ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಬಡ್ಡಿ ಹಣದ ವಿಚಾರಕ್ಕೆ ಸ್ನೇಹಿತರೇ ಗೆಳೆಯ ಹನುಮಂತಪ್ಪ (38) ನನ್ನು ಭೀಕರವಾಗಿ ಕೊಂದು ಹಾಕಿದ್ದಾರೆ. ನಾಪತ್ತೆಯಾಗಿದ್ದ ಹನುಮಂತಪ್ಪನ ಪತ್ನಿ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಒಂದು ಲಕ್ಷ ರೂಪಾಯಿ ಬಡ್ಡಿ ಹಣದ ವಿವಾದಕ್ಕಾಗಿ ಹತ್ಯೆ ಮಾಡಿ, ದೇಹಕ್ಕೆ ಪೆಟ್ರೋಲ್ ಸುಟ್ಟು ಹಾಕಿದ್ದಾರೆ ಎಂಬುದು ಬಯಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.