ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿ. ವೈ. ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ತಮ್ಮ ತಂದೆಯನ್ನೇ ಸಿಡಿ ಮಾಡಿ ಬ್ಲಾಕ್ಮೇಲ್ ಮಾಡುತ್ತಾರೆ ಎಂದು ಆರೋಪಿಸಿದ ಯತ್ನಾಳ್, ಅವರನ್ನು ನಾಲಾಯಕ್ ಎಂದು ಜರೆದಿದ್ದಾರೆ. ಸಾರ್ವಜನಿಕವಾಗಿ ಗೌರವ ತೋರಿಸಿ, ಮನೆಯಲ್ಲಿ ಅಪಮಾನಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.