ಬೆಂಗಳೂರಿನಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ನಾಗವಾರ ರಸ್ತೆಯ ಮ್ಯಾನ್ಪೋ ಕನ್ವೆನ್ಷನ್ ಸೆಂಟರ್ ಜಲಾವೃತಗೊಂಡು ಈಜುಕೊಳದಂತಾಗಿದೆ. ಮಳೆ ನೀರು ನುಗ್ಗಿ ಕನ್ವೆನ್ಷನ್ ಸೆಂಟರ್ನಲ್ಲಿನ ಪೀಠೋಪಕರಣಗಳಿಗೆ ಹಾನಿಯಾಗಿವೆ. ಮಳೆ ನೀರಿನ ಜೊತೆಗೆ ರಾಜಕಾಲುವೆ ನೀರು ನುಗ್ಗಿ ಪ್ರವಾಹದ ಸ್ಥಿತಿ ಸೃಷ್ಟಿಯಾಗಿದೆ.