ರೋಡ್ ರೇಜ್ಗೆ ದಂಪತಿ ಬೆಚ್ಚಿಬಿದ್ದ ಘಟನೆ ಬುಧವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಕಸವನಹಳ್ಳಿ ಅಮೃತ ಕಾಲೇಜು ಬಳಿ ನಡೆದಿದೆ. ಪುಂಡರು ಕಾರು ಅಡ್ಡಗಟ್ಟಿ ದಂಪತಿಗೆ ಆವಾಜ್ ಹಾಕಿ ಕಲ್ಲು ತೂರಾಟ ಮಾಡಿದ್ದಾರೆ. ದಂಪತಿ 5 ವರ್ಷದ ಮಗು ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.