ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಪಟ್ಟಣದ ನಡುರಸ್ತೆಯಲ್ಲೇ ವಿವಾಹಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದರಿಂದ ಪತಿ ವೆಂಕಟರೆಡ್ಡಿ ತನ್ನ ಪತ್ನಿ ಸುಮಿತ್ರಾಳನ್ನ ಲಾಂಗ್ನಿಂದ ಕೊಚ್ಚಿ, ಚಾಕುವಿನಿಂದ 22 ಬಾರಿ ಇರಿದು ಕೊಂದಿದ್ದ. ಈ ಸಂಬಂಧ ಇದೀಗ ಪೊಲೀಸರು ವೆಂಕಟರೆಡ್ಡಿಯನ್ನು ಅರೆಸ್ಟ್ ಮಾಡಿದ್ದಾರೆ.