300 ಮಿಲಿಯನ್​ ಡಾಲರ್ ದೇಣಿಗೆ ನೀಡಿದ ಜುಕರ್‌ ಬರ್ಗ್ ದಂಪತಿ, ಉದ್ದೇಶವೇನು?

ಯು.ಎಸ್. ಚುನಾವಣಾ ಪ್ರಕ್ರಿಯೆ ವೇಳೆ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಸಹಾಯವಾಗುವಂತೆ, ಫೇಸ್‌ಬುಕ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ $ 300 ಮಿಲಿಯನ್ ಹಣವನ್ನು ದೇಣಿಗೆಯಾಗಿ ನೀಡಲಿದ್ದಾರೆ.

ಮತದಾನದ ಕೆಲಸಗಾರರನ್ನು ನೇಮಕ ಮಾಡಲು, ಮತದಾನದ ಸ್ಥಳಗಳನ್ನು ಬಾಡಿಗೆಗೆ ನೀಡಲು ಮತ್ತು ಮತದಾನದ ಕೆಲಸಗಾರರಿಗೆ PPE ಕಿಟ್‌ಗಳನ್ನು ಖರೀದಿಸಲು ಈ ಮೊತ್ತವನ್ನು ಎರಡು ಪಕ್ಷೇತರ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಜುಕರ್ ‌ಬರ್ಗ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಬಾರಿ ಅಮೇರಿಕಾದಲ್ಲಿ ಅಂಚೆ ಮೂಲಕವಾಗಿ ಐತಿಹಾಸಿಕ ಮಟ್ಟದ ಮತದಾನ ಇರುತ್ತದೆ. ಹಾಗಾಗಿ ಸಂಪರ್ಕ ರಹಿತ ಮತದಾನವನ್ನು ಬೆಂಬಲಿಸಲು ಮತದಾನದ ಕೆಲಸಗಾರರು ಮತ್ತು ಸಲಕರಣೆಗಳ ಅಗತ್ಯ ಹೆಚ್ಚಾಗಿರುತ್ತದೆ. ಆದರಿಂದ ಈ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

 

The US elections are just two months away, and with Covid-19 affecting communities across the country, I'm concerned…

Mark Zuckerberg यांनी वर पोस्ट केले गुरुवार, ३ सप्टेंबर, २०२०

Related Tags:

Related Posts :

Category: