ಅಮೆರಿಕದ ಟೆಕ್ಸಾಸ್ನಲ್ಲಿ ನಡೆದ ಕಾಲೇಜು ಫುಟ್ಬಾಲ್ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಸಾಹಸ ಪ್ರದರ್ಶನದ ವೇಳೆ ಹಗ್ಗದ ಮೂಲಕ ಇಳಿಯುತ್ತಿದ್ದ ಯುಎಸ್ ಏರ್ ಫೋರ್ಸ್ನ ಯೋಧರೊಬ್ಬರು ಸುಮಾರು 170 ಅಡಿ ಎತ್ತರದಿಂದ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್ನ ಸ್ಯಾನ್ ಆಂಟೋನಿಯೊದಲ್ಲಿರುವ 'ಅಲಮೋಡೋಮ್' ಸ್ಟೇಡಿಯಂನಲ್ಲಿ ಶನಿವಾರ ಈ ದುರ್ಘಟನೆ ಸಂಭವಿಸಿದೆ.