ಸ್ಯಾಂಡಲ್ವುಡ್ನ ಜನಪ್ರಿಯ ನಟ ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇದೀಗ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಸೇರಿಕೊಂಡು ಇತ್ತೀಚೆಗೆ ವೈರಲ್ ಆಗುತ್ತಿರುವ ವಿಶೇಷ ಟ್ರೆಂಡ್ ಒಂದನ್ನು ಫಾಲೋ ಮಾಡಿ ಗಮನ ಸೆಳೆದಿದ್ದಾರೆ. ವೀಡಿಯೊದಲ್ಲಿ ನಟ ವಿಜಯ್ ರಾಘವೇಂದ್ರ ಹಾಗೂ ಅವರ ಸ್ನೇಹಿತರು ಸಾಲಾಗಿ ನಿಂತುಕೊಂಡು, ಹಿನ್ನೆಲೆಯಲ್ಲಿ ಬರುವ ಹಾಡಿಗೆ ತಕ್ಕಂತೆ ರಸವತ್ತಾಗಿ ಹಾಗೂ ತಮಾಷೆಯಾಗಿ ಎಕ್ಸ್ಪ್ರೆಷನ್ ನೀಡುತ್ತಾ ಲಿಪ್-ಸಿಂಕ್ ಮಾಡಿದ್ದಾರೆ. ಸಾಲಿನಲ್ಲಿ ನಿಂತ ಪ್ರತಿಯೊಬ್ಬರೂ ಸರದಿಯಂತೆ ಕ್ಯಾಮೆರಾಗೆ ನೀಡುವ ಫನ್ನಿ ರಿಯಾಕ್ಷನ್ಗಳು ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಂತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.