ಸ್ಪಂದಿಸಿದ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಬಡ ಕುಟುಂಬಕ್ಕೆ 50,000 ರೂ ನಗದು ಹಣವನ್ನು ತಮ್ಮ ಆಪ್ತರ‌ ಮೂಲಕ ಬಡ ಕುಟುಂಬಕ್ಕೆ ತಲುಪಿಸಿದ್ದಾರೆ. ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಸಹಾಯ ನೀಡುವ ಭರವಸೆ ನೀಡಿದ್ದಾರೆ.

Related Tags:

Related Posts :

Category:

error: Content is protected !!