ಬೆಂಗಳೂರಿನ ಗೊಟ್ಟಿಗೆರೆಯ ಗುರು ಗ್ರೀನ್ಸ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಚಂದ್ರ ಎಂಬ 42 ವರ್ಷದ ವ್ಯಕ್ತಿ ಆಹಾರ ಸೇವಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ಮೂಲದ ಇವರು ಕುಸಿದು ಬಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ದಿಢೀರ್ ಹೃದಯಾಘಾತದ ಕುರಿತು ಆತಂಕ ಮೂಡಿಸಿದೆ.